ಕರ್ನಾಟಕ

karnataka

ETV Bharat / sports

ರೋಹಿತ್ ಶರ್ಮಾ ನಾಯಕತ್ವಕ್ಕೆ 10 ವರ್ಷ: ಮುಂಬೈ ಇಂಡಿಯನ್ಸ್​ನಿಂದ ವಿಶೇಷ ಟ್ವಿಟ್​​ - ETV Bharath Kannada news

ರೋಹಿತ್ ಶರ್ಮಾ ಮುಂಬೈ ತಂಡದ ನಾಯಕತ್ವ ವಹಿಸಿಕೊಂಡು 10 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ನಾಳೆ ರಾಜಸ್ಥಾನದ ವಿರುದ್ಧ ನಡೆಯಲಿರುವ ಪಂದ್ಯ ಹಿಟ್​ ಮ್ಯಾನ್​ಗೆ ವಿಶೇಷವಾಗಿರಲಿದೆ.

Etv Bharat
Etv Bharat

By

Published : Apr 29, 2023, 5:14 PM IST

ಮುಂಬೈ (ಮಹಾರಾಷ್ಟ್ರ):ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡ ತನ್ನ ನಾಯಕ ರೋಹಿತ್ ಶರ್ಮಾಗೆ ವಿಶೇಷ ಉಡುಗೊರೆ ನೀಡಲು ಸಿದ್ಧತೆ ನಡೆಸಿದೆ. ಏಪ್ರಿಲ್ 30 ರಂದು ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ ನ 42 ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶೇಷ ಸಾಧನೆ ಮಾಡಲಿದ್ದಾರೆ. ಈ ದಿನ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ನಾಯಕತ್ವದ 10 ವರ್ಷಗಳನ್ನು ಪೂರೈಸಲಿದ್ದಾರೆ. ಈ ಸಂದರ್ಭದಲ್ಲಿ, ಮುಂಬೈ ಇಂಡಿಯನ್ಸ್​ ತಂಡವು ಕೆಲವು ವಿಶೇಷ ಯೋಜನೆಗಳನ್ನು ಮಾಡುತ್ತಿದೆ.

ಮುಂಬೈ ಇಂಡಿಯನ್ಸ್ ತಂಡವನ್ನು ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಎಂದು ಕರೆಯಲಾಗುತ್ತದೆ. ಏಕೆಂದರೆ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್‌ನಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದೆ. ಈ ಸಂದರ್ಭದಲ್ಲಿ, ಈ ತಂಡವು ಗೆದ್ದ ಎಲ್ಲಾ 5 ಟ್ರೋಫಿಗಳೊಂದಿಗೆ ರೋಹಿತ್ ಶರ್ಮಾ ಅವರ ಚಿತ್ರವನ್ನು ಹಂಚಿಕೊಂಡಿದೆ.

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ರೋಹಿತ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ರೋಹಿತ್ ಶರ್ಮಾ ನಾಗ್ಪುರದ ನಿವಾಸಿಯಾಗಿದ್ದು, ಬಲಗೈ ಬ್ಯಾಟಿಂಗ್ ಮತ್ತು ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ಅವರು 2008 ರಲ್ಲಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. 2013ರಲ್ಲಿ ಮುಂಬೈ ಇಂಡಿಯನ್ಸ್​ನ ನಾಯಕತ್ವ ವಹಿಸಿಕೊಂಡಿದ್ದಾರೆ.

ರೋಹಿತ್ ಶರ್ಮಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇದುವರೆಗೆ 234 ಪಂದ್ಯಗಳನ್ನು ಆಡಿದ್ದಾರೆ ಮತ್ತು 30.15 ರ ಸರಾಸರಿಯಲ್ಲಿ 6060 ರನ್ ಗಳಿಸಿದ್ದಾರೆ. ಅವರು 1 ಶತಕ ಮತ್ತು 41 ಅರ್ಧಶತಕಗಳನ್ನು ಗಳಿಸಿದ್ದಾರೆ. ಅಜೇಯ 109 ಅವರ ಐಪಿಎಲ್​ ವೃತ್ತಿ ಜೀವನದ ಗರಿಷ್ಠ ಸ್ಕೋರ್ ಆಗಿದೆ. ರೋಹಿತ್ ಶರ್ಮಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 539 ಬೌಂಡರಿಗಳು ಮತ್ತು 250 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

2023 ರ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು 16.00 ಕೋಟಿ ರೂ.ಗೆ ಖರೀದಿಸಿದೆ. ಈ ವರ್ಷ ಆರಂಭವಾದ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡ ಚೊಚ್ಚಲ ಆವೃತ್ತಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಹೀಗಾಗಿ ರೋಹಿತ್​ ನಾಯಕತ್ವದಲ್ಲಿ ಈ ವರ್ಷ ಆರನೇ ಕಪ್​ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್​ ಕಳಪೆ ಆರಂಭ ಕಂಡಿತು. ಮೊದಲ ಎರಡು ಪಂದ್ಯಗಳನ್ನು ಸೋತು ತನ್ನ ಈ ವರ್ಷದ ಅಭಿಯಾನವನ್ನು ಆರಂಭಿಸಿತು. ನಂತರ ಮೂರು ಪಂದ್ಯಗಳನ್ನು ಗೆದ್ದು ಮತ್ತೆ ಎರಡರಲ್ಲಿ ಸೋಲು ಕಂಡಿದೆ. ನಾಳೆ ಸಂಜೆ ರಾಜಸ್ಥಾನದ ವಿರುದ್ಧ ತವರಿನಲ್ಲಿ ಸೆಣಸಾಡುತ್ತಿದ್ದು, ಗೆಲುವು ಮುಂಬೈಗೆ ಅಗತ್ಯವಾಗಿದೆ. ಈವರೆಗೆ ಆಡಿರುವ 7 ಪಂದ್ಯದಲ್ಲಿ ಕೇವಲ ಮೂರನ್ನು ಮಾತ್ರ ಗೆದ್ದಿದ್ದು, 6 ಅಂಕದಿಂದ ಪಾಯಿಂಟ್​ ಟೇಬಲ್​ನಲ್ಲಿ 8ನೇ ಸ್ಥಾನದಲ್ಲಿದೆ.

ಇದನ್ನೂ ಓದಿ:IPLನಲ್ಲಿ ಇಂದು: ಹ್ಯಾಟ್ರಿಕ್​ ಗೆಲುವಿಗೆ ಡೆಲ್ಲಿ ಪ್ರಯತ್ನ.. 3 ಸೋಲಿನ ನಡುವೆ ಜಯದ ಹುಡುಕಾಟದಲ್ಲಿ ಹೈದರಾಬಾದ್​

ABOUT THE AUTHOR

...view details