ಕರ್ನಾಟಕ

karnataka

ETV Bharat / sports

ಸಿಎಸ್​​ಕೆ ಫೈನಲ್​ಗೆ ಕರೆದೊಯ್ದ ಧೋನಿ.. ಮಗಳನ್ನ ಅಪ್ಪಿಕೊಂಡು ಕಣ್ಣೀರು ಹಾಕಿದ ಪತ್ನಿ ಸಾಕ್ಷಿ! - ಫೈನಲ್​​ಗೆ ಸಿಎಸ್​ಕೆ

ಧೋನಿ ತಮ್ಮದೇ ಶೈಲಿಯಲ್ಲಿ ಮ್ಯಾಚ್ ಫಿನಿಶ್​​ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದು, ಗಂಡನ ಬ್ಯಾಟಿಂಗ್​ ಪ್ರದರ್ಶನಕ್ಕೆ ಖುದ್ದು ಫಿದಾ ಆಗಿರುವ ಪತ್ನಿ ಸಾಕ್ಷಿ ಮೈದಾನದಲ್ಲಿ ಕಣ್ಣೀರು ಹಾಕಿದ್ದಾರೆ.

IPL 2021
IPL 2021

By

Published : Oct 11, 2021, 4:53 PM IST

ದುಬೈ:ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಚೆನ್ನೈ ಸೂಪರ್​ ಕಿಂಗ್ಸ್​​ ದಾಖಲೆಯ 9ನೇ ಬಾರಿಗೆ ಫೈನಲ್​​ಗೆ ಪ್ರವೇಶ ಪಡೆದುಕೊಂಡಿದೆ. ನಿನ್ನೆ ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿದ ಮಹೇಂದ್ರ ಸಿಂಗ್​ ಧೋನಿ, ಮ್ಯಾಚ್​ ವಿನ್ನರ್​ ಎಂದು ಸಾಬೀತುಪಡಿಸುವುದರ ಜೊತೆಗೆ ತಂಡವನ್ನ ಫೈನಲ್​ಗೆ ಕರೆದುಕೊಂಡು ಹೋದರು. ಇವರ ಸಾಧನೆಗೆ ಈಗಾಗಲೇ ಇನ್ನಿಲ್ಲದ ಸಂತಸ ವ್ಯಕ್ತವಾಗ್ತಿದೆ.

ಮಹೇಂದ್ರ ಸಿಂಗ್​ ಧೋನಿ ಬ್ಯಾಟಿಂಗ್ ಮಾಡ್ತಿದ್ದ ವೇಳೆ ಗ್ಯಾಲರಿಯಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಣೆ ಮಾಡ್ತಿದ್ದ ಸಾಕ್ಷಿ, ಬೌಂಡರಿ ಸಿಡಿಸಿ, ತಂಡವನ್ನ ಗೆಲ್ಲಿಸುತ್ತಿದ್ದಂತೆ ಧೋನಿ ಪತ್ನಿ ಸಾಕ್ಷಿ ಮಗಳನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ.

ಸಿಎಸ್​ಕೆ ಗೆಲುವು ಸಾಧಿಸಲು ಕೊನೆಯ 6 ಎಸೆತಗಳಲ್ಲಿ 13 ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಒಂದು ಸಿಕ್ಸರ್,​​​ 3 ಬೌಂಡರಿ ಸಿಡಿಸಿ ಧೋನಿ ಮಿಂಚಿದರು. ಗಂಡನ ಅದ್ಭುತ ಪ್ರದರ್ಶನಕ್ಕೆ ಫಿದಾ ಆಗಿರುವ ಸಾಕ್ಷಿ ಸಂತೋಷದಿಂದಲೇ ಮಗಳು ಝಿವಾ ತಬ್ಬಿಕೊಂಡು ಸಂಭ್ರಮಿಸಿದ್ದರು.

ಈ ವೇಳೆ ಅವರ ಕಣ್ತುಂಬಿ ಬಂದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ನೀಡಿದ್ದ 172ರನ್​ಗಳ ಗುರಿ ಬೆನ್ನಟ್ಟಿದ್ದ ಸಿಎಸ್​ಕೆ 19. 4ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ ಫೈನಲ್​ಗೆ ಲಗ್ಗೆ ಹಾಕಿದೆ.

ಇದನ್ನೂ ಓದಿರಿ:M.S.Dhoni: ರೋಮಾಂಚಕ ಬ್ಯಾಟಿಂಗ್‌ ಬಳಿಕ ಪುಟ್ಟ ಅಭಿಮಾನಿಗೆ ಬಾಲ್ ಗಿಫ್ಟ್‌ ಮಾಡಿದ ಧೋನಿ

ABOUT THE AUTHOR

...view details