ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಇಶನ್ ಕಿಶನ್ ಸತತ ವೈಫಲ್ಯಕ್ಕೊಳಗಾಗಿ ಕಳೆದ ಕೆಲ ದಿನಗಳ ಹಿಂದೆ ಕಣ್ಣೀರಿಟ್ಟಿದ್ದ ಘಟನೆ ನಡೆದಿತ್ತು. ಈ ವೇಳೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಹೆಗಲ ಮೇಲೆ ಕೈಯಿಟ್ಟು ಮಗುವಿನಂತೆ ಸಂತೈಸಿ, ಆತ್ಮವಿಶ್ವಾಸ ತುಂಬಿದ್ದರು. ಇದರಿಂದ ಆತ್ಮವಿಶ್ವಾಸಕ್ಕೆ ಮರಳಿರುವ ಯಂಗ್ ಪ್ಲೇಯರ್ ಇಶನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ನಿನ್ನೆ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ ಅಜೇಯ ಅರ್ಧಶತಕ(50)ಗಳಿಸಿದ್ದು, ಮರಳಿ ಲಯ ಕಂಡುಕೊಂಡಿದ್ದಾರೆ.
ಇದನ್ನೂ ಓದಿರಿ:ಕಣ್ಣೀರಿಡುತ್ತಿದ್ದ ಇಶಾನ್ರನ್ನು ಮಗುವಿನಂತೆ ಸಂತೈಸಿದ ಕೊಹ್ಲಿ.. ವಿಡಿಯೋ
ನಿನ್ನೆಯ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಇಶನ್ ಕಿಶನ್, ಸತತ ವೈಫಲ್ಯಕ್ಕೊಳಗಾಗಿದ್ದ ನಾನು ವಿರಾಟ್ ಭಾಯ್, ಹಾರ್ದಿಕ್ ಭಾಯ್ ಹಾಗೂ ಪೊಲಾರ್ಡ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನು. ಈ ವೇಳೆ, ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದರು. ಹೆಚ್ಚು ಒತ್ತಡಕ್ಕೊಳಗಾಗದೇ ಪಂದ್ಯಗಳತ್ತ ಗಮನ ಹರಿಸಿದ್ದರಿಂದ ಇದೀಗ ರನ್ಗಳಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದ್ದ ಕಿಶನ್ ಆರ್ಸಿಬಿ ವಿರುದ್ಧ ಕೇವಲ 9 ರನ್, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 14 ಮತ್ತು ಸಿಎಸ್ಕೆ ವಿರುದ್ಧ 11 ರನ್ಗಳಿಸಿ ಔಟಾಗಿದ್ದರು. ಟಿ-20 ವಿಶ್ವಕಪ್ ಟೂರ್ನಿಗಾಗಿ ಆಯ್ಕೆಯಾಗಿರುವ ತಂಡದಲ್ಲೂ ಅವಕಾಶ ಪಡೆದುಕೊಂಡಿರುವ ಇಶಾನ್ ಕಿಶನ್ ಇದೀಗ ಮರಳಿ ಲಯಕ್ಕೆ ಮರಳಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಖುಷಿ ನೀಡಿದೆ.
ಐಪಿಎಲ್ನಲ್ಲಿ ಸತತ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದ್ದ ಇಶನ್ ಕಿಶನ್ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದ್ದಕ್ಕಾಗಿ ಅನೇಕ ರೀತಿಯ ಆಕ್ರೋಶ ಸಹ ವ್ಯಕ್ತವಾಗಿತ್ತು. ಆದರೆ, ಇದೀಗ ಫಾರ್ಮ್ಗೆ ಮರಳಿದ್ದಾರೆ.