ಕರ್ನಾಟಕ

karnataka

ETV Bharat / sports

IPL ಟ್ರೋಫಿ ಗೆದ್ದ ಹಾರ್ದಿಕ್​​​ಗೆ ಸಹೋದರನಿಂದ ಭಾವನಾತ್ಮಕ ಸಂದೇಶ.. ನಿಮ್ಮ 'ಕಠಿಣ ಪರಿಶ್ರಮದ ಫಲ' ಎಂದ ಕೃನಾಲ್​! - ಹಾರ್ದಿಕ್​​​ಗೆ ಕೃನಾಲ್​​ ಭಾವನಾತ್ಮಕ ಸಂದೇಶ. ಇಂಡಿಯನ್ ಪ್ರೀಮಿಯರ್ ಲೀಗ್

ಅನೇಕ ಏಳು - ಬೀಳುಗಳ ನಡುವೆ ಐಪಿಎಲ್​ನಲ್ಲಿ ಮಿಂಚು ಹರಿಸಿ, ಎಲ್ಲರ ಗಮನ ಸೆಳೆದಿರುವ ಟೀಂ ಇಂಡಿಯಾ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಗೆ ಅವರ ಸಹೋದರ ಕೃನಾಲ್​ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

Hardik Pandya Gets Emotional Message From Brother Krunal
Hardik Pandya Gets Emotional Message From Brother Krunal

By

Published : Jun 1, 2022, 7:38 AM IST

ಹೈದರಾಬಾದ್​:ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಗುಜರಾತ್​ ಟೈಟನ್ಸ್​ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಅನೇಕ ಕಠಿಣ ದಿನಗಳ ಮಧ್ಯೆ ಅದ್ಭುತವಾಗಿ ಕಮ್​​ಬ್ಯಾಕ್​ ಮಾಡಿ, ತಂಡವನ್ನ ವಿಜಯಶಾಲಿಯನ್ನಾಗಿ ಮಾಡಿದ್ದಾರೆ. ಇವರ ಪ್ರದರ್ಶನಕ್ಕೆ ಈಗಾಗಲೇ ಅನೇಕ ಕ್ರಿಕೆಟ್ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೀಗ ಸಹೋದರ ಕೃನಾಲ್ ಪಾಂಡ್ಯ ಕೂಡ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

ಕೃನಾಲ್ ಪಾಂಡ್ಯ ಟ್ವೀಟ್​:ನನ್ನ ಸಹೋದರ, ನಿಮ್ಮ ಈ ಯಶಸ್ಸಿನ ಹಿಂದೆ ಎಷ್ಟು ಕಠಿಣ ಪರಿಶ್ರಮವಿದೆ ಎಂಬುದು ನಿಮಗೆ ಮಾತ್ರ ಗೊತ್ತಿದೆ. ಬೆಳಗ್ಗೆ ಲೆಕ್ಕವಿಲ್ಲದಷ್ಟು ಸಮಯ ತರಬೇತಿ. ಶಿಸ್ತು ಮತ್ತು ಮಾನಸಿಕ ಶಕ್ತಿ ನಡುವೆ ಇಷ್ಟೊಂದು ಸಾಧನೆ ಮಾಡಿದ್ದೀರಿ. ನೀವು ಟ್ರೋಫಿ ಎತ್ತುವುದನ್ನ ನೋಡುವುದು ನಿಮ್ಮ ಕಠಿಣ ಪರಿಶ್ರಮದ ಫಲವಾಗಿದೆ. ನೀವೂ ಇದಕ್ಕೆ ಅರ್ಹರು ಮತ್ತಷ್ಟು ಸಾಧನೆ ನಿಮ್ಮದಾಗಲಿ..

ಫಿಟ್ನೇಸ್ ಹಾಗೂ ಗಾಯದ ಸಮಸ್ಯೆ ಎದುರಿಸುತ್ತಿದ್ದ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದಿಂದ ಹೊರಬಿದ್ದಿದ್ದರು. ಆದರೆ, ಕಠಿಣ ತರಬೇತಿಯಿಂದ ಬೌನ್ಸ್​ ಬ್ಯಾಕ್​ ಆಗಿರುವ ಹಾರ್ದಿಕ್​ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡು, ಚೊಚ್ಚಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ.

ಕಳೆದ ಭಾನುವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​​ 7 ವಿಕೆಟ್​ಗಳ ಗೆಲುವು ದಾಖಲು ಮಾಡಿತು. ಬೌಲಿಂಗ್ ಹಾಗೂ ಬ್ಯಾಟಿಂಗ್​ನಲ್ಲಿ ಮಿಂಚಿದ ಹಾರ್ದಿಕ್​, ಫೈನಲ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ತಮ್ಮದಾಗಿಸಿಕೊಂಡಿದ್ದರು. ಇವರ ನಾಯಕತ್ವಕ್ಕೆ ವಿರೇಂದ್ರ ಸೆಹ್ವಾಗ್​, ಸುನಿಲ್ ಗವಾಸ್ಕರ್​, ಮೈಕಲ್ ವಾನ್​ ಸೇರಿದಂತೆ ಅನೇಕರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:ದಕ್ಷಿಣ ಆಫ್ರಿಕಾ ಕ್ರಿಕೆಟರ್ ಮೇಲೆ ಹಲ್ಲೆ.. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ವೇಗದ ಬೌಲರ್

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕೃನಾಲ್ ಪಾಂಡ್ಯ ಲಖನೌ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದು, ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡಿಲ್ಲ. ವಿಶೇಷವೆಂದರೆ ಈ ಇಬ್ಬರು ಪ್ಲೇಯರ್ಸ್​ ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.

ABOUT THE AUTHOR

...view details