ಕರ್ನಾಟಕ

karnataka

ETV Bharat / sports

ಡಿಲ್ಲಿ ಕ್ಯಾಪಿಟಲ್ಸ್​ ನಾಯಕತ್ವವು ರಿಷಬ್​ ಪಂತ್​ನನ್ನು ಅತ್ಯುತ್ತಮ ಕ್ರಿಕೆಟಿಗನಾಗಿಸುತ್ತೆ: ರಿಕಿ ಪಾಂಟಿಂಗ್ ವಿಶ್ವಾಸ - ಐಪಿಎಲ್

ಯುವ ಆಟಗಾರ ರಿಷಭ್ ಪಂತ್ ಹೆಗಲಿಗೆ ನಾಯಕತ್ವದ ಹೊಣೆ ಲಭಿಸಿದೆ. ಈ ಜವಾಬ್ದಾರಿಯಿಂದ ರಿಷಭ್ ಪಂತ್‌ ಪ್ರದರ್ಶನದಲ್ಲಿ ಮತ್ತಷ್ಟು ಸಕಾರಾತ್ಮಕ ಬದಲಾವಣೆಯಾಗಲಿದೆ ಎಂದು ದೆಹಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.

ರಿಕಿ ಪಾಂಟಿಂಗ್
ರಿಕಿ ಪಾಂಟಿಂಗ್

By

Published : Mar 31, 2021, 2:22 PM IST

ಮುಂಬೈ: ಈ ಬಾರಿಯ ಐಪಿಎಲ್​​ನಲ್ಲಿ ದೆಹಲಿ ತಂಡವನ್ನ ಮುನ್ನೆಡೆಸುವ ಜವಬ್ದಾರಿ ರಿಷಭ್​ ಪಂತ್​ಗೆ ನೀಡಲಾಗಿದೆ. ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಶ್ರೇಯಸ್​ ಅಯ್ಯರ್​ ಅವರು ಭುಜದ ಗಾಯಕ್ಕೆ ತುತ್ತಾದರು. ಆ ನಂತರ ಏಕದಿನ ಸರಣಿಯಿಂದಲೂ ಹೊರಬಿದ್ದಿದ್ದ ಅವರಿಗೆ ಸುಮಾರು 5 ರಿಂದ 6 ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್​ ಆವೃತ್ತಿಯಲ್ಲಿ ದೆಹಲಿ ತಂಡದ ಸಾರಥ್ಯ ರಿಷಭ್ ಪಂತ್ ಹೇಗಲೆರಿದೆ.

ಯುವ ಆಟಗಾರ ರಿಷಭ್ ಪಂತ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ ಸಿಕ್ಕಿದೆ. ಈ ಹೊಣೆಗಾರಿಕೆಯಿಂದ ರಿಷಭ್ ಪಂತ್‌ ಅವರ ಪ್ರದರ್ಶನದಲ್ಲಿ ಮತ್ತಷ್ಟು ಸಕಾರಾತ್ಮಕ ಬದಲಾವಣೆ ಕಂಡುಬರಲಿದೆ ಎಂದು ದೆಹಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದುರದೃಷ್ಟವಶಾತ್ ಶ್ರೇಯಸ್ ಐಯ್ಯರ್ ಅವರು ಈ ಬಾರಿಯ ಐಪಿಎಲ್ ಆವೃತ್ತಿಯಿಂದ ಹೊರಗುಳಿಯಬೇಕಿದೆ. ಆದರೆ, ಈ ಅವಕಾಶವನ್ನು ರಿಷಭ್ ಪಂತ್ ಬಾಚಿಕೊಳ್ಳುವುದನ್ನು ನೋಡಲು ಕಾಯುತ್ತಿದ್ದೇನೆ. ಆತನ ಇತ್ತೀಚಿನ ಪ್ರದರ್ಶನದಿಂದಾಗ ಈ ಸ್ಥಾನಕ್ಕೆ ಆತನೇ ಅರ್ಹನಾಗಿದ್ದಾನೆ. ಪಂತ್ ಈಗ ಸಾಕಷ್ಟು ಆತ್ಮವಿಶ್ವಾಸದೊಂದಿಗೆ ಮೈದಾನಕ್ಕೆ ಇಳಿಯಲಿದ್ದಾರೆ. ನಾಯಕತ್ವ ಆತನನ್ನು ಮತ್ತಷ್ಟು ಉತ್ತಮ ಕ್ರಿಕೆಟಿಗನನ್ನಾಗಿ ಮಾಡುತ್ತದೆ ಎಂಬ ಭರವಸೆ ನನಗಿದೆ ಎಂದು ಪಾಂಟಿಂಗ್ ಹೇಳಿದ್ದಾರೆ.

ಓದಿ : ರಿಷಭ್ ಪಂತ್ ಮಾಂತ್ರಿಕ ನಾಯಕರಾಗಲಿದ್ದಾರೆ: ಸುರೇಶ್ ರೈನಾ ಭವಿಷ್ಯ

ಕಳೆದ ಎರಡು ಆವೃತ್ತಿಯಲ್ಲಿ ಶ್ರೇಯಸ್ ಐಯ್ಯರ್ ನೇತೃತ್ವದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಪ್ರದರ್ಶನ ಅತ್ಯುತ್ತಮವಾಗಿತ್ತು. ಫಲಿತಾಂಶವೂ ಇದನ್ನು ಹೇಳುತ್ತದೆ. ಈಗ ಈ ಅವಕಾಶ ಆಸ್ಟ್ರೇಲಿಯಾ ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅದ್ಬುತವಾದ ಪ್ರದರ್ಶನ ನೀಡಿದ ಯುವ ಆಟಗಾರ ರಿಷಭ್ ಪಂತ್‌ಗೆ ನಾಯಕತ್ವ ದೊರೆತಿದೆ ಎಂದರು.

ABOUT THE AUTHOR

...view details