ಕರ್ನಾಟಕ

karnataka

ETV Bharat / sports

ಸಂಪೂರ್ಣ ಫಿಟ್‌ ಆಗಿದ್ದಲ್ಲಿ ಮುಂದಿನ ಐಪಿಎಲ್‌ ಆಡುವೆ, ಇಲ್ಲವೇ ಪ್ರೇಕ್ಷಕರೊಂದಿಗೆ ಪಂದ್ಯ ನೋಡುವೆ: ಧೋನಿ - ETV Bharath Karnataka

2024ರ ಐಪಿಎಲ್​ನ ದೊಡ್ಡ ಕುತೂಹಲ ಮಹೇಂದ್ರ ಸಿಂಗ್ ಧೋನಿ. ಈ ಟೂರ್ನಿಯಲ್ಲಿ ಧೋನಿ ಆಡ್ತಾರಾ, ಇಲ್ಲವೇ ಎಂಬುದು.

ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ

By ETV Bharat Karnataka Team

Published : Oct 31, 2023, 4:49 PM IST

ನವದೆಹಲಿ: ಭಾರತದ ಕ್ರಿಕೆಟರ್​ಗಳ ಪೈಕಿ ಮಹೇಂದ್ರ ಸಿಂಗ್​ ಧೋನಿಗೆ ಅಪಾರ ಅಭಿಮಾನಿಗಳಿರುವುದು ತಿಳಿದ ವಿಚಾರವೇ. ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಧೋನಿ ಆಟವನ್ನು ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮಾತ್ರ ಆನಂದಿಸಲು ಸಾಧ್ಯವಾಗಿದೆ. 2023ರ ಐಪಿಎಲ್​ ಮಾಹಿಯ ಕೊನೆಯ ಆವೃತ್ತಿ ಎಂದೇ ಸುದ್ದಿಯಾಗಿತ್ತು. ಆದರೆ ಧೋನಿ ತಮ್ಮ ಫಿಟ್​ನೆಸ್​​ ಜೊತೆಗೆ ರಾಜಿ ಮಾಡಿಕೊಳ್ಳದೇ ಮುಂದಿನ ಬಾರಿಯೂ ಆಡುವ ಬಯಕೆಯಿದೆ ಎಂದು ಪ್ರಶಸ್ತಿ ಗೆದ್ದ ನಂತರ ಹೇಳಿದ್ದರು. ಇದೀಗ 2024 ಐಪಿಎಲ್​ನಲ್ಲಿ ಆಡ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆಮಾಡಿದೆ.

ಐಪಿಎಲ್​ ನೇರಪ್ರಸಾರದ ವೇಳೆ ಧೋನಿ ಬ್ಯಾಟಿಂಗ್​ಗಿಳಿದಾಗ ದಾಖಲೆ ಮಟ್ಟದಲ್ಲಿ ಪಂದ್ಯದ ವೀಕ್ಷಣೆ ಆಗುತ್ತಿತ್ತು. 2023ರ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಆಡಿದ ಎಲ್ಲಾ ಮೈದಾನದಲ್ಲಿ ಎಲ್ಲೋ ಜರ್ಸಿಯೇ ಕಂಗೊಳಿಸುತ್ತಿತ್ತು. ಸಾಮಾನ್ಯವಾಗಿ ಪಂದ್ಯ ಮುಗಿದ ಕೂಡಲೇ ಅಭಿಮಾನಿಗಳು ಮೈದಾನದಿಂದ ಹೊರ ಹೋಗುತ್ತಿದ್ದರು. ಆದರೆ ಕಳೆದ ಬಾರಿ ಮಾಹಿಯ ಮಾತುಗಳನ್ನು ಕೇಳದೇ ಪ್ರೇಕ್ಷಕರು ಕ್ರೀಡಾಂಗಣ ತೊರೆಯುತ್ತಿರಲಿಲ್ಲ.

ಇಷ್ಟು ಅಭಿಮಾನ ಕಂಡಿರುವ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ 2023ರ ಐಪಿಎಲ್​ನಲ್ಲಿ ಮಂಡಿ ನೋವಿನ ನಡುವೆಯೂ ಆಡಿದ್ದರು. ಐಪಿಎಲ್​ ಮುಗಿದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ಅವರು, ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದೇನೆ. ಕೆಲ ತಿಂಗಳು ಕಳೆದ ನಂತರ ಹೆಚ್ಚಿನ ಶ್ರಮದ ಕೆಲಸಗಳನ್ನು ಮಾಡುವಂತೆ ವೈದ್ಯರು ಸೂಚಿಸಿದ್ದಾರೆ ಎಂದಿದ್ದರು.

ಸಂಪೂರ್ಣ ಫಿಟ್​ ಆದಲ್ಲಿ ಆಡುತ್ತೇನೆ:ಸಂದರ್ಶನದಲ್ಲಿ ಮುಂದಿನ ಐಪಿಎಲ್‌ನಲ್ಲಿ ಆಡುವ ಬಗ್ಗೆ ಕೇಳಿದಾಗ, "ನನ್ನ ಕೈಲಾದಷ್ಟು ಆಡಲು ಪ್ರಯತ್ನಿಸುತ್ತೇನೆ. ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಎಲ್ಲವೂ ಸರಿಯಾಗಿ ನಡೆದರೆ ಖಂಡಿತವಾಗಿಯೂ ಆಡುತ್ತೇನೆ. ಆದರೆ, ನಾನು ಫಿಟ್ ಆಗಿಲ್ಲದೇ ಇದ್ದರೆ ಪ್ರೇಕ್ಷಕರೊಂದಿಗೆ ಐಪಿಎಲ್ ಪಂದ್ಯ ನೋಡುತ್ತೇನೆ" ಎಂದರು.

ಜೂನ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ. ಕ್ಯಾಚ್ ವೇಳೆ ಧೋನಿ ಮೊಣಕಾಲಿನ ಗಾಯಕ್ಕೆ ಒಳಗಾದರು. ನಂತರ ಅವರು ಆಡಲು ಸಾಕಷ್ಟು ತೊಂದರೆಗಳನ್ನು ಎದುರಿಸಿದರು. ಆದರೂ ಧೋನಿ ಐಪಿಎಲ್‌ನ ಒಂದೇ ಒಂದು ಪಂದ್ಯವನ್ನೂ ಮಿಸ್ ಮಾಡಿರಲಿಲ್ಲ. ಈಗ 2024ರ ವೇಳೆಗೆ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಅಭಿಮಾನಿಗಳು ಗಮನಿಸುತ್ತಿದ್ದಾರೆ. ಅಲ್ಲದೇ ನಿವೃತ್ತಿಗೆ ಇದೇ ಸರಿಯಾದ ಸಮಯ ಎಂದು ಧೋನಿ ಒಮ್ಮೆ ಹೇಳಿದ್ದರು.

ಇದನ್ನೂ ಓದಿ:ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಿಕ್ಸರ್​ ಬಾರಿಸುತ್ತಿರುವ 22 ಅಡಿ ಉದ್ದದ ಸಚಿನ್​ ಪ್ರತಿಮೆ ನಿರ್ಮಾಣ.. ನಾಳೆ ಅನಾವರಣ

ABOUT THE AUTHOR

...view details