ಮುಂಬೈ: ಡೇವಿಡ್ ಮಿಲ್ಲರ್ ಮತ್ತು ರಾಹುಲ್ ತೆವಾಟಿಯಾ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ್ದ 171 ರನ್ಗಳ ಸವಾಲಿನ ಮೊತ್ತವನ್ನು ಗುಜರಾತ್ ಟೈಟನ್ಸ್ 4 ವಿಕೆಟ್ ಕಳೆದುಕೊಂಡು ಇನ್ನೂ 3 ಎಸೆತಗಳಿರುವಂತೆ ತಲುಪುವ ಮೂಲಕ ಟೂರ್ನಿಯಲ್ಲಿ ತಮ್ಮ ನಾಗಾಲೋಟವನ್ನು ಮುಂದುವರಿಸಿದೆ
ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬ್ಯಾಟಿಂಗ್ ಮಾಡುವ ಅಚ್ಚರಿಯ ನಿರ್ಧಾರ ತೆಗೆದುಕೊಂಡಿತು. ವಿರಾಟ್ ಕೊಹ್ಲಿ 53 ಮತ್ತು ರಜತ್ ಪಾಟೀದಾರ್ 52 ಮತ್ತು ಮ್ಯಾಕ್ಸ್ವೆಲ್ ಅವರ 33 ರನ್ಗಳ ನೆರವಿನಿಂದ ಟೈಟನ್ಸ್ಗೆ 171 ರನ್ಗಳ ಗುರಿ ನೀಡಿತ್ತು.
ಸವಾಲಿನ ಗುರಿ ಬೆನ್ನಟ್ಟಿದ ಟೈಟನ್ಸ್ಗೆ ವೃದ್ಧಿಮಾನ್ ಸಹಾ ಮತ್ತು ಶುಬ್ಮನ್ ಗಿಲ್ ಮೊದಲ ವಿಕೆಟ್ಗೆ 51 ರನ್ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿಕೊಟ್ಟರು. 22 ಎಸೆತಗಳಲ್ಲಿ 4 ಬೌಂಡರಿ ಸಹಿತ 29 ರನ್ಗಳಿಸಿದ್ದ ಸಹಾ ಹಸರಂಗಗೆ ವಿಕೆಟ್ ಒಪ್ಪಿಸಿದರು. ನಂತರದ ಓವರ್ನಲ್ಲೇ 28 ಎಸೆತಗಳಲ್ಲಿ 31 ರನ್ಗಳಿಸಿದ್ದ ಶುಬ್ಮನ್ ಗಿಲ್ ಶಹಬಾಜ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
ಉತ್ತಮ ಆರಂಭ ಪಡೆದಿದ್ದ ಟೈಟನ್ಸ್ಗೆ ಶಹಬಾಜ್ ನಾಯಕ ಹಾರ್ದಿಕ್ ಪಾಂಡ್ಯ(3) ವಿಕೆಟ್ ಪಡೆಯುವ ಮೂಲಕ ಮತ್ತೊಂದು ಹೊಡೆತ ನೀಡಿದರು. ಯುವ ಬ್ಯಾಟರ್ ಸಾಯಿ ಸುದರ್ಶನ್ ಕೂಡ 20 ರನ್ಗಳಿಗೆ ವಿಕೆಟ್ ಒಪ್ಪಿಸಿದರು.