ಬೆಂಗಳೂರು:ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಗಾಗಿ ಇದೇ ತಿಂಗಳ 12, 13ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಭಾರತೀಯ ಕ್ರಿಕೆಟ್ ಮಂಡಳಿಯಿಂದ 590 ಆಟಗಾರರ ಫೈನಲ್ ಲಿಸ್ಟ್ ಇಂದು ರಿಲೀಸ್ ಆಗಿದೆ.
2022ರ ಐಪಿಎಲ್ ಹರಾಜಿಗೋಸ್ಕರ ಒಟ್ಟು 1200ಕ್ಕೂ ಅಧಿಕ ಪ್ಲೇಯರ್ಸ್ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಆದರೆ, ಬಿಸಿಸಿಐ 590 ಪ್ಲೇಯರ್ಸ್ ಹೆಸರು ಫೈನಲ್ ಮಾಡಿದ್ದು, ಅಚ್ಚರಿಯ ರೀತಿಯಲ್ಲಿ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರ ಹೆಸರು ಕಾಣಿಸಿಕೊಂಡಿದೆ. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ವೇಳೆ ಟಿಎಂಸಿ ಸೇರಿ ಜಯಭೇರಿ ಬಾರಿಸಿರುವ ಕ್ರಿಕೆಟರ್ ಮನೋಜ್ ತಿವಾರಿ ಈಗಾಗಲೇ ಕ್ರೀಡಾ ಸಚಿವರಾಗಿ ಕೆಲಸ ಮಾಡ್ತಿದ್ದು, ಇದೀಗ ಐಪಿಎಲ್ ಹರಾಜಿನಲ್ಲೂ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
ಐಪಿಎಲ್ ಹರಾಜು ಲಿಸ್ಟ್ನಲ್ಲಿ ಮನೋಜ್ ತಿವಾರಿ.. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮನೋಜ್ ತಿವಾರಿ ಡೆಲ್ಲಿ ಡೇರ್ ಡೆವಿಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಪುಣೆ ಸೂಪರ್ಜೈಂಟ್ಸ್, ಪಂಜಾಬ್ ಕಿಂಗ್ಸ್ ಪರವಾಗಿ 98 ಪಂದ್ಯಗಳನ್ನಾಡಿದ್ದಾರೆ. 7 ಅರ್ಧಶತಕ ಸೇರಿದಂತೆ 1,695ರನ್ಗಳಿಕೆ ಮಾಡಿದ್ದು, ಒಂದು ವಿಕೆಟ್ ಸಹ ಪಡೆದುಕೊಂಡಿದ್ದಾರೆ. 2018ರ ಐಪಿಎಲ್ನಲ್ಲಿ ಕೊನೆಯದಾಗಿ ಪಂಜಾಬ್ ಪರ ಕಣಕ್ಕಿಳಿದಿದ್ದರು.
ಇದನ್ನೂ ಓದಿರಿ:IPL 2022 Auctionಗೆ ಫೈನಲ್ ಲಿಸ್ಟ್ ಬಿಡುಗಡೆ.. ಹರಾಜಿಗೆ ವಾರ್ನರ್, ಧವನ್, ರಬಾಡ ಸೇರಿ 590 ಆಟಗಾರರು..
50 ಲಕ್ಷ ರೂಪಾಯಿಗೆ ಬಿಕರಿಯಾಗಿರುವ ಮನೋಜ್ ತಿವಾರಿ, 2020ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಅನ್ಸೋಲ್ಡ್ ಆಗಿದ್ದರು. 36 ವರ್ಷದ ಮನೋಜ್ ತಿವಾರಿ ಪಶ್ಚಿಮ ಬಂಗಾಳ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಆಗಿದ್ದು, ರಣಜಿ ಟ್ರೋಪಿಗೋಸ್ಕರ ಘೋಷಣೆಯಾಗಿದ್ದ 21 ಸದಸ್ಯರ ತಂಡದಲ್ಲಿ ಇವರ ಹೆಸರು ಸಹ ಇತ್ತು. 2020ರಲ್ಲಿ ಸೌರಾಷ್ಟ್ರ ವಿರುದ್ಧ ನಡೆದ ರಣಜಿ ಫೈನಲ್ ಪಂದ್ಯದಲ್ಲಿ ಮನೋಜ್ ತಿವಾರಿ ಬೆಂಗಾಲ್ ತಂಡದ ಪರ ಕಣಕ್ಕಿಳಿದಿದ್ದರು.
ಟೀಂ ಇಂಡಿಯಾ ಪರ 12 ಏಕದಿನ, ಮೂರು ಟಿ20 ಪಂದ್ಯಗಳನ್ನಾಡಿರುವ ತಿವಾರಿ, 125 ಪ್ರಥಮ ದರ್ಜೆ ಹಾಗೂ 163 ಲಿಸ್ಟ್ A ಪಂದ್ಯಗಳನ್ನಾಡುವ ಮೂಲಕ 14000 ರನ್ಗಳಿಕೆ ಮಾಡಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ ಪುತ್ರ ಅರ್ಜುನ್ ತೆಂಡೂಲ್ಕರ್ 20 ಲಕ್ಷ ರೂ. ಬಿಕರಿ ಆಗಿದ್ದು, ಹರಾಜಿನಲ್ಲಿ ಭಾಗಿಯಾಗಲಿದ್ದಾರೆ. ಕಳೆದ ಸಲ ನಡೆದ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಅರ್ಜುನ್ಗೆ ಮುಖಬೆಲೆ ನೀಡಿ ಖರೀದಿ ಮಾಡಿದ್ರೂ, ಯಾವುದೇ ಪಂದ್ಯದಲ್ಲಿ ಭಾಗಿಯಾಗುವ ಅವಕಾಶ ನೀಡಿರಲಿಲ್ಲ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ