ಕರ್ನಾಟಕ

karnataka

ETV Bharat / sports

ಕೊಹ್ಲಿ ಇನ್ನೂ ಐದಾರು ವರ್ಷ ಕ್ರಿಕೆಟ್​ ಆಡಬೇಕಾದ್ರೆ, ಸದ್ಯಕ್ಕೆ ಒಂದು ಬ್ರೇಕ್ ಅಗತ್ಯ: ರವಿಶಾಸ್ತ್ರಿ - ಐಪಿಎಲ್ ಲೇಟೆಸ್ಟ್​ ನ್ಯೂಸ್

ಪ್ರಸ್ತುತ ಪರಿಸ್ಥಿತಿಯಲ್ಲಿ ವಿರಾಟ್​ ಕೊಹ್ಲಿಗೆ ಒಂದು ಬ್ರೇಕ್ ಬೇಕಿದೆ. ಅವರು ತಮ್ಮ ತಲೆಯಲ್ಲಿರುವ ಗೊಂದಲಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವುದಕ್ಕೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸುವ ಅಗತ್ಯವಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

Kohli needs a break from cricket
ವಿರಾಟ್ ಕೊಹ್ಲಿ ರವಿಶಾಸ್ತ್ರಿ

By

Published : Apr 20, 2022, 4:44 PM IST

ಮುಂಬೈ: ಭಾರತ ಮತ್ತು ಆರ್​ಸಿಬಿ ಮಾಜಿ ನಾಯಕ​​ ವಿರಾಟ್​ ಕೊಹ್ಲಿ ಅವರು ಮಾನಸಿಕವಾಗಿ ತುಂಬಾ ದಣಿದಿದ್ದಾರೆ. ಅವರು ಇನ್ನೂ ಆರೇಳು ವರ್ಷ ಕ್ರಿಕೆಟ್​ ಆಡಬೇಕಾದರೆ ಸದ್ಯಕ್ಕೆ ಒಂದು ವಿರಾಮ ಅಗತ್ಯವಿದೆ ಎಂದು ಟೀಂ ಇಂಡಿಯಾ ಮಾಜಿ ಕೋಚ್​ ರವಿಶಾಸ್ತ್ರಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಕೆಲವು ತಿಂಗಳ ಹಿಂದೆ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರು 2019 ನವೆಂಬರ್​ ಅವರು ಯಾವುದೇ ಮಾದರಿಯಲ್ಲಿ ಶತಕ ಸಿಡಿಸಿಲ್ಲ. ಪ್ರಸ್ತುತ ಅವರು ವೃತ್ತಿಜೀವನದ ಅತ್ಯಂತ ಕೆಳಸ್ತರದಲ್ಲಿ ಕಾಣಿಸಿಕೊಂಡಿದ್ದಾರೆ. 2022ರ ಐಪಿಎಲ್​ನಲ್ಲಿ ನಿರಂತರವಾಗಿ ಕಳಪೆ ಮೊತ್ತಕ್ಕೆ ವಿಕೆಟ್​ ನೀಡುತ್ತಿದ್ದು, 7 ಪಂದ್ಯಗಳಿಂದ 19.83ರ ಸರಾಸರಿಯಲ್ಲಿ ಕೇವಲ 119ರನ್​ಗಳಿಸಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ವಿರಾಟ್​ ಕೊಹ್ಲಿಗೆ ಒಂದು ಬ್ರೇಕ್ ಬೇಕಿದೆ. ಅವರು ತಮ್ಮ ತಲೆಯಲ್ಲಿರುವ ಗೊಂದಲಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವುದಕ್ಕೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸುವ ಅಗತ್ಯವಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

"ವಿರಾಟ್​ ಕೊಹ್ಲಿ ತುಂಬಾ ದಣಿದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾರಿಗಾದರೂ ವಿರಾಮದ ಅಗತ್ಯವಿದೆ ಎಂದಾದರೆ, ಅದು ವಿರಾಟ್‌ ಕೊಹ್ಲಿಗೆ ಮಾತ್ರ" ಎಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್​ ಡಕ್​ಔಟ್ ಆದ ನಂತರ ರವಿಶಾಸ್ತ್ರಿ ತಿಳಿಸಿದ್ದನ್ನು ಐಸಿಸಿ ತನ್ನ ವೆಬ್​ಸೈಟ್​ನಲ್ಲಿ ಉಲ್ಲೇಖಿಸಿದೆ.

ಇಂಗ್ಲೆಂಡ್​ ಪ್ರವಾಸಕ್ಕೆ ಇನ್ನು 3 ತಿಂಗಳು ಸಮಯವಿದ್ದು, ಕೊಹ್ಲಿ ಕ್ರಿಕೆಟ್​ನಲ್ಲಿ ದೀರ್ಘಸಮಯ ಮುಂದುವರಿಯಬೇಕಾದರೆ, ಒಂದು ಬ್ರೇಕ್​ನ ಅಗತ್ಯವಿದೆ. ಅದು 2 ತಿಂಗಳು ಅಥವಾ ಒಂದುವರೆ ತಿಂಗಳಾಗಲಿ ವಿಶ್ರಾಂತಿ ತೆಗೆದುಕೊಳ್ಳಬೇಕು. ಅದು ಇಂಗ್ಲೆಂಡ್​ ಪ್ರವಾಸದ ನಂತರವಾಗಲಿ ಅಥವಾ ಇಂಗ್ಲೆಂಡ್​ ಪ್ರವಾಸಕ್ಕೂ ಮುನ್ನವಾಗಲಿ, ಖಂಡಿತ ಅವರಿಗೆ ಒಂದು ಬ್ರೇಕ್ ಅಗತ್ಯವಿದೆ. ಏಕೆಂದರೆ ಅವರಲ್ಲಿ ಆರೇಳು ವರ್ಷಗಳ ಕ್ರಿಕೆಟ್​ ಇದೆ ಮತ್ತು ಅದನ್ನು ಅವರು ದಣಿದಿರುವ ಮನಸ್ಸಿನಲ್ಲಿ ಆಡಿ ವ್ಯರ್ಥಮಾಡಿಕೊಳ್ಳಬಾರದು ಎಂದು ಶಾಸ್ತ್ರಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ವೈಫಲ್ಯದ ಹೊರತಾಗಿಯೂ ಆರ್​ಸಿಬಿ 2022ರ ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಆಡಿರುವ 7 ಪಂದ್ಯಗಳಲ್ಲಿ 2 ಸೋಲು 5 ಗೆಲುವುಗಳೊಂದಿಗೆ 2ನೇ ಸ್ಥಾನದಲ್ಲಿದೆ. ಇನ್ನು 7 ಲೀಗ್​ ಪಂದ್ಯಗಳಿದ್ದು, ಕೊಹ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ನೋಡಬೇಕಿದೆ.

ಇದನ್ನೂ ಓದಿ:ಡುಪ್ಲೆಸಿಸ್ ಕೆಚ್ಚೆದೆಯ ಬ್ಯಾಟಿಂಗ್​, ಬೌಲರ್​ಗಳ ಮಿಂಚು: ಲಖನೌ ವಿರುದ್ಧ ಗೆದ್ದ ರಾಯಲ್​ ಚಾಲೆಂಜರ್ಸ್​​

ABOUT THE AUTHOR

...view details