ದುಬೈ :ಇದೇ ತಿಂಗಳ ಅಕ್ಟೋಬರ್ 17ರಿಂದ ಆರಂಭಗೊಳ್ಳಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದೆ. ತಂಡದಲ್ಲಿ ಆರಂಭಿಕ ಸ್ಥಾನಕ್ಕಾಗಿ ಇಶಾನ್ ಕಿಶನ್ ಆಯ್ಕೆಯಾಗಿದ್ದಾರೆ.
ಆದರೆ, ಐಪಿಎಲ್ನಲ್ಲಿ ಅವರ ಕಳಪೆ ಬ್ಯಾಟಿಂಗ್ನಿಂದಾಗಿ ಅನೇಕ ರೀತಿಯ ಟೀಕೆಗೆ ಗುರಿಯಾಗಿದ್ದರು. ಆದರೆ, ಇದೀಗ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿರುವ ಈ ಪ್ಲೇಯರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಸನ್ರೈಸರ್ಸ್ ವಿರುದ್ಧ ಇಶಾನ್ ಕಿಶನ್ ಅಬ್ಬರ ದುಬೈನಲ್ಲಿ ಆರಂಭಗೊಂಡಿದ್ದ 14ನೇ ಆವೃತ್ತಿ ದ್ವಿತೀಯಾರ್ಧದ ಐಪಿಎಲ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ಇಶಾನ್ ಕಿಶನ್, ಆಡಿರುವ 8 ಪಂದ್ಯಗಳಿಂದ ಕೇವಲ 107 ರನ್ಗಳಿಕೆ ಮಾಡಿ ಟೀಕೆಗೆ ಗುರಿಯಾಗಿದ್ದರು. ಹೀಗಾಗಿ, ಮುಂಬೈ ತಂಡ ಆಡುವ 11ರ ಬಳಗದಿಂದ ಅವರನ್ನ ಕೈಬಿಟ್ಟಿತ್ತು.
ಇದಾದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿದಿದ್ದ ವೇಳೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ನಿರಾಶೆಗೊಳಗಾಗಿದ್ದ ಕಿಶನ್, ವಿರಾಟ್ ಕೊಹ್ಲಿ ಎದುರು ಕಣ್ಣೀರು ಹಾಕಿದ್ದ ಘಟನೆಯೂ ಸಹ ನಡೆದಿತ್ತು. ಈ ವೇಳೆ ಧೈರ್ಯ ತುಂಬಿದ್ದ ವಿರಾಟ್, ಟಿ-20 ವಿಶ್ವಕಪ್ ತಂಡದಲ್ಲಿ ಒಪನರ್ ಆಗಿ ಆಯ್ಕೆಯಾಗಿದ್ದೀಯಾ..
ಪ್ರತಿ ಪರಿಸ್ಥಿತಿ ಎದುರಿಸಲು ಸಿದ್ಧನಾಗಬೇಕು. ಕಲಿಯಲು ಇದು ಉತ್ತಮ ವೇದಿಕೆ. ವಿಶ್ವಕಪ್ನಲ್ಲಿ ಇಂತಹ ತಪ್ಪುಗಳು ನಡೆಯಬಾರದು ಎಂಬ ಮಾತು ಹೇಳಿದ್ದರಂತೆ. ಜೊತೆಗೆ ಮುಂಬರುವ ವಿಶ್ವಕಪ್ ಟೂರ್ನಿಗೆ ನೀನು ಆರಂಭಿಕನಾಗಿ ಆಯ್ಕೆಯಾಗಿದ್ದೀಯಾ.. ಅದಕ್ಕಾಗಿ ಸಿದ್ಧನಾಗಬೇಕು ಎಂದು ಅವರು ತಿಳಿಸಿದ್ದರು ಎಂದು ಕಿಶನ್ ಖುದ್ದಾಗಿ ಹೇಳಿಕೊಂಡಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪ್ರಶಸ್ತಿ ಗೆದ್ದ ಇಶನ್ ಇಶನ್ ವಿರಾಟ್ ಮಾತಿನಿಂದ ಸ್ಫೂರ್ತಿ ಪಡೆದ ಇಶಾನ್ ಕಿಶನ್ ನಂತರದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ 50 ರನ್ ಸಿಡಿಸಿ ಮಿಂಚುವ ಮೂಲಕ ಇದೀಗ ತಾನು ವಿಶ್ವಕಪ್ಗೆ ಸಿದ್ಧನಾಗಿದ್ದೇನೆ ಎಂಬ ಸಂದೇಶವನ್ನೂ ನೀಡಿದ್ದಾರೆ.