ನವದೆಹಲಿ: ಐಪಿಎಲ್ 2023ರ 63ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಜಯಗಳಿಸಿದ ನಂತರ ನಾಯಕ ಕೃನಾಲ್ ಪಾಂಡ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಕೃನಾಲ್ ಪಾಂಡ್ಯ ತಮ್ಮ ತಂಡವನ್ನು ಗೆಲ್ಲಿಸಲು ಶ್ರಮಿಸಿದರು ಮತ್ತು ಯಶಸ್ವಿಯೂ ಆದರು. ಏಕಾನಾ ಕ್ರೀಡಾಂಗಣದಲ್ಲಿ ಲಕ್ನೋ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯ ಉಭಯ ತಂಡಗಳಿಗೆ ಪ್ಲೇ ಆಫ್ ಪ್ರವೇಶಕ್ಕೆ ಅತ್ಯಂತ ಮಹತ್ವದ್ದಾಗಿತ್ತು. ಕೃನಾಲ್ ಪಾಂಡ್ಯ ಅದರ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡರು ಮತ್ತು ಗಾಯ ಸಮಸ್ಯೆಯ ನಡುವೆಯೂ ತಂಡಕ್ಕಾಗಿ ತಮ್ಮ ಆಟವನ್ನು ಮುಂದುವರೆಸಿದರು. ಇದರ ಫಲವಾಗಿ ಮುಂಬೈ ವಿರುದ್ಧ 5 ರನ್‌ಗಳ ಗೆಲುವು ದಾಖಲಿಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಟ್ವಿಟರ್ ಹ್ಯಾಂಡಲ್‌ನಿಂದ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಕೃನಾಲ್ ಪಾಂಡ್ಯ ಮತ್ತು ಮಾರ್ಕಸ್ ಸ್ಟೋಯ್ನಿಸ್ ಪರಸ್ಪರ ಮಾತನಾಡುತ್ತಿರುವುದನ್ನು ಕಾಣಬಹುದು. ಪಂದ್ಯವನ್ನು ಗೆದ್ದ ನಂತರ ಕೃನಾಲ್‌ಗೆ ಹೇಗೆ ಅನಿಸುತ್ತಿದೆ ಎಂದು ಸ್ಟೋಯ್ನಿಸ್ ಕೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಕೃನಾಲ್ ಜವಾಬ್ದಾರಿಯುತ ಮಾತೊಂದನ್ನು ಹೇಳಿದ್ದಾರೆ. ಈ ಪಂದ್ಯವನ್ನು ಗೆಲ್ಲುವುದು ತಮ್ಮ ತಂಡಕ್ಕೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಈ ಗೆಲುವು ಲಕ್ನೋಗೆ ಪ್ಲೇಆಫ್ ಹಾದಿ ಸುಲಭವಾಗಿಸಿದೆ. ಗಾಯದ ನೋವು ಅನುಭವಿಸಿದರೂ ಆಟವಾಡುವುದನ್ನು ನಿಲ್ಲಿಸದೇ ಆಟಗಾರರಿಗೆ ಕೃನಾಲ್ ಟಿಪ್ಸ್ ನೀಡುತ್ತಿದ್ದರು. ಈ ಪಂದ್ಯದಲ್ಲಿ ಕೃನಾಲ್ ಕೇವಲ ಒಂದು ರನ್‌ನಿಂದ ಅರ್ಧಶತಕ ವಂಚಿತರಾದರು. 49 ರನ್ ಗಳಿಸಿದ್ದಾಗ ಕೃನಾಲ್ ಗಾಯಗೊಂಡು ನಿವೃತ್ತರಾದರು. ಈ ಪಂದ್ಯದಲ್ಲಿ ಕೃನಾಲ್ ಅವರು ಮಾರ್ಕಸ್ ಸ್ಟೋಯ್ನಿಸ್ ಅವರೊಂದಿಗೆ 59 ಎಸೆತಗಳಲ್ಲಿ 89 ರನ್‌ಗಳ ಜೊತೆಯಾಟ ಮಾಡಿ ತಂಡ ಸಂಕಷ್ಟದಲ್ಲಿದ್ದಾಗ ವಿಕೆಟ್ಕಾಯ್ದರು.