ದುಬೈ:ಎಬಿ ಡಿ -ವಿಲಿಯರ್ಸ್ ಈ ರೀತಿ ಆಟವಾಡಿದರೆ ಯಾವುದೇ ಮೊತ್ತವೂ ಕೂಡಾ ಸುರಕ್ಷಿತವಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ರೌಂಡರ್ ಆಟಗಾರ ಕ್ರಿಸ್ ಮೋರಿಸ್ ಅಭಿಪ್ರಾಯಪಟ್ಟಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್ಗಳ ಜಯಗಳಿಸಿದ ನಂತರ ಮಾತನಾಡಿದ ಕ್ರಿಸ್ ಮೋರಿಸ್ ಈ ರೀತಿಯಾಗಿ ಅಭಿಪ್ರಾಯಪಟ್ಟಿದ್ದು, ಎಬಿಡಿ ಕ್ರೀಸ್ನಲ್ಲಿರುವಾಗ ಬೌಲರ್ಗಳಿಗೆ ಬೌಲಿಂಗ್ ಮಾಡಲು ಕಷ್ಟವಾಗುತ್ತದೆ.
ನೆಟ್ನಲ್ಲಿ ತರಬೇತಿ ಪಡೆಯುವಾಗಲೆಲ್ಲ ಎಬಿಡಿಗೆ ಬೌಲ್ ಮಾಡಲು ನಾನು ತುಂಬಾ ಕಷ್ಟ ಪಡುತ್ತೇನೆ. ಎಬಿಡಿಗೆ ಬೌಲ್ ಮಾಡಲು ನನ್ನ ಬಳಿ ಯಾವುದೇ ಯೋಜನೆ ಅಥವಾ ತಂತ್ರಗಳಿಲ್ಲ ಎಂದು ಮೋರಿಸ್ ಸ್ಪಷ್ಟನೆ ನೀಡಿದ್ದಾರೆ.