ಕರ್ನಾಟಕ

karnataka

ETV Bharat / sports

RCB vs GT: ಕಿಂಗ್​ ಕೊಹ್ಲಿ ಭರ್ಜರಿ ಶತಕ.. ಗುಜರಾತ್​ಗೆ 198ರನ್​​ಗಳ ಗುರಿ - ರಾಯಲ್ ಚಾಲೆಂಜರ್ಸ್‌ ಬೆಂಗಳೂರು

ವಿರಾಟ್​​ ಅವರ ಭರ್ಜರಿ ಶತಕದ ನೆರವಿನಿಂದ ಆರ್​ಸಿಬಿ ತಂಡವು 5 ವಿಕೆಟ್​ ನಷ್ಟಕ್ಕೆ 197 ರನ್​ ಗಳಿಸಿ ಟೈಟಾನ್ಸ್​​ಗೆ 198 ರನ್​​ಗಳ ಗೆಲುವಿನ ಗುರಿ ನೀಡಿದೆ.

ipl-2023-royal-challengers-bangalore-vs-gujarat-titans-match
IPL 2023RCB vs GT: ಕಿಂಗ್​ ಕೊಹ್ಲಿ ಭರ್ಜರಿ ಶತಕ... ಗುಜಾರತ್​ಗೆ 198ರನ್​​ಗಳ ಗುರಿ

By

Published : May 21, 2023, 8:15 PM IST

Updated : May 21, 2023, 10:52 PM IST

ಬೆಂಗಳೂರು:ಮಾಡು ಇಲ್ಲವೇ ಮಡಿ ಪಂದ್ಯದಲ್ಲಿವಿರಾಟ್​​ ಕೊಹ್ಲಿ ಅವರ ಆಕರ್ಷಕ ಶತಕದ ನೆರವಿನಿಂದ ರಾಯಲ್​​ ಚಾಲೆಂಜರ್ಸ್​​​ ಬೆಂಗಳೂರು ತಂಡವು ನಿಗಧಿತ ಓವರ್​ನಲ್ಲಿ 5 ವಿಕಟ್​​ ನಷ್ಟಕ್ಕೆ 197ರನ್ ​​ಗಳಿಸುವ ಮೂಲಕ ಹಾಲಿ ಚಾಂಪಿಯನ್​​ ಗುಜರಾತ್​ ಟೈಟಾನ್ಸ್​​​ಗೆ 198 ರನ್​​ ಟಾರ್ಗೆಟ್​​ ಗುರಿ ನೀಡಿದೆ. ಭರ್ಜರಿ ಫಾರ್ಮ್​ನಲ್ಲಿರುವ ಕಿಂಗ್​​ ಕೊಹ್ಲಿ 61 ಎಸೆತದಲ್ಲಿ 13 ಬೌಂಡರಿ 1 ಸಿಕ್ಸರ್​​​ ಸಿಡಿಸುವ ಮೂಲಕ 101 ರನ್​ ಗಳಿಸುವ ಮೂಲಕ ಈ ಆವೃತ್ತಿಯಲ್ಲಿ 2 ಶತಕವನ್ನು ದಾಖಲಿಸಿದರು.

ಟಾಸ್​​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆರ್​​ಸಿಬಿ ತಂಡ ಉತ್ತಮ ಆರಂಭ ಪಡೆಯಿತು. ನಾಯಕ ಫಾಫ್​​ ಡು ಪ್ಲೆಸಿಸ್​​​​ ಹಾಗೂ ವಿರಾಟ್​​​​ 61 ರನ್​​ಗಳ ಜೊತೆಯಾಟ ನೀಡಿದರು. ಆದರೆ ನಾಯಕ್​ ಫಾಫ್​​​​​ ಬೃಹತ್​​​​ ಮೊತ್ತ (28) ಗಳಿಸುವಲ್ಲಿ ವಿಫಲರಾದರು. ನಂತರ ಬಂದ ಮಾಕ್ಸ್​​ವೆಲ್​​ ಬಿರುಸಿನ ಆಟಕ್ಕೆ ಮುಂದಾದರು ಹೆಚ್ಚು ಹೊತ್ತು ಕ್ರೀಸ್​​ನಲ್ಲಿರದೇ ರಶೀದ್​​ ಖಾನ್​​ ಸ್ಪಿನ್​ ಬಲೆಗೆ ಸಿಲುಕಿದರು.

4ನೇ ಕ್ರಮಾಂಕಕ್ಕೆ ಬ್ಯಾಟಿಂಗ್​ಗೆ ಬಂದ ಯುವ ಆಟಗಾರ ಮಹಿಪಾಲ್​​ ಲೊಮ್ರೋರ್​​​​ ಕೇವಲ ಒಂದು ರನ್​​ಗಳಿಸಿ ಪೆವಿಲಿಯನ್​ ಸೇರಿದರು. ಬಳಿಕ ಬಂದ ಆಲ್​ ​ರೌಂಡರ್​​ ಬ್ರೇಸ್​​ವೆಲ್​​ 26 ರನ್​​ಗಳಿಸಿ ವಿಕೆಟ್​​ ಒಪ್ಪಿಸಿದರು. ಅನುಭವಿ ಆಟಗಾರ ದಿನೇಶ್​​ ಕಾರ್ತಿಕ್​​ ಅವರು ಈ ಆವೃತ್ತಿಯಲ್ಲಿ 4ನೇ ಬಾರಿಗೆ ಶೂನ್ಯಕ್ಕೆ ಔಟಾಗುವ ಮೂಲಕ ತಮ್ಮ ಕಳಪೆ ಆಟವನ್ನು ಈ ಪಂದ್ಯದಲ್ಲೂ ಮುಂದುವರೆಸಿದರು. ಯುವ ಆಟಗಾರ ಅನುಜ್​ ರಾವತ್​​ ವಿರಾಟ್​​ ಜೊತೆ ಸೇರಿ ಉತ್ತಮವಾದ ಜೊತೆಯಾಟ ಆಡಿದರು. 15 ಬಾಲ್​ಗೆ 23 ರನ್ ​ಗಳಿಸಿ ವಿಕೆಟ್​​ ಒಪ್ಪಿಸದೆ ವಿರಾಟ್​​ ಜೊತೆ ತಂಡದ ಮೊತ್ತ ಹೆಚ್ಚಿಸಲು ಸಹಕಾರಿಯಾದರು.

ಆವೃತ್ತಿಯಲ್ಲಿ 2 ಶತಕ ಬಾರಿಸಿದ ಕಿಂಗ್​ ಕೊಹ್ಲಿ: ಒಂದೆಡೆ ವಿಕೆಟ್​​ ಉರುಳುತ್ತಿದ್ದರು ವಿರಾಟ್​ ಕೊಹ್ಲಿ ಏಕಾಂಗಿಯಾಗಿ ಇನ್ನಿಂಗ್ಸ್​​ ಕಟ್ಟಲು ಪ್ರಾರಂಭಿಸಿದರು. ಕೊನೆಗೆ ಅನುಜ್​ ರಾವತ್​​ ಜೊತೆ ಉತ್ತಮವಾದ ಜೊತೆಯಾಡಿ ತಂಡದ ಸ್ಕೋರ್ ಹೆಚ್ಚಿಸುವುದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಎರಡನೇ ಶತಕಗಳಿಸುವುದರೊಂದಿಗೆ ಐಪಿಎಲ್​​ ಇತಿಹಾಸದಲ್ಲೇ ಅತಿ ಹೆಚ್ಚು (7) ಶತಕಗಳಿಸಿದ ಆಟಗಾರ ಎನ್ನಿಸಿಕೊಂಡರು. ಟೈಟಾನ್ಸ್​​ ಪರ ನೂರ್​ ಅಹಮದ್​ 2 ವಿಕೆಟ್​​ ಪಡೆದುಕೊಂಡರೆ, ಶಮಿ, ಯಶ್​​ ದಯಾಳ್​, ರಶೀದ್​​ ಖಾನ್​​ ಮೊಹಿತ್​ ಶರ್ಮಾ ತಲಾ ಒಂದು ವಿಕೆಟ್​ ಪಡೆದುಕೊಂಡರು.

ಇದನ್ನೂ ಓದಿ:ಆರ್​ಸಿಬಿ, ಮುಂಬೈ, ರಾಯಲ್ಸ್​: ಮೂವರಲ್ಲಿ 4ನೇ ಪ್ಲೇಆಫ್​ ಸ್ಥಾನ ಯಾರಿಗೆ?

Last Updated : May 21, 2023, 10:52 PM IST

ABOUT THE AUTHOR

...view details