ಇಂಡಿಯನ್ ಪ್ರೀಮಿಯರ್ ಲೀಗ್‌ನ 37ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 32 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ 15 ಎಸೆತಗಳಲ್ಲಿ 34 ರನ್ ಗಳಿಸಿ ರಾಜಸ್ಥಾನ ಪರ ಉತ್ತಮ ಫಿನಿಶರ್ ಪಾತ್ರ ವಹಿಸಿದ್ದ ಧ್ರುವ್ ಜುರೆಲ್ ತಮ್ಮ ಇನ್ನಿಂಗ್ಸ್ ಹಾಗೂ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಕೆಲವು ವಿಶೇಷ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಪಂದ್ಯದ ನಂತರ, ಧ್ರುವ್ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 20 ವರ್ಷಗಳ ನಂತರ ಈ ಘಟನೆಯನ್ನು ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ. "20 ವರ್ಷಗಳ ನಂತರ ನಾನು ಸಿಎಸ್ಕೆ ಮತ್ತು ಆರ್ಆರ್ ಪಂದ್ಯದ ಸ್ಕೋರ್ ಕಾರ್ಡ್ ಅನ್ನು ನೋಡಿದಾಗ, ಧೋನಿ ಸರ್ ನನ್ನನ್ನು ರನ್ ಔಟ್ ಮಾಡಿದರು ಎಂದು ನಾನು ಹೇಳುತ್ತೇನೆ. ಆಗಲೂ ನಾನು ಹೆಮ್ಮೆಪಡುತ್ತೇನೆ, ಅದು ನನಗೆ ಸಾಕು" ಎಂದು ಹೇಳಿದ್ದಾರೆ.
ಧ್ರುವ್ ಜುರೆಲ್ ಅವರು ಮಹೇಂದ್ರ ಸಿಂಗ್ ಧೋನಿ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿಯೊಂದಿಗೆ ಆಡುವಾಗ ಅವರು ಎಂದಿಗೂ ಒತ್ತಡಕ್ಕೆ ಒಳಗಾಗುವುದಿಲ್ಲ. ಬ್ಯಾಟಿಂಗ್ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ನಮ್ಮ ಹಿಂದೆ ಇದ್ದು ನಮ್ಮ ಆಟವನ್ನು ನೋಡುತ್ತಾರೆ ಎಂಬ ಅಂಶ ಆಡಲು ಇನ್ನಷ್ಟೂ ಪ್ರೇರಣೆ ನೀಡುತ್ತದೆ ಎಂದಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಎಂದೇ ಗುರುತಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ, ಅವರೊಂದಿಗೆ ಮೈದಾನ ಹಂಚಿಕೊಳ್ಳುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಬಾಲ್ಯದಿಂದಲೂ ಆಟ ನೋಡುತ್ತ ಬೆಳೆದವರೊಂದಿಗೆ ಆಟವಾಡುವ ಅವಕಾಶ ಸಿಗುವುದು ದೊಡ್ಡ ವಿಚಾರ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಪರ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಧ್ರುವ್ ಜುರೆಲ್ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿದ್ದಾರೆ. ಅವರು ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಐಪಿಎಲ್‌ನ 15ನೇ ಸೀಸನ್‌ಗೆ ಮೊದಲು ನಡೆದ ಮೆಗಾ ಹರಾಜಿನಲ್ಲಿ ಅವರು ರಾಜಸ್ಥಾನ ರಾಯಲ್ಸ್ ಧ್ರುವ್ ಅವರನ್ನು ಖರೀದಿಸಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ಯಾವುದೇ ಪಂದ್ಯವನ್ನು ಆಡಲು ಅವಕಾಶ ಸಿಕ್ಕಿರಲಿಲ್ಲ. ಇದಕ್ಕೂ ಮುನ್ನ ಅವರು ಭಾರತದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಉಪನಾಯಕರಾಗಿ ಆಡಿದ್ದಾರೆ.
ಜುರೆಲ್ 2022 ರ ಋತುವಿನಲ್ಲಿ ಉತ್ತರ ಪ್ರದೇಶಕ್ಕಾಗಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ಈ ವರ್ಷ ತನ್ನ ಪಂದ್ಯಗಳಲ್ಲಿ ಆಡುವುದರ ಜೊತೆಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದ್ದು, ತನ್ನ ಪ್ರತಿಭೆಯಿಂದ ಜನರನ್ನು ಆಕರ್ಷಿಸುತ್ತಿದೆ. ಅವರು ಈ ವರ್ಷ 7 ಪಂದ್ಯಗಳಲ್ಲಿ 130 ರನ್ ಗಳಿಸಿದ್ದಾರೆ. 3 ಬಾರಿ ಔಟಾಗದೆ ಉಳಿದಿದ್ದಾರೆ, ಇದರಲ್ಲಿ ಅವರು 10 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಸಹ ಹೊಡೆದಿದ್ದಾರೆ.
ಇದನ್ನೂ ಓದಿ:ರೋಹಿತ್ ಶರ್ಮಾ ನಾಯಕತ್ವಕ್ಕೆ 10 ವರ್ಷ: ಮುಂಬೈ ಇಂಡಿಯನ್ಸ್ನಿಂದ ವಿಶೇಷ ಟ್ವಿಟ್