ಕರ್ನಾಟಕ

karnataka

ETV Bharat / sports

ಐಪಿಎಲ್​ ಪ್ರಸಾರ: ಮತ್ತೆ ಸ್ಟಾರ್ ತೆಕ್ಕೆಗೆ​​ ಟಿವಿ ಹಕ್ಕು, ವಯಾಕಾಮ್​ಗೆ ಡಿಜಿಟಲ್​ ರೈಟ್ಸ್, ಬಿಸಿಸಿಐಗೆ ಆದಾಯ ಎಷ್ಟು ಗೊತ್ತಾ? - ವಯಾಕಾಮ್ 18ಗೆ ಡಿಜಿಟಲ್​ ರೈಟ್ಸ್

ಐಪಿಎಲ್ 2023ರಿಂದ 2027ರವರೆಗಿನ ಪ್ರಸಾರ ಹಕ್ಕುಗಳು ಒಟ್ಟಾರೆ 48,390 ಕೋಟಿ ರೂ.ಗೆ ಮಾರಾಟವಾಗಿದೆ. 2018-22ನೇ ಸಾಲಿನಲ್ಲಿ ಮೀಡಿಯಾ ಹಕ್ಕುಗಳಿಗೆ ಹೋಲಿಕೆ ಮಾಡಿದರೆ ಇದು ಮೂರು ಪಟ್ಟು ಅಧಿಕ.

IPL Media Rights
ಐಪಿಎಲ್​ ಪ್ರಸಾರ ಹಕ್ಕು ಮಾರಾಟ

By

Published : Jun 14, 2022, 9:56 PM IST

Updated : Jun 14, 2022, 10:33 PM IST

ಮುಂಬೈ (ಮಹಾರಾಷ್ಟ್ರ): ಇಂಡಿಯನ್​ ಪ್ರೀಮಿಯರ್​​ ಲೀಗ್​ (ಐಪಿಎಲ್​)ನ 2023ರಿಂದ 2027ರವರೆಗಿನ ಮೀಡಿಯಾ ಹಕ್ಕುಗಳು ಮಾರಾಟವಾಗಿದೆ. ಡಿಸ್ನಿ ಸ್ಟಾರ್​​ ಟಿವಿ ಹಕ್ಕುಗಳನ್ನು ಉಳಿಸಿಕೊಂಡಿದ್ದರೆ, ವಯಾಕಾಮ್-18 ಡಿಜಿಟಲ್​ ಹಕ್ಕುಗಳನ್ನು ಪಡೆದಿದ್ದು, ಒಟ್ಟಾರೆ ಭಾರತೀಯ ಕ್ರಿಕೆಟ್​​ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ 48,390 ಕೋಟಿ ರೂ. ಆದಾಯ ಬರಲಿದೆ ಎಂದು ಮಂಡಳಿಯ ಕಾರ್ಯದರ್ಶಿ ಜಯ್​ ಶಾ ಘೋಷಿಸಿದ್ದಾರೆ.

ಐಪಿಎಲ್ ಮೀಡಿಯಾ ಹಕ್ಕುಗಳಿಗಾಗಿ ಬಿಸಿಸಿಐ ಮೂರು ದಿನಗಳ ಇ-ಹರಾಜು ಪ್ರಕ್ರಿಯೆ ನಡೆಸಿತ್ತು. ಸ್ಟಾರ್​​ ಟಿವಿ (ಪ್ಯಾಕೇಜ್​-ಎ) ಹಕ್ಕುಗಳನ್ನು 23,575 ಕೋಟಿ ರೂ. (ಪ್ರತಿ ಪಂದ್ಯಕ್ಕೆ 57.5 ಕೋಟಿ)ಗಳಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಅದೇ ರೀತಿಯಾಗಿ ವಯಾಕಾಮ್ 23,758 ಕೋಟಿ ರೂ.ಗಳಿಗೆ ಡಿಜಿಟಲ್​ ಹಕ್ಕುಗಳನ್ನು (ಪ್ಯಾಕೇಜ್​-ಬಿ, ಸಿ) ಪಡೆದಿದೆ. ಅಲ್ಲದೇ, ಆಸ್ಟ್ರೇಲಿಯಾ, ಸೌಥ್​ ಆಫ್ರಿಕಾ ಮತ್ತು ಯುಕೆ ಪ್ರದೇಶದ ಹಕ್ಕುಗಳನ್ನು (ಪ್ಯಾಕೇಜ್-ಡಿ) ಸಾಧಿಸಿದೆ. ಟೈಮ್ಸ್​​ ಇಂಟರ್​ನೆಟ್​​ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಹಾಗೂ ಅಮೆರಿಕಾದಲ್ಲಿ ಪ್ರಸಾರದ ಹಕ್ಕುಗಳನ್ನು ಪಡೆದಿದೆ.

ಒಟ್ಟಾರೆ 48,390 ಕೋಟಿ ರೂ.ಗಳು ಪ್ರಸಾರ ಹಕ್ಕಾಗಿದ್ದು, ಭಾರತೀಯ ಕ್ರೀಡಾ ಪ್ರಸಾರ ಉದ್ಯಮದಲ್ಲೇ ಅಭೂತಪೂರ್ವ ಆದಾಯವಾಗಿದೆ. ಇಷ್ಟೇ ಅಲ್ಲ, ಕಳೆದ 2018-22ನೇ ಸಾಲಿನಲ್ಲಿ ಮೀಡಿಯಾ ಹಕ್ಕುಗಳಿಗೆ ಹೋಲಿಕೆ ಮಾಡಿದರೆ ಇದು ಮೂರು ಪಟ್ಟು ಅಧಿಕ. 2017ರಲ್ಲಿ 16,347.50 ಕೋಟಿ ರೂ.ಗಳಿಗೆ ಬಿಸಿಸಿಐ ಪ್ರಸಾರಗಳನ್ನು ಮಾರಾಟ ಮಾಡಿತ್ತು. ಈಗಿನ ಮೌಲ್ಯ ಗಮನಿಸಿದರೆ ಐಪಿಎಲ್​ ಅನಿರೀಕ್ಷಿತ ಬ್ರ್ಯಾಂಡ್​ ಆಗಿ ಹೊರಹೊಮ್ಮಿದೆ ಎಂಬುವುದೂ ಸಾಬೀತಾಗಿದೆ.

ಟಿವಿಗಿಂತಲೂ ಡಿಜಿಟಲ್​ ಹೆಚ್ಚು ಮೌಲ್ಯ: ಐಪಿಎಲ್​ ಪ್ರಸಾರ ಹಕ್ಕುಗಳ ಮಾರಾಟದಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಭಾರತದಲ್ಲಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆ ಮತ್ತು ಅದರ ಮಾರುಕಟ್ಟೆಯ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತಿದೆ. ಯಾಕೆಂದರೆ, ಟಿವಿ ಹಕ್ಕುಗಳಿಂತ ಅಧಿಕ ಡಿಜಿಟಲ್​ ಹಕ್ಕುಗಳು ಮಾರಾಟವಾಗಿದೆ. ​ಟಿವಿ ಹಕ್ಕುಗಳನ್ನು ಸ್ಟಾರ್​ 23,575 ಕೋಟಿ ರೂ.ಗೆ ಪಡೆದಿದ್ದರೆ, ವಯಾಕಾಮ್ ಡಿಜಿಟಲ್​ ಹಕ್ಕುಗಳನ್ನು 23,758 ಕೋಟಿ ರೂ.ಗಳಿಗೆ ಬಿಡ್​ ಮಾಡಿದೆ. ಅಂದರೆ 183 ಕೋಟಿ ರೂ.ಗಳಷ್ಟು ಅಧಿಕ ಮೌಲ್ಯಕ್ಕೆ ಡಿಜಿಟಲ್​ ಹಕ್ಕುಗಳು ಮಾರಾಟಗೊಂಡಿವೆ.

ನಾನು ಥ್ರಿಲ್​​ ಆಗಿದ್ದೇನೆ: ಐಪಿಎಲ್​ ಪ್ರಸಾರ ಹಕ್ಕುಗಳ ಮಾರಾಟದ ಬಗ್ಗೆ ಅಧಿಕೃತವಾಗಿ ಘೋಷಿಸಿರುವ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಸ್ಟಾರ್​ ಇಂಡಿಯಾ​ ಟಿವಿ ಹಕ್ಕುಗಳನ್ನು ಗೆದ್ದಿರುವ ಬಗ್ಗೆ ಘೋಷಿಸಲು ಥ್ರಿಲ್​​ ಆಗಿದ್ದೇನೆ. ಜೊತೆಗೆ ಎರಡು ವರ್ಷ ಕೋವಿಡ್​​ ಸಾಂಕ್ರಾಮಿಕ ಹೊರತಾಗಿಯೂ ಬಿಸಿಸಿಐನ ಸಾಂಸ್ಥಿಕ ಸಾಮರ್ಥ್ಯಗಳಿಗೆ ಬಿಡ್ ನೇರ ಸಾಕ್ಷಿಯಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

ವಯಾಕಾಮ್-18 ಡಿಜಿಟಲ್​ ಹಕ್ಕುಗಳನ್ನು 23,758 ಕೋಟಿ ರೂ.ಗಳಿಗೆ ಗೆದ್ದಿದೆ. ಇದು ಭಾರತದ ಡಿಜಿಟಲ್ ಕ್ರಾಂತಿಯನ್ನು ತೋರಿಸುತ್ತದೆ. ಡಿಜಿಟಲ್ ಕ್ಷೇತ್ರವು ಅಂತ್ಯವಿಲ್ಲದ ಸಾಮರ್ಥ್ಯ ಹೊಂದಿದೆ ಎಂಬುವುದು ರುಜುವಾತು ಮಾಡಿದೆ. ಅಲ್ಲದೇ, ಕ್ರಿಕೆಟ್ ನೋಡುವ ವಿಧಾನವನ್ನೇ ಡಿಜಿಟಲ್ ಬದಲಾಯಿಸಿದೆ. ಇದು ಕ್ರಿಕೆಟ್​ನಲ್ಲಿನ ಬೆಳವಣಿಗೆ ಮತ್ತು ಡಿಜಿಟಲ್ ಇಂಡಿಯಾ ದೃಷ್ಟಿಯಲ್ಲಿ ದೊಡ್ಡ ಅಂಶವಾಗಿದೆ ಎಂದು ಮತ್ತೊಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

ಗಮನಾರ್ಹ ಅಂಶವೆಂದರೆ ಮೊದಲ ಬಾರಿಗೆ ಬಿಸಿಸಿಐ ಐಪಿಎಲ್​ನ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ವಿಭಜಿಸಿದೆ. ಜೊತೆಗೆ ಬಿಡ್ಡರ್‌ಗಳಿಗೆ ನಾಲ್ಕು ಪ್ಯಾಕೇಜ್‌ಗಳನ್ನು ನೀಡಿತ್ತು. 'ಎ' ವಿಭಾಗದಲ್ಲಿ ಟಿವಿ ಮತ್ತು 'ಬಿ' ವಿಭಾಗದಲ್ಲಿ ಡಿಜಿಟಲ್ ಹಕ್ಕು ಭಾರತದ ಉಪ ಖಂಡಗಳು, 'ಸಿ' ವಿಭಾಗದಲ್ಲಿ ಇಂಡಿಯಾ ಡಿಜಿಟಲ್ ನಾನ್-ಎಕ್ಸ್‌ಕ್ಲೂಸಿವ್ ವಿಶೇಷ ಪ್ಯಾಕೇಜ್ ಹಾಗೂ 'ಡಿ' ವಿಭಾಗದಲ್ಲಿ ಪ್ರಪಂಚದ ಉಳಿದ ಭಾಗಗಳ ಪ್ರಸಾರ ಹಕ್ಕು ಕೊಟ್ಟಿತ್ತು.

Last Updated : Jun 14, 2022, 10:33 PM IST

ABOUT THE AUTHOR

...view details