ಕರ್ನಾಟಕ

karnataka

ETV Bharat / sports

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​​ ವಿನ್​​... ಪ್ಲೇ-ಆಫ್​​ಗೆ ಆರ್​ಸಿಬಿ ಲಗ್ಗೆ - ಆರ್​ಸಿಬಿ ಪ್ಲೇ ಆಫ್​ ಪ್ರವೇಶ

ಮುಂಬೈ ಇಂಡಿಯನ್ಸ್​ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ಪ್ಲೇ-ಆಫ್​ ರೇಸ್​​ನಿಂದ ಹೊರಬಿದ್ದಿದ್ದು, ಇದರ ಲಾಭ ಮಾತ್ರ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ಸಿಕ್ಕಿದೆ. ರೋಹಿತ್​ ಬಳಗದ ಗೆಲುವಿನಿಂದಾಗಿ ಡುಪ್ಲೆಸಿಸ್​ ಬಳಗ 4ನೇ ತಂಡವಾಗಿ ಪ್ಲೇ-ಆಪ್​ ಹಂತಕ್ಕೆ ಲಗ್ಗೆ ಹಾಕಿದೆ.

Mumbai Indians beat Delhi Capitals
Mumbai Indians beat Delhi Capitals

By

Published : May 22, 2022, 1:19 AM IST

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 5 ವಿಕೆಟ್​ಗಳ ಭರ್ಜರಿ ಗೆಲುವು ದಾಖಲು ಮಾಡಿರುವ ಮುಂಬೈ ಇಂಡಿಯನ್ಸ್​​, ಜಯದೊಂದಿಗೆ 2022ರ ಐಪಿಎಲ್​​ ಅಭಿಯಾನ ಮುಗಿಸಿದೆ. ಇದರ ಮಧ್ಯೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು 4ನೇ ತಂಡವಾಗಿ ಪ್ಲೇ-ಆಫ್​ಗೆ ಪ್ರವೇಶ ಪಡೆದುಕೊಂಡಿದ್ದು, ಮುಂದಿನ ಪಂದ್ಯದಲ್ಲಿ ಲಖನೌ ತಂಡದ ಎದುರು ಸೆಣಸಾಟ ನಡೆಸಲಿದೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​ ಮುಂಬೈ ತಂಡದ ಮಾರಕ ಬೌಲಿಂಗ್ ನಡುವೆ ಕೂಡ ಡೆಲ್ಲಿ ತಂಡದ ಪೊವೆಲ್​​(43), ರಿಷಭ್ ಪಂತ್​(39)ರನ್​ಗಳ ನೆರವಿಂದ ಡೆಲ್ಲಿ ತಂಡ 20 ಓವರ್​ಗಳಲ್ಲಿ 7ವಿಕೆಟ್​ನಷ್ಟಕ್ಕೆ 159ರನ್​​ಗಳಿಕೆ ಮಾಡಿದ್ದು, ಎದುರಾಳಿ ಮುಂಬೈ ತಂಡಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿತ್ತು.

ಮುಂಬೈ- ಡೆಲ್ಲಿ ಮುಖಾಮುಖಿ

160ರನ್​ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್​ ಆರಂಭದಲ್ಲೇ ರೋಹಿತ್​ ಶರ್ಮಾ(2) ಹೊರತಾಗಿ ಕೂಡ ಇಶಾನ್​​ ಕಿಶನ್​(48), ಬ್ರೇವಿಸ್​​(39) ಹಾಗೂ ಟಿಮ್​ ಡೇವಿಡ್​(34) ಸ್ಫೋಟಕ ಆಟದ ನೆರವಿನಿಂದ 19.1 ಓವರ್​ಗಳಲ್ಲಿ 5 ವಿಕೆಟ್​ನಷ್ಟಕ್ಕೆ 160ರನ್​ಗಳಿಸಿ, ಗೆಲುವಿನ ನಗೆ ಬೀರಿತು. ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ತಿಲಕ್​ ವರ್ಮಾ ತಂಡಕ್ಕೆ ಆಸರೆಯಾದರು.

ವಿಕೆಟ್ ಪಡೆದು ಸಂಭ್ರಮಿಸಿದ ಮುಂಬೈ

ಡೆಲ್ಲಿ ಕ್ಯಾಪಿಟಲ್ಸ್​ ಇನ್ನಿಂಗ್ಸ್​: ಜ್ವರದಿಂದ ಗುಣಮುಖರಾಗಿ ಇಂದಿನ ಪಂದ್ಯದಲ್ಲಿ ಬ್ಯಾಟ್ ಬೀಸಿದ ಪೃಥ್ವಿ ಶಾ 24ರನ್​​ಗಳಿಸಿದರೆ, ಪಂತ್​ 39ರನ್​ಗಳ ಕಾಣಿಕೆ ನೀಡಿದರು. ಪಂತ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಬಂದ ಸರ್ಫರಾಜ್ ಖಾನ್ 10ರನ್​ ಗಳಿಸಿದರು. ಡೇವಿಡ್​ ವಾರ್ನರ್​ ನಿರಾಸೆ ಮೂಡಿಸಿದರು.

ಅಬ್ಬರಿಸಿದ ಪೊವೆಲ್:ಮಧ್ಯಮ ಕ್ರಮಾಂಕದಲ್ಲಿ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ಡೆಲ್ಲಿ ತಂಡಕ್ಕೆ ಪೊವೆಲ್ ಆಸರೆಯಾದರು. ಇವರು ತಾವು ಎದುರಿಸಿದ 34 ಎಸೆತಗಳಲ್ಲಿ 4 ಸಿಕ್ಸರ್, 1 ಬೌಂಡರಿ ಸಮೇತ 43 ರನ್​​ಗಳಿಸಿದರು. ಕೊನೆಯಾಗಿ ಅಬ್ಬರಿಸಿದ ಅಕ್ಸರ್ ಕೂಡ ತಾವು ಎದುರಿಸಿದ 10 ಎಸೆತಗಳಲ್ಲಿ 2 ಸಿಕ್ಸರ್ ಸಮೇತ ಅಜೇಯ 19ರನ್​​ಗಳಿಕೆ ಮಾಡಿದ್ದರಿಂದ ತಂಡ 20 ಓವರ್​ಗಳಲ್ಲಿ 7ವಿಕೆಟ್​ನಷ್ಟಕ್ಕೆ 159ರನ್​​​ಗಳಿಕೆ ಮಾಡಿತು.

ಮುಂಬೈ ಇಂಡಿಯನ್ಸ್ ಪರ ಮಿಂಚಿದ ವೇಗಿ ಬುಮ್ರಾ ತಾವು ಎಸೆದ 4ಓವರ್​​ಗಳಲ್ಲಿ 30 ರನ್​ ನೀಡಿ, 4 ವಿಕೆಟ್ ಪಡೆದುಕೊಂಡರು. ಇವರಿಗೆ ಸಾಥ್ ನೀಡಿದ ರಮಣದೀಪ್ 2 ವಿಕೆಟ್ ಪಡೆದರೆ, ಸ್ಯಾಮ್ಸ್ ಹಾಗೂ ಮಾರ್ಕಡೆ ತಲಾ 1 ವಿಕೆಟ್ ಪಡೆದರು.

ಮುಂಬೈ ಇನ್ನಿಂಗ್ಸ್​: 160ರನ್​ಗಳ ಗುರಿ ಬೆನ್ನತ್ತಿದ ಮುಂಬೈ ಆರಂಭದಲ್ಲೇ ರೋಹಿತ್​ ಶರ್ಮಾ(2) ವಿಕೆಟ್​ ಕಳೆದುಕೊಂಡಿತು. ಇದಾದ ಬಳಿಕ ಮೈದಾನಕ್ಕೆ ಬಂದ ಬ್ರೆವೀಸ್​ ಹಾಊ ಕಿಶನ್ ತಂಡಕ್ಕೆ ಉತ್ತಮ ಜೊತೆಯಾಟವಾಡಿದರು. 48ರನ್​ಗಳಿಸಿದ ವೇಳೆ ಕಿಶನ್​ ಔಟಾದರೆ, ಬ್ರೆವೀಸ್​ (37) ರನ್​ಗಳಿಕೆ ಮಾಡಿದರು. ಕಿಶನ್ ಔಟಾದ ಬಳಿಕ ಮೈದಾನಕ್ಕೆ ಬಂದ ತಿಲಕ್​ ವರ್ಮಾ(21) ಜವಾಬ್ದಾರಿಯುತ ಆಟ ಪ್ರದರ್ಶಸಿದರು. ಆದರೆ, ಈ ವೇಳೆ ಮೈದಾನಕ್ಕಿಳಿದ ಟಿಮ್ ಡೇವಿಡ್ ತಾವು ಎದುರಿಸಿದ 11 ಎಸೆತಗಳಲ್ಲಿ ಭರ್ಜರಿ 34ರನ್​ಗಳಿಸಿ ತಂಡಕ್ಕೆ ಜಯ ಸುಲಭಗೊಳಿಸಿದರು. ಕೊನೆಯದಾಗಿ ರಮಣದೀಪ್​ 13ರನ್​​ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಡೆಲ್ಲಿ ಪರ ನೋರ್ಟ್ಜೆ, ಠಾಕೂರ್​ 2 ವಿಕೆಟ್​ ಪಡೆದರೆ, ಕುಲ್ದೀಪ್​ ಯಾದವ್​ 1 ವಿಕೆಟ್ ಪಡೆದು ಮಿಂಚಿದರು.

ಆರ್​ಸಿಬಿ ಪ್ಲೇ-ಆಫ್​ಗೆ ಲಗ್ಗೆ:ಮುಂಬೈ ಗೆಲುವಿನೊಂದಿಗೆ 4ನೇ ಸ್ಥಾನದಲ್ಲಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ಲೇ-ಆಫ್​ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದು, ಕೋಟ್ಯಂತರ ಆರ್​ಸಿಬಿ ಅಭಿಮಾನಿಗಳ ಆಸೆ ಈಡೇರಿದಂತಾಗಿದೆ. ಜೊತೆಗೆ ಲಖನೌ ತಂಡದ ವಿರುದ್ಧ ಮುಂದಿನ ಪಂದ್ಯ ಆಡಲಿದೆ.

ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಇಶನ್ ಕಿಶನ್​​

ABOUT THE AUTHOR

...view details