ಕರ್ನಾಟಕ

karnataka

ETV Bharat / sports

IPL 2022: ಗಿಲ್‌, ಲಾಕಿ ಫರ್ಗ್ಯುಸನ್ ಆಟಕ್ಕೆ ತತ್ತರಿಸಿದ ಡೆಲ್ಲಿ; ಗುಜರಾತ್‌ ಟೈಟನ್ಸ್‌ಗೆ ಗೆಲುವು - ಐಪಿಎಲ್ ಪಂದ್ಯ

ಶುಭಮನ್​ ಗಿಲ್ ಬ್ಯಾಟಿಂಗ್ ಮತ್ತು ಲಾಕಿ ಫರ್ಗ್ಯುಸನ್ ಬೌಲಿಂಗ್ ಅಬ್ಬರದ ಪರಿಣಾಮ ಗುಜರಾತ್‌ ಟೈಟನ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 14 ರನ್‌ಗಳಿಂದ ಗೆಲುವು ದಾಖಲಿಸಿತು.

IPL 2022 GT vs Delhi Gujarat Titans won by 14 runs
Ipl 2022: ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಗುಜರಾತ್ ಟೈಟಾನ್ಸ್​ಗೆ 14 ರನ್​ಗಳ ಗೆಲುವು

By

Published : Apr 3, 2022, 6:40 AM IST

ಪುಣೆ:ಇದೇ ಮೊದಲ ಬಾರಿಗೆ ಐಪಿಎಲ್​​ಗೆ ಪದಾರ್ಪಣೆ ಮಾಡಿರುವ ಗುಜರಾತ್ ಟೈಟನ್ಸ್​ ಭರ್ಜರಿ ಆಟವಾಡುತ್ತಿದೆ. ಸತತ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಶುಭಮನ್ ಗಿಲ್ ಆಕರ್ಷಕ ಬ್ಯಾಟಿಂಗ್‌ ಹಾಗೂ ಲಾಕಿ ಫರ್ಗ್ಯುಸನ್ ಬೌಲಿಂಗ್‌ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತತ್ತರಿಸಿತು.

ಟಾಸ್ ಸೋತು ಬ್ಯಾಟಿಂಗ್​ ಆರಂಭಿಸಿದ ಗುಜರಾತ್ ಟೈಟನ್ಸ್ ಪರ ಶುಭಮನ್​ ಗಿಲ್ 84 ರನ್ ಪೇರಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರು. ಕೇವಲ 46 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ಸಮೇತ 84 ರನ್​ ಗಳಿಸಿದ ಅವರು, ತಂಡ ಹೆಚ್ಚು ರನ್ ಗಳಿಸಲು ನೆರವಾದರು. ಇನ್ನುಳಿದಂತೆ, ಡೇವಿಡ್ ಮಿಲ್ಲರ್ 20, ಹಾರ್ದಿಕ್ ಪಾಂಡ್ಯ 31 ರನ್ ಗಳಿಸಿ ತಂಡಕ್ಕೆ ತಂಡಕ್ಕೆ ತಮ್ಮದೇ ಕೊಡುಗೆ ನೀಡಿದರು. ಇನ್ನುಳಿದಂತೆ, ರಾಹುಲ್ ತೆವಾಟಿಯಾ 14, ವಿಜಯ್ ಶಂಕರ್ 13 ರನ್ ಕಲೆ ಹಾಕಿದರು. ಇವರೆಲ್ಲರ ನೆರವಿನಿಂದ ಗುಜರಾತ್ ಟೈಟನ್ಸ್ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲು ಸಾಧ್ಯವಾಯಿತು.

ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ರಿಷಭ್ ಪಂತ್ (43) ಉತ್ತಮ ಆಟದ ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಲಲಿತ್ ಯಾದವ್ 25, ರೋವ್ಮನ್ ಪೊವೆಲ್​ 20, ಮಂದೀಪ್ ಸಿಂಗ್ 18, ಪೃಥ್ವಿ ಶಾ 10 ರನ್ ಗಳಿಸಿದರು.

ಗುಜರಾತ್ ಟೈಟನ್ಸ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಲಾಕಿ ಫರ್ಗೂಸನ್ 4 ಓವರ್​ನಲ್ಲಿ 4 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 2, ಹಾರ್ದಿಕ್ ಪಾಂಡ್ಯಾ ಮತ್ತು ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದು, 157 ರನ್​ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಕಟ್ಟಿಹಾಕಿದರು. ಡೆಲ್ಲಿ ಪರ ಮುಸ್ತಫಿಜುರ್​ ರೆಹಮಾನ್​ 3 ವಿಕೆಟ್​ ಪಡೆದರೆ, ಖಲೀಲ್​ ಅಹ್ಮದ್​ 2, ಕುಲದೀಪ್​ ಯಾದವ್​ 1 ವಿಕೆಟ್​ ಪಡೆದರು.

ಇದನ್ನೂ ಓದಿ:ಹರ್ನಿಯಾ ಚಿಕಿತ್ಸೆಗೆ ಒಳಗಾದ ಮೆಡ್ವಡೇವ್​... ಫ್ರೆಂಚ್​ ಓಪನ್​ ಮಿಸ್​ ಸಾಧ್ಯತೆ

ABOUT THE AUTHOR

...view details