ನವದೆಹಲಿ: ಕೆಕೆಆರ್ ಮತ್ತು ಸಿಎಸ್ಕೆ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಬಯೋಬಬಲ್ನಲ್ಲಿದ್ದರೂ ಕೋವಿಡ್ 19 ಪಾಸಿಟಿವ್ ಬಂದಿರುವುದು ಐಪಿಎಲ್ಗೆ ಆಘಾತ ತಂದಿದೆ. ಆದರೂ ಲೀಗ್ ಯೋಜನೆಯಂತೆ ಮುಂದುವರಿಯಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಖಾಸಗಿ ವಾಹಿನಿಗೆ ಮಾಹಿತಿ ನೀಡಿದ್ದಾರೆ.
ಸೋಮವಾರ ಕೋಲ್ಕತ್ತಾ ನೈಟ್ರೈಡರ್ಸ್ನ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ಗೆ ಕೊರೊನಾ ದೃಢಪಟ್ಟಿತ್ತು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಹಾಗೂ ಬಸ್ ಕ್ಲೀನರ್ ಒಬ್ಬನಿಗೆ ಪಾಸಿಟಿವ್ ದೃಢಪಟ್ಟಿದೆ.
ವರುಣ್ ಚಕ್ರವರ್ತಿ ಸ್ಕ್ಯಾನ್ಗಾಗಿ ಬಯೋ ಬಬಲ್ನಿಂದ ಹೊರ ಹೋಗಿದ್ದಾಗ ವೈರಸ್ ತಗುಲಿರಬಹುದು ಎನ್ನಲಾಗುತ್ತಿದೆ, ಇನ್ನು ಡಿಡಿಸಿಎ ಸಿಬ್ಬಂದಿಗಳಿಂದ ಸಿಎಸ್ಕೆಗೆ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ. ಅತ್ಯಂತ ಕಠಿಣ ಬಯೋಬಬಲ್ ಇದ್ದರೂ ಕೊರೊನಾ ವೈರಸ್ ತಗುಲಿರುವುದರಿಂದ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬಿಸಿಸಿಐ ಆದಿಕಾರಿಯೊಬ್ಬರು ಲೀಗ್ ಯೋಜನೆಯಂತೆ ಮುಂದುವರಿಯಲಿದೆ ಮಾಹಿತಿ ನೀಡಿರುವುದಾಗಿ ಕ್ರೀಡಾ ನಿರೂಪಕಿ ಮೇಹಾ ಭಾರದ್ವಾಜ್ ಮಾಹಿತಿ ನೀಡಿದ್ದಾರೆ.