ಕರ್ನಾಟಕ

karnataka

ETV Bharat / sports

KKR ಕ್ಯಾಪ್ಟನ್​​-ಕೋಚ್​​ ನಡುವೆ ಎಲ್ಲವೂ ಸರಿ ಇಲ್ವಾ? 12 ಪಂದ್ಯಗಳಲ್ಲಿ 20 ಪ್ಲೇಯರ್ಸ್​​ಗೆ ಚಾನ್ಸ್​​​ ನೀಡಿದ್ಯಾಕೆ!? - ಶ್ರೇಯಸ್ ಅಯ್ಯರ್​ ಕೊಚ್​ ಮೆಕಲಮ್​

ಕೋಲ್ಕತ್ತಾ ನೈಟ್ ರೈಡರ್ಸ್ ಆಡಿರುವ 11 ಪಂದ್ಯಗಳ ಪೈಕಿ ಕೇವಲ 4ರಲ್ಲಿ ಗೆದ್ದಿದೆ. ಆದರೆ, ಒಟ್ಟು 20 ಪ್ಲೇಯರ್ಸ್​ಗೆ ಅವಕಾಶ ನೀಡಿದ್ದು, ತಂಡದ ಹೊಂದಾಣಿಕೆ ವಿಚಾರವಾಗಿ ಇದೀಗ ಸಂಶಯ ವ್ಯಕ್ತವಾಗಿದೆ.

KKR captain Shreyas Iyer and coach Brendon McCullum
KKR captain Shreyas Iyer and coach Brendon McCullum

By

Published : May 9, 2022, 10:21 PM IST

ಮುಂಬೈ:ಇಂಡಿಯನ್​​ ಪ್ರೀಮಿಯರ್ ಲೀಗ್​​ನಲ್ಲಿ ಕೋಲ್ಕತ್ತಾ ನೈಟ್​​ ರೈಡರ್ಸ್​ ತಂಡ ಆಡಿರುವ 11 ಪಂದ್ಯಗಳ ಪೈಕಿ ಕೇವಲ 4ರಲ್ಲಿ ಗೆಲುವು ಸಾಧಿಸಿದ್ದು, ಪಾಯಿಂಟ್​ ಪಟ್ಟಿಯಲ್ಲಿ ಕೊನೆಯ ಎರಡನೇ ಸ್ಥಾನದಲ್ಲಿದೆ. ಇದರ ಮಧ್ಯೆ ಟೀಂ ಇಂಡಿಯಾ ಮಾಜಿ ಕ್ರಿಕೆಟರ್​​ಯೋರ್ವ ಈ ತಂಡದ ವಿಚಾರವಾಗಿ ಮಹತ್ವದ ಮಾಹಿತಿವೊಂದನ್ನ ಹೊರಹಾಕಿದ್ದಾರೆ.

ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ಕ್ಯಾಪ್ಟನ್​​ ಶ್ರೇಯಸ್​ ಅಯ್ಯರ್ ಹಾಗೂ ಕೋಚ್​​​ ಬ್ರೆಂಡನ್​ ಮೆಕಲಮ್ ಮಧ್ಯೆ ಎಲ್ಲವೂ ಸರಿ ಎಲ್ಲ ಎಂಬ ಅಭಿಪ್ರಾಯವನ್ನ ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಕೈಫ್​​ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ವೇಳೆ ಅವರು ಕೆಕೆಆರ್ ತಂಡದ ಕುರಿತು ಮಾತನಾಡಿದ್ದಾರೆ. 2022ರ ಐಪಿಎಲ್​​ನಲ್ಲಿ ತಂಡ ಇಲ್ಲಿಯವರೆಗೆ ಆಡಿರುವ 11 ಪಂದ್ಯಗಳ ಪೈಕಿ ಒಟ್ಟು 20 ಆಟಗಾರರನ್ನ ಮೈದಾನಕ್ಕಿಳಿಸಿದ್ದು, ಉತ್ತಮವಾದ ಸಂಯೋಜನೆ ಸಿಕ್ಕಿಲ್ಲ.

ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಕೈಫ್​

ಇಂದಿನ ಮುಂಬೈ ವಿರುದ್ಧದ ಪಂದ್ಯದಲ್ಲೂ ಕೆಕೆಆರ್ ತಂಡ ಒಟ್ಟು ಐದು ಬದಲಾವಣೆ ಮಾಡಿ, ಕಣಕ್ಕಿಳಿದಿದೆ. ಹೀಗಾಗಿ, ಇಬ್ಬರ ನಡುವಿನ ಹೊಂದಾಣಿಕೆ ಸರಿಯಿಲ್ಲ ಎಂದು ಮೊಹಮ್ಮದ್​​ ಕೈಫ್​​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕೆಕೆಆರ್​ ಉತ್ತಮ ಪಡೆ ಹೊಂದಿದ್ದರೂ ಕೂಡ, ಮೇಲಿಂದ ಮೇಲೆ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಿದೆ. ಇದೇ ಕಾರಣಕ್ಕಾಗಿ ಪ್ಲೇಯರ್ಸ್ ಒತ್ತಡಕ್ಕೊಳಗಾಗಿ ಉತ್ತಮವಾದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ ಎಂದರು.

ಇದನ್ನೂ ಓದಿ:ಮುಂಬೈ ತಂಡಕ್ಕೆ ಗಾಯದ ಮೇಲೆ ಬರೆ.. ಐಪಿಎಲ್​​ನಿಂದ ಹೊರಬಿದ್ದ ಸೂರ್ಯಕುಮಾರ್​

ಡ್ರೆಸ್ಸಿಂಗ್ ರೂಮ್​​ ವಾತಾವರಣದ ಬಗ್ಗೆ ಮಾತನಾಡಿರುವ ಕೈಫ್​, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚಹಲ್​​ ಓವರ್​ನಲ್ಲಿ ಅಯ್ಯರ್​ ವಿಕೆಟ್​ ಒಪ್ಪಿಸಿದ್ದರು. ಈ ವೇಳೆ ಡಗೌಟ್ ಕಡೆಗೆ ಹೊಗುತ್ತಿದ್ದ ಅಯ್ಯರ್​, ಬ್ರೆಂಡನ್​ ಮೆಕಲಮ್ ಜೊತೆ ಮಾತನಾಡಿದ್ದರು. ಈ ವೇಳೆ ಅಯ್ಯರ್​ ಯಾವುದೋ ವಿಷಯಕ್ಕೆ ಅವರ ಮೇಲೆ ಕೋಪಗೊಂಡಿರುವಂತೆ ಕಾಣಿಸುತ್ತಿತ್ತು ಎಂದಿದ್ದಾರೆ. ಇದು ನಾಯಕ ಮತ್ತು ಕೋಚ್​ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನ ತೋರಿಸುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details