ಕರ್ನಾಟಕ

karnataka

ETV Bharat / sports

ಐಪಿಎಲ್​ಗೆ ಮತ್ತೆ ಕೋವಿಡ್ ಬಾಧೆ: ಡೆಲ್ಲಿ ಸಹಾಯಕ ಸಿಬ್ಬಂದಿಗೆ ಸೋಂಕು - Delhi Capitals Physio Patrick Farhart

ಭಾರತದಲ್ಲಿ ಆಯೋಜನೆಗೊಂಡಿರುವ ಇಂಡಿಯನ್​ ಪ್ರೀಮಿಯರ್ ಲೀಗ್​ನ 2022ನೇ ಆವೃತ್ತಿಯಲ್ಲಿ ಮೊದಲ ಕೋವಿಡ್ ಪ್ರಕರಣ ಕಾಣಿಸಿಕೊಂಡಿದೆ.

Delhi Capitals' support staff member tests positive
Delhi Capitals' support staff member tests positive

By

Published : Apr 15, 2022, 5:20 PM IST

ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ ಈಗಾಗಲೇ ಅನೇಕ ಪಂದ್ಯಗಳು ನಡೆದಿವೆ. ಇದರ ಮಧ್ಯೆ ಶಾಕಿಂಗ್ ನ್ಯೂಸ್​​ ಹೊರಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್​​ ತಂಡದ ಸಹಾಯಕ ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ದೃಢಗೊಂಡಿದೆ. ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ಕಾಣಿಸಿಕೊಂಡಿರುವ ಮೊದಲ ಕೋವಿಡ್ ಸೋಂಕು ಇದಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಫಿಸಿಯೋ ಪ್ಯಾಟ್ರಿಕ್​ ಫರ್ಹಾರ್ಟ್​​ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಗೊತ್ತಾಗಿದೆ. ಹೀಗಾಗಿ ಅವರನ್ನು ಪ್ರತ್ಯೇಕವಾಗಿರಿಸಿ, ವೈದ್ಯಕೀಯ ತಂಡ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಐಪಿಎಲ್​ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ:ನೋಡಿ: ವಯಸ್ಸಲ್ಲಿ ಹಿರಿಯನಾದ್ರೂ 'ಕ್ರಿಕೆಟ್‌ ದೇವರ' ಪಾದಮುಟ್ಟಿ ನಮಿಸಿದ ಶ್ರೇಷ್ಠ ಕ್ರಿಕೆಟಿಗ!

ಮಹಾಮಾರಿ ಕೊರೊನಾ ವೈರಸ್​ನಿಂದಾಗಿ ಕಳೆದ ವರ್ಷ ಭಾರತದಲ್ಲಿ ಆಯೋಜನೆಗೊಂಡಿದ್ದ ಇಂಡಿಯನ್​ ಪ್ರೀಮಿಯರ್ ಲೀಗ್​ ಅರ್ಧಕ್ಕೆ ಮೊಟಕುಗೊಂಡಿತ್ತು. ಇದಾದ ಬಳಿಕ ದುಬೈನ ವಿವಿಧ ಮೈದಾನಗಳಲ್ಲಿ ಉಳಿದ ಪಂದ್ಯ ಆಯೋಜಿಸಲಾಗಿತ್ತು. ದೇಶದಲ್ಲಿ ಇದೀಗ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವ ಕಾರಣ ಮಹಾರಾಷ್ಟ್ರದ ನಾಲ್ಕು ಮೈದಾನಗಳಲ್ಲಿ ಟೂರ್ನಿ ಆಯೋಜನೆ ಮಾಡಲಾಗಿದೆ.

ಐಪಿಎಲ್​ನಿಂದ ದೀಪಕ್ ಚಹರ್ ಔಟ್​:ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಲ್​ರೌಂಡರ್​ ದೀಪಕ್ ಚಹರ್ ಗಾಯಗೊಂಡಿರುವ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ABOUT THE AUTHOR

...view details