ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿ ಮಾರ್ಚ್ 26ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರನ್ನರ್ ಅಪ್ ಕೋಲ್ಕತ್ತಾ ನೈಟ್ರೈಡರ್ಸ್ ತಂಡಗಳು ಸೆಣಸಾಡಲಿವೆ.
ಮಾರ್ಚ್ 26ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಲಿದೆ. ಮೇ 29ರಂದು ಫೈನಲ್ ಪಂದ್ಯ ಜರುಗಲಿದೆ.
ಕೆಕೆಆರ್ ಮತ್ತು ಸಿಎಸ್ಕೆ ಮಾರ್ಚ್ 26ರಂದು ಉದ್ಘಾಟನಾ ಪಂದ್ಯದಲ್ಲಿ ಆಡಲಿವೆ. ಮಹಾರಾಷ್ಟ್ರ ಸರ್ಕಾರ ತಂಡಗಳು ಹೋಟೆಲ್ನಿಂದ ಮೈದಾನಾಕ್ಕೆ ತೆರಳುವುದಕ್ಕೆ ಟ್ರಾಫಿಕ್ ನಿಭಾಯಿಸಲು ಗ್ರೀನ್ ಚಾನಲ್ಗೂ ಅನುಮತಿ ನೀಡಿದೆ. ಜೊತೆಗೆ ಆರಂಭಿಕ ಹಂತದಲ್ಲಿ ಶೇ.25 ಮಂದಿಗೆ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸುವುದಕ್ಕೂ ಸರ್ಕಾರ ಅನುಮತಿ ನೀಡಲಾಗಿದೆ" ಎಂದು ತಿಳಿಸಿದೆ.
2022ರ ಐಪಿಎಲ್ ಟೂರ್ನಿಯ ಎಲ್ಲಾ ಲೀಗ್ ಪಂದ್ಯಗಳು ಮಹಾರಾಷ್ಟ್ರದಲ್ಲೇ ನಡೆಯಲಿವೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 20 , ಬ್ರಬೋರ್ನ್ ಸ್ಟೇಡಿಯಂನಲ್ಲಿ 20 ಹಾಗೂ ಡಿ.ವೈ ಪಾಟಿಲ್ ಕ್ರೀಡಾಂಗಣದಲ್ಲಿ 15 ಪಂದ್ಯಗಳು ನಡೆಯಲಿದೆ. ಪುಣೆಯ ಎಂಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ 15 ಪಂದ್ಯಗಳು ನಡೆಯಲಿವೆ.
ಪ್ರತಿಯೊಂದು ತಂಡಗಳು ವಾಂಖೆಡೆ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ತಲಾ 4 ಪಂದ್ಯಗಳು ಮತ್ತು ಬ್ರಬೋರ್ನ್ ಹಾಗೂ ಎಂಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ತಲಾ 3 ಪಂದ್ಯಗಳನ್ನಾಡಲಿದೆ.
ಎಲ್ಲ 10 ತಂಡಗಳು ತಲಾ 14 ಲೀಗ್ ಪಂದ್ಯಗಳನ್ನಾಡಲಿದ್ದು, ತವರಿನಲ್ಲಿ 7 ಮತ್ತು ಹೊರಗೆ 7 ಪಂದ್ಯಗಳನ್ನಾಡಲಿವೆ. ಒಟ್ಟು 70 ಲೀಗ್ ಪಂದ್ಯಗಳು ಮತ್ತು 4 ಪ್ಲೇ ಆಫ್ ಪಂದ್ಯಗಳು ಇರಲಿವೆ. ಪ್ರತಿಯೊಂದು ತಂಡ 5 ತಂಡಗಳೊಂದಿಗೆ 2 ಪಂದ್ಯ ಮತ್ತು 4 ತಂಡಗಳೊಂದಿಗೆ ಒಂದೊಂದು ಪಂದ್ಯದವನ್ನಾಡಲಿದೆ.
ಇದನ್ನೂ ಓದಿ:ಅತಿ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಕ್ರಿಕೆಟಿಗ : ರೋಹಿತ್ ಶರ್ಮಾ ಹೆಸರಿಗೆ ವಿಶ್ವದಾಖಲೆಯ ಗರಿ