ಕೋಲ್ಕತ್ತಾ:ಎಲಿಮಿನೇಟರ್ ಪಂದ್ಯದಲ್ಲಿ ಮಿಂಚಿರುವರಜತ್ ಪಟಿದಾರ್ ಅಜೇಯ 112ರನ್ ಹಾಗೂ ದಿನೇಶ್ ಕಾರ್ತಿಕ್ ಸ್ಫೋಟಕ 37ರನ್ಗಳ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 4ವಿಕೆಟ್ನಷ್ಟಕ್ಕೆ 207 ರನ್ಗಳಿಕೆ ಮಾಡಿದೆ. ಈ ಮೂಲಕ ಎದುರಾಳಿ ಲಖನೌ ತಂಡದ ಗೆಲುವಿಗೆ 208ರನ್ಗಳ ಬೃಹತ್ ಟಾರ್ಗೆಟ್ ಮುಂದಿಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಆರ್ಸಿಬಿ ಆರಂಭಿಕ ಆಘಾತ ಎದುರಿಸಿತು.
ನಾಯಕ ಡುಪ್ಲೆಸಿಸ್(0) ಗೋಲ್ಡನ್ ಔಟ್ ಆದರು. ಇದರ ಬೆನ್ನಲ್ಲೇ ಬಂದ ಮ್ಯಾಕ್ಸ್ವೆಲ್ ಕೂಡ ಕೇವಲ 9ರನ್ಗಳಿಕೆ ಮಾಡಿ ಔಟಾದರು. ಆದರೆ, 25ರನ್ಗಳಿಕೆ ಮಾಡಿ ಉತ್ತಮವಾಗಿ ಆಡ್ತಿದ್ದ ವಿರಾಟ್ ಕೊಹ್ಲಿ ಕೂಡ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್ ಕೂಡ ಕೇವಲ 14ರನಮ್ಗಳಿಸಿ, ಬಿಷ್ಣೋಯ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಅಬ್ಬರಿಸಿ ಬೊಬ್ಬಿರಿದ ಪಟಿದಾರ್:ಆರ್ಸಿಬಿ ಆರಂಭಿಕ ಆಘಾತದ ನಡುವೆ ಕೂಡ ಎದುರಾಳಿ ಬೌಲರ್ಗಳನ್ನ ರಜತ್ ಚೆಂಡಾಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ದಿನೇಶ್ ಕಾರ್ತಿಕ್ 37ರನ್ಗಳ ಉತ್ತಮ ಕಾಣಿಕೆ ನೀಡಿದರು. ಪಾಟಿದಾರ್ ತಾವು ಎದುರಿಸಿದ 54 ಎಸೆತಗಳಲ್ಲಿ 7 ಸಿಕ್ಸರ್, 12 ಬೌಂಡರಿ ಸಮೇತವಾಗಿ 112ರನ್ಗಳಿಕೆ ಮಾಡಿದರು.
ಲಖನೌ ತಂಡದ ಪರ ಮೋಸಿನ್ ಖಾನ್, ಕೃನಾಲ್, ಆವೇಶ್ ಖಾನ್ ಹಾಗೂ ಬಿಷ್ಣೋಯ್ ತಲಾ 1 ವಿಕೆಟ್ ಪಡೆದುಕೊಂಡರು.
ಇಂಡಿಯನ್ ಪ್ರೀಮಿಯರ್ ಲೀಗ್ನ ಎಲಿಮಿನೇಟರ್ ಪಂದ್ಯದಲ್ಲಿಂದು ಲಖನೌ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಕೆಎಲ್ ರಾಹುಲ್ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಹೋರಾಟ ನಡೆಸಲಿದೆ.
ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ-ಲಖನೌ ಮುಖಾಮುಖಿ
ಇಂದಿನ ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಮಳೆ ಸುರಿದ ಕಾರಣ, ಪಂದ್ಯ ಅರ್ಧಘಂಟೆ ತಡವಾಗಿ ಆರಂಭಗೊಂಡಿದೆ. ಆದರೆ, ಯಾವುದೇ ರೀತಿಯ ಓವರ್ ಕಡಿತಗೊಳಿಸಿಲ್ಲ. ಇಂದಿನ ಪಂದ್ಯದಲ್ಲಿ ಸೋಲು ಕಾಣುವ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ. ಹೀಗಾಗಿ, ಉಭಯ ತಂಡಗಳಿಂದ ತೀವ್ರ ಪೈಪೋಟಿ ಕಂಡು ಬರುವ ಸಾಧ್ಯತೆ ದಟ್ಟವಾಗಿದೆ.
ಲಖನೌ ಸೂಪರ್ ಜೈಂಟ್ಸ್: ಕ್ವಿಂಟನ್ ಡಿಕಾಕ್(ವಿ.ಕೀ), ಕೆಎಲ್ ರಾಹುಲ್(ಕ್ಯಾಪ್ಟನ್), ಎವಿನ್ ಲಿವಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯಾ, ಮನನ್ ವೋಹ್ರಾ, ಸ್ಟೋಯಿನಿಸ್, ಮೋಸಿನ್ ಖಾನ್, ಆವೇಶ್ ಖಾನ್, ಚಮೀರಾ, ರವಿ ಬಿಷ್ಣೋಯ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಡುಪ್ಲೆಸಿಸ್(ಕ್ಯಾಪ್ಟನ್), ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಗ್ಲೇನ್ ಮ್ಯಾಕ್ಸವೆಲ್, ಮಹಿಪಾಲ್, ದಿನೇಶ್ ಕಾರ್ತಿಕ್(ವಿ.ಕೀ), ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಹ್ಯಾಜಲ್ವುಡ್, ಮೊಹಮ್ಮದ್ ಸಿರಾಜ್
ಸತತ ವೈಫಲ್ಯಗಳಿಂದ ಕಂಗೆಟ್ಟಿದ್ದ ವಿರಾಟ್ ಕೊಹ್ಲಿ, ಹಿಂದಿನ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಫಾರ್ಮ್ಗೆ ಮರಳಿದ್ದಾರೆ. ಇದರ ಜೊತೆಗೆ ನಾಯಕ ಡುಪ್ಲೆಸಿಸ್, ಮ್ಯಾಕ್ಸವೆಲ್, ಕಾರ್ತಿಕ್ ತಂಡದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದ್ದು, ಹಸರಂಗ, ಹರ್ಷಲ್ ಪಟೇಲ್, ಮ್ಯಾಕ್ಸಿ ಹಾಗೂ ಹ್ಯಾಜಲ್ವುಡ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ರಾಹುಲ್ ನಾಯಕತ್ವದಲ್ಲಿ ಲಖನೌ ಸೂಪರ್ ಜೈಂಟ್ಸ್ ಇದೇ ಮೊದಲ ಸಲ ಐಪಿಎಲ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದು, ಲೀಗ್ ಹಂತದಲ್ಲಿ ತಾನು ಆಡಿರುವ 14 ಪಂದ್ಯಗಳ ಪೈಕಿ 9ರಲ್ಲಿ ಗೆಲುವು ದಾಖಲು ಮಾಡಿ 3ನೇ ತಂಡವಾಗಿ ಪ್ಲೇ - ಆಫ್ ಪ್ರವೇಶ ಪಡೆದುಕೊಂಡಿದೆ. ಉತ್ತಮ ಫಾರ್ಮ್ನಲ್ಲಿರುವ ನಾಯಕ ರಾಹುಲ್ ಹಾಗೂ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ಈಗಾಗಲೇ ಶತಕ ಸಿಡಿಸಿ, ಮಿಂಚು ಹರಿಸಿದ್ದು, ಹಿಂದಿನ ಪಂದ್ಯದಲ್ಲಿ ಡಿಕಾಕ್ - ರಾಹುಲ್ ಜೋಡಿ ದ್ವಿಶತಕದಾಟ ಆಡಿದ್ದರು.
ಇವರಿಗೆ ಎವಿನ್ ಲೂಯಿಸ್, ದೀಪಕ್ ಹೂಡಾ, ಆಲ್ರೌಂಡರ್ ಸ್ಟೋಯಿನಿಸ್ ಮತ್ತು ಜೇಸನ್ ಹೋಲ್ಡರ್ ಉತ್ತಮ ಸಾಥ್ ನೀಡುವ ಸಾಧ್ಯತೆ ಇದೆ. ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದ್ದು, ಆವೇಶ್ ಖಾನ್, ಮೊಸೀನ್ ಖಾನ್, ಸ್ಪಿನ್ನರ್ ರವಿ ಬಿಷ್ಣೋಯ್ ತಂಡಕ್ಕೆ ಮೆಲುಗೈ ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ. ವಿಶೇಷ ಎಂದರೆ ಲೀಗ್ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ಆರ್ಸಿಬಿ 18ರನ್ಗಳ ಗೆಲುವು ದಾಖಲು ಮಾಡಿದೆ.