ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು ಲಖನೌ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಲಿವೆ. ಉಭಯ ತಂಡಗಳಿಗೂ ಈ ಪಂದ್ಯ ಅಗ್ನಿಪರೀಕ್ಷೆಯಾಗಿದ್ದು, ಗೆದ್ದು ಶುಭಾರಂಭ ಮಾಡುವ ತವಕದಲ್ಲಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಸಂಜೆ 7:30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.
ಲಖನೌ ತಂಡದ ಸಾರಥ್ಯವನ್ನು ಕನ್ನಡಿಗೆ ಕೆ.ಎಲ್.ರಾಹುಲ್ ವಹಿಸಿಕೊಂಡಿದ್ದು, ಗುಜರಾತ್ ತಂಡಕ್ಕೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನೇತೃತ್ವವಿದೆ. ಈಗಾಗಲೇ ಪಂಜಾಬ್ ತಂಡದ ಕ್ಯಾಪ್ಟನ್ ಆಗಿದ್ದ ಅನುಭವ ಹೊಂದಿರುವ ರಾಹುಲ್ ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ, ಕಳೆದ ಆವೃತ್ತಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಹಾರ್ದಿಕ್ ನವೋತ್ಸಾಹದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ.
ಇದನ್ನೂ ಓದಿ:ಐಪಿಎಲ್ 2022: ನಿಧಾನಗತಿಯ ಬೌಲಿಂಗ್ ; ಮುಂಬೈ ನಾಯಕ ರೋಹಿತ್‌ಗೆ ₹12 ಲಕ್ಷ ದಂಡ
ಲಖನೌ ತಂಡದಲ್ಲಿ ಕೆ.ಎಲ್.ರಾಹುಲ್ ಜೊತೆ ಕನ್ನಡಿಗ ಮನೀಷ್ ಪಾಂಡೆ, ಕೃಷ್ಣಪ್ಪ ಗೌತಮ್ ಇದ್ದು, ಆಲ್ರೌಂಡರ್ಗಳಾಗಿ ಕೃಣಾಲ್ ಪಾಂಡ್ಯ, ದೀಪಕ್ ಹೂಡಾ ಇರಲಿದ್ದಾರೆ. ವಿಕೆಟ್ ಕೀಪರ್ ಆಗಿ ಕ್ವಿಂಟನ್ ಡಿಕಾಕ್ ಸಹ ಇರುವುದು ತಂಡದ ಸಾಮರ್ಥ್ಯ ಹೆಚ್ಚಿಸಿದೆ. ಗುಜರಾತ್ ತಂಡದಲ್ಲಿ ಹಾರ್ದಿಕ್ ಪಾಂಡ್ಯಾ ಜೊತೆ ಶುಭ್ಮನ್ ಗಿಲ್, ವಿಜಯಶಂಕರ್, ರಾಹುಲ್ ತೆವಾಟಿಯಾ, ಜಯಂತ್ ಯಾದವ್, ವೇಗದ ಬೌಲರ್ ಮೊಹಮ್ಮದ್ ಶಮಿ ಜೊತೆ ಅಫ್ಘಾನಿಸ್ತಾನದ ರಶೀದ್ ಖಾನ್ ಇದ್ದಾರೆ.
ಉಭಯ ತಂಡಗಳು: ಲಖನೌ ಸೂಪರ್ ಜೈಂಟ್ಸ್- ಕೆ.ಎಲ್.ರಾಹುಲ್(ಕ್ಯಾಪ್ಟನ್), ಮನನ್ ವೋಹ್ರಾ, ಲೂಯಿಸ್, ಮನೀಷ್ ಪಾಂಡೆ, ಕ್ವಿಂಟನ್ ಡಿಕಾಕ್, ರವಿ ಬಿಷ್ಣೋಯ್, ದುಷ್ಮಂತಾ ಚಮೀರಾ, ಶಬಾಜ್ ನದೀಮ್,ಮೊಹಸಿನ್ ಖಾನ್, ಮಯಾಂಕ್ ಯಾದವ್, ಅಂಕಿತ್ ರಜಪೂತ್, ಆವೇಶ್ ಖಾನ್, ಮಾರ್ಕಸ್ ಸ್ಟೋಯ್ನಿಸ್, ಕೈಲ್ ಮೇಯರ್ಸ್, ಕರಣ್ ಶರ್ಮಾ, ಆಯುಷ್ ಬದೋನಿ, ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಜೇಸನ್ ಹೋಲ್ಡರ್
ಗುಜರಾತ್ ಟೈಟನ್ಸ್:ಹಾರ್ದಿಕ್ ಪಾಂಡ್ಯ(ಕ್ಯಾಪ್ಟನ್), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ಗುರುಕೀರತ್ ಸಿಂಗ್, ಸಾಯಿ ಸುದರ್ಶನ್, ಶುಭಮನ್ ಗಿಲ್, ರಾಹುಲ್ ತೆವಾಟಿಯಾ, ವಿಜಯಶಂಕರ್, ಮ್ಯಾಥ್ಯೂ ವೇಡ್, ಗುರ್ಬಾಜ್, ವೃದ್ಧಿಮಾನ್ ಸಾಹಾ, ಜೋಸೆಫ್, ದರ್ಶನ್ ನಾಲ್ಕಂಡೆ, ಡಾಮ್ನಿಕ್ ಡ್ರೇಕ್ಸ್, ಜಯಂತ್ ಯಾದವ್, ಲಾಕಿ ಫರ್ಗ್ಯುಸನ್, ಮೊಹಮ್ಮದ್ ಶಮಿ, ನೂರ್ ಅಹಮ್ಮದ್, ರಶೀದ್ ಖಾನ್, ವರುಣ್ ಆ್ಯರನ್, ಯಶ್ ದಯಾಳ್