ಕರ್ನಾಟಕ

karnataka

ETV Bharat / sports

ಫಸ್ಟ್​​ ಮ್ಯಾಚ್​ ಗೆಲ್ಲುವುದಕ್ಕಿಂತ ಐಪಿಎಲ್​‌ ಟ್ರೋಫಿ ಗೆಲ್ಲುವುದೇ ನಮಗೆ ಮುಖ್ಯ: ರೋಹಿತ್ ಶರ್ಮಾ - ಪಂದ್ಯ 1

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್‌ ಅವರ ಮಾಸ್ಟರ್‌ಕ್ಲಾಸ್ ಬ್ಯಾಟಿಂಗ್​ ಹಾಗೂ ಹರ್ಷಲ್ ಪಟೇಲ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಆರ್​ಸಿಬಿ, ಮುಂಬೈ ಇಂಡಿಯನ್ಸ್ ತಂಡವನ್ನು ಎರಡು ವಿಕೆಟ್‌ಗಳಿಂದ ಸೋಲಿಸಿತು.

Rohit Sharma
Rohit Sharma

By

Published : Apr 10, 2021, 5:00 AM IST

Updated : Apr 10, 2021, 9:20 AM IST

ಚೆನ್ನೈ:ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಸೋತ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್ ಶರ್ಮಾ, 'ಆರಂಭಿಕ ಪಂದ್ಯ ಗೆಲ್ಲುವುದಕ್ಕಿಂತ ಟೂರ್ನಿ ಗೆಲ್ಲುವುದೇ ನಮಗೆ ಅತ್ಯಂತ ಮಹತ್ವದ್ದು' ಎಂದರು.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್‌ ಅವರ ಮಾಸ್ಟರ್‌ಕ್ಲಾಸ್ ಬ್ಯಾಟಿಂಗ್​ ಹಾಗೂ ಹರ್ಷಲ್ ಪಟೇಲ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಆರ್​ಸಿಬಿ, ಮುಂಬೈ ಇಂಡಿಯನ್ಸ್ ತಂಡವನ್ನು ರೋಚಕ ಎರಡು ವಿಕೆಟ್‌ಗಳಿಂದ ಸೋಲಿಸಿತು.

ಇದನ್ನೂ ಓದಿ: ಎಬಿಡಿ ಸ್ಫೋಟಕ ಬ್ಯಾಟಿಂಗ್​ಗೆ ಬೆಚ್ಚಿದ ಹಾಲಿ ಚಾಂಪಿಯನ್ಸ್ ಮುಂಬೈ: RCBಗೆ ರೋಚಕ ಜಯ

ಐಪಿಎಲ್​ ಟ್ರೋಫಿ ಗೆಲ್ಲುವುದು ಮುಖ್ಯ, ಮೊದಲ ಪಂದ್ಯವಲ್ಲ ಎಂದು ನಾನು ಬಾವಿಸುತ್ತೇನೆ. ಇದೊಂದು ದೊಡ್ಡ ಹೋರಾಟ. ನಾವು ಇದನ್ನು ಸುಲಭವಾಗಿ ಕೈತಪ್ಪಲು ಬಿಡಲಿಲ್ಲ. ಟಾರ್ಗೆಟ್​ ನೀಡಿದ್ದ ಸ್ಕೋರ್ ನಮಗೆ ಸಂತೋಷ ನೀಡಿಲ್ಲ. ನಿಗದಿತ ಗುರಿಯಲ್ಲಿ 20 ರನ್​ಗಳ ಅಭಾವ ಕಂಡು ಬಂತು ಎಂದು ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ ಹೇಳಿದರು.

ನಾವು ಕೆಲವು ತಪ್ಪುಗಳನ್ನು ಮಾಡಿದ್ದೇವೆ, ಅವೆಲ್ಲಾ ತಿಳಿಯದೆ ಸಂಭವಿಸಿವೆ. ನಾವು ಇಲ್ಲಿಂದ ಮುಂದಕ್ಕೆ ಹೋಗಬೇಕಾಗಿದೆ. (ಜಾನ್ಸೆನ್) ಖಂಡಿತವಾಗಿಯೂ ನಾವು ಗುರುತಿಸಿರುವ ಪ್ರತಿಭಾನ್ವಿತ ಆಟಗಾರ. ಕೊನೆಯ ನಾಲ್ಕು ಓವರ್​ಗಳ ವೇಳೆ ಎಬಿ ಮತ್ತು ಕ್ರಿಶ್ಚಿಯನ್ ಬ್ಯಾಟಿಂಗ್ ಮಾಡುತ್ತಿದ್ದರು. ಅವರನ್ನು ಹೊರ ಹಾಕುವ ಪ್ರಯತ್ನವಾಗಿ ಬುಮ್ರಾ ಮತ್ತು ಬೌಲ್ಟ್ ಅವರ ಕೈಗೆ ಬಾಲ್​ ನೀಡಿದ್ದೇವು ಎಂದರು.

ಖಂಡಿತವಾಗಿಯೂ ಇದು ಬ್ಯಾಟಿಂಗ್ ಮಾಡಲು ಸುಲಭವಾದ ಪಿಚ್ ಅಲ್ಲ. ಇಲ್ಲಿ ನಮ್ಮ ಮುಂದಿನ ಕೆಲವು ಪಂದ್ಯಗಳ ಬಗ್ಗೆ ನಾವು ಯೋಚಿಸಬೇಕಿದೆ. ಡಿವಿಲಿಯರ್ಸ್ ಚೆನ್ನಾಗಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು ಎಂದು ರೋಹಿತ್ ಹೇಳಿದರು.

Last Updated : Apr 10, 2021, 9:20 AM IST

ABOUT THE AUTHOR

...view details