ಕರ್ನಾಟಕ

karnataka

ರೋಹಿತ್​, ಸಚಿನ್ ದಾಖಲೆ ಸರಿಗಟ್ಟಿದ ಕುಲ್ದೀಪ್; ಡೆಲ್ಲಿಯ ನಾಲ್ಕು ಗೆಲುವಿನಲ್ಲೂ ಪಂದ್ಯಶ್ರೇಷ್ಠ!

By

Published : Apr 29, 2022, 5:32 PM IST

2022 ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಕುಲ್ದೀಪ್ ಯಾದವ್​ ಅದ್ಭುತ ಪ್ರದರ್ಶನ ನೀಡ್ತಿದ್ದು, ಎದುರಾಳಿ ಬ್ಯಾಟರ್​ಗಳ ಪಾಲಿಗೆ 'ವಿಲನ್' ಆಗಿದ್ದಾರೆ.

Kuldeep Yadav joins elite club
Kuldeep Yadav joins elite club

ಮುಂಬೈ: ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್ದೀಪ್​ ಯಾದವ್​​ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಅದ್ಭುತ ಕೈಚಳಕ ತೋರಿಸ್ತಿದ್ದಾರೆ. ಡೆಲ್ಲಿ ತಂಡದ ಭಾಗವಾಗಿರುವ ಇವರು​​ ಆಡಿರುವ 8 ಪಂದ್ಯಗಳಿಂದ 17 ವಿಕೆಟ್ ಕಬಳಿಸಿ ಎದುರಾಳಿ ತಂಡವನ್ನು ದುಸ್ವಪ್ನದಂತೆ ಕಾಡುತ್ತಿದ್ದಾರೆ. ಇದರ ಜೊತೆಗೆ ಮಹತ್ವದ ದಾಖಲೆಯನ್ನೂ ಸಾಧಿಸಿದ್ದಾರೆ.


ಈ ಬಾರಿಯ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​​ ಆಡಿರುವ 8 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿದೆ. ಈ ಎಲ್ಲ ಪಂದ್ಯಗಳಲ್ಲೂ ಅದ್ಭುತ ಪ್ರದರ್ಶನ ನೀಡಿರುವ ಕುಲ್ದೀಪ್ ಯಾದವ್​​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರ ಸಾಧನೆ ಸರಿಗಟ್ಟಿದ್ದಾರೆ.

ಇದನ್ನೂ ಓದಿ:ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್​ಶಿಪ್​ನಲ್ಲಿ ಸೆಮೀಸ್​​​ಗೆ ಸಿಂಧು ಲಗ್ಗೆ.. ಸೋತ್ರು ಪದಕ ಖಚಿತ!

ನಿನ್ನೆ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ 4 ಓವರ್​ಗಳಲ್ಲಿ ಕೇವಲ 14ರನ್​ ನೀಡಿ, ಪ್ರಮುಖ ನಾಲ್ಕು ವಿಕೆಟ್ ಪಡೆದುಕೊಂಡಿರುವ ಕುಲ್ದೀಪ್​ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು, ಈ ಮೂಲಕ ಐಪಿಎಲ್​ ಆವೃತ್ತಿವೊಂದರಲ್ಲಿ ಅತಿ ಹೆಚ್ಚು ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಭಾರತೀಯ ಪ್ಲೇಯರ್​ ಸಾಲಿನಲ್ಲಿ ಸಚಿನ್​ ಹಾಗೂ ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ್ದಾರೆ.

2010ರಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ 2016ರಲ್ಲಿ ರೋಹಿತ್ ಶರ್ಮಾ ತಲಾ 4 ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2016ರಲ್ಲಿ ವಿರಾಟ್​ ಕೊಹ್ಲಿಗೆ ಐದು ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದುಬಂದಿತ್ತು. ಉಳಿದಂತೆ, 2021ರಲ್ಲಿ ಋತುರಾಜ್ ಗಾಯಕವಾಡ್​, 2013ರಲ್ಲಿ ಅಮಿತ್ ಮಿಶ್ರಾ, 2008ರಲ್ಲಿ ಯೂಸುಫ್ ಪಠಾಣ್​ ಕೂಡ ನಾಲ್ಕು ಸಲ ಪಂದ್ಯಶ್ರೇಷ್ಠರಾಗಿ ಗಮನ ಸೆಳೆದಿದ್ದರು.

2021ರಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ಭಾಗವಾಗಿದ್ದ ಕುಲ್ದೀಪ್ ಯಾದವ್​ಗೆ ಪ್ರತಿಭೆ ಪ್ರದರ್ಶನಕ್ಕೆ ಚಾನ್ಸ್ ಸಿಕ್ಕಿರಲಿಲ್ಲ. ಈ ಸಲ ಡೆಲ್ಲಿ ಪರ ಮೈದಾನಕ್ಕಿಳಿಯುತ್ತಿರುವ ಚೈನಾಮ್ಯಾನ್​ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಒಂದು ವರ್ಷಗಳ ಕಾಲ ಬೆಂಚ್ ಕಾಯುವಂತೆ ಮಾಡಿದ್ದ ಕೆಕೆಆರ್ ಬ್ಯಾಟರ್‌ಗಳ ಬೆವರಿಳಿಸಿರುವ ಇವರು ಅಗ್ರ ಕ್ರಮಾಂಕದ ನಾಲ್ಕು ವಿಕೆಟ್ ಪಡೆದು ಸೇಡು ತೀರಿಸಿಕೊಂಡಿದ್ದರು.

ABOUT THE AUTHOR

...view details