ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್2023ರ ನಿನ್ನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 27 ರನ್‌ಗಳ ಗೆಲುವು ದಾಖಲಿಸಿತು. ಇಲ್ಲಿಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡ ನೀಡಿದ್ದ 219 ರನ್‌ಗಳ ಗುರಿ ತಲುಪುವಲ್ಲಿ ಗುಜರಾತ್ ವಿಫಲವಾಯಿತು. 20 ಓವರ್‌ಗಳಲ್ಲಿ 191 ರನ್‌ಗಳಿಸಲಷ್ಟೇ ಶಕ್ತವಾಯಿತು. ಮುಂಬೈ 27 ರನ್‌ಗಳ ಜಯ ಸಾಧಿಸಿತು.
ಗುಜರಾತ್ ತಂಡ 108 ರನ್‌ಗಳಿಗೆ ಪ್ರಮುಖ 8 ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ, ಮುಂಬೈ ಭಾರಿ ಅಂತರದಿಂದ ಗೆಲುವು ಸಾಧಿಸುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ರಶೀದ್ ಖಾನ್ ಮುಂಬೈನ ನಿರೀಕ್ಷೆ ಹುಸಿಗೊಳಿಸಿದರು. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಅವರು ಮುಂಬೈ ಬೌಲರ್‌ಗಳ ಎಸೆತವನ್ನು ಸಮರ್ಥವಾಗಿ ಎದುರಿಸಿ ಬೌಂಡರಿಗಳ ಸುರಿಮಳೆಯನ್ನೇ ಹರಿಸಿದರು. 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 10 ಸಿಕ್ಸರ್ ನೆರವಿನಿಂದ 79 ರನ್ಗಳಿಸಿದರು. ಅಲ್ಜಾರಿ ಜೋಸೆಫ್ ಅವರೊಂದಿಗೆ ಎಂಟನೇ ವಿಕೆಟ್‌ಗೆ 88 ರನ್‌ಗಳ ಜೊತೆಯಾಟವನ್ನು ಆಡಿದರು. ತಂಡ ಆಲೌಟ್ ಆಗಲು ಬಿಡದ ರಾಶೀದ್ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಏಕಾಂಗಿಯಾಗಿ ಹೋರಾಟ ಮುಂದುವರಿಸಿದರು.
ರಾಶೀದ್ ಖಾನ್ರ ವಿಕೆಟ್ ಪಡೆಯಲು ಮುಂಬೈ ಬೌಲರ್ಗಳು ಎಷ್ಟೇ ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಮೈದಾನದಲ್ಲಿ ಸಿಕ್ಸರ್ಗಳ ಸುರಿಮಳೆಯನ್ನೇ ಹರಿಸಿದ ರಶೀದ್ರ ಆಟಕ್ಕೆ ಬೇಕ್ರ್ ಹಾಕುವಲ್ಲಿ ಬೌಲರ್ಗಳು ವಿಫಲವಾದರು. 8 ವಿಕೆಟ್ ಕಳೆದುಕೊಂಡು 108ರಲ್ಲಿದ್ದ ಗುಜರಾತ್ ತಂಡವನ್ನು ಏಕಾಂಗಿ ಹೋರಾಟದಿಂದ 20 ಓವರ್‌ಗಳಲ್ಲಿ 191ಕ್ಕೆ ಕೊಂಡೊಯ್ದರು. ಇದಕ್ಕೂ ಮುನ್ನ ಬೌಲಿಂಗ್ನಲ್ಲೂ 4 ವಿಕೆಟ್ ಪಡೆದಿದ್ದ ರಶೀದ್ ಬ್ಯಾಟ್ನಲ್ಲೂ ಮಿಂಚಿದ್ದು ಈ ಪಂದ್ಯದ ಹೈಲೈಟ್ ಆಟಗಾರ ಎನಿಸಿಕೊಂಡರು.