ಕರ್ನಾಟಕ

karnataka

ETV Bharat / sports

ಅಗ್ರಸ್ಥಾನಕ್ಕಾಗಿ ಟಾಪ್​ 2 ತಂಡಗಳ ನಡುವೆ ಹೈವೋಲ್ಟೇಜ್​ ಕದನ... ಮುಂಬೈ-ಬೆಂಗಳೂರು ಫೈಟ್​! - ಮುಂಬೈ ಇಂಡಿಯನ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಇಂದು ಮುಂಬೈ ಇಂಡಿಯನ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಫೈಟ್​ ನಡೆಸಲಿದ್ದು, ಗೆಲ್ಲುವ ತಂಡ ಫ್ಲೇ-ಆಫ್​ ಹಂತಕ್ಕೆ ಲಗ್ಗೆ ಹಾಕಲಿದೆ.

Mumbai Indians vs Royal Challengers Bangalore
Mumbai Indians vs Royal Challengers Bangalore

By

Published : Oct 28, 2020, 4:43 AM IST

Updated : Oct 28, 2020, 5:37 PM IST

ಅಬುಧಾಬಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಇಂದು ಅಗ್ರಸ್ಥಾನಕ್ಕಾಗಿ ಎರಡು ಬಲಿಷ್ಠ ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು, ಫ್ಲೇ-ಆಫ್​ ಹಂತಕ್ಕೆ ಲಗ್ಗೆ ಹಾಕುವ ಉದ್ದೇಶದಿಂದ ಈ ಪಂದ್ಯ ಮಹತ್ವ ಪಡೆದುಕೊಂಡಿದೆ.

ಅಬುಧಾಬಿಯ ಶೇಖ್​ ಝಾಯೆದ್​ ಮೈದಾನದಲ್ಲಿ ಮುಂಬೈ ಇಂಡಿಯನ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿಯಾಗಲಿದ್ದು, ಪಂದ್ಯ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಅಂಕಪಟ್ಟಿಯಲ್ಲಿ ಉಭಯ ತಂಡಗಳು ಕ್ರಮವಾಗಿ ಟಾಪ್​ 1 ಹಾಗೂ ಟಾಪ್​ 2 ಸ್ಥಾನದಲ್ಲಿವೆ.

ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಆರ್​ಸಿಬಿ ಸೂಪರ್​ ಓವರ್​ನಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಮುಂಬೈ ತಂಡ ತಿರುಗೇಟು ನೀಡುವ ಇರಾದೆಯಲ್ಲಿದೆ. ತಂಡಕ್ಕೆ ರೋಹಿತ್​ ಶರ್ಮಾ ಅಲಭ್ಯತೆ ಎದ್ದು ಕಾಣುತ್ತಿದ್ದು, ಇದರ ಮಧ್ಯೆ ತಂಡವನ್ನ ಮುನ್ನಡೆಸುವ ಜವಾಬ್ದಾರಿ ಆಲ್​ರೌಂಡರ್​ ಪೊಲಾರ್ಡ್​ ಹೆಗಲಿಗೆ ನೀಡಲಾಗಿದೆ.

ರಾಜಸ್ಥಾನ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಉತ್ತಮ ಸ್ಕೋರ್​ ಗಳಿಕೆ ಮಾಡಿದ್ರೂ ಕೂಡ ಮುಂಬೈ ತಂಡ ಸೋಲು ಕಂಡಿದೆ. ಇನ್ನು ಚೆನ್ನೈ ವಿರುದ್ಧ ಆರ್​ಸಿಬಿ ಕೂಡ ಸೋಲು ಕಂಡಿದೆ. ಇದೀಗ ಗೆಲುವಿನ ಟ್ರ್ಯಾಕ್​ಗೆ ಮರಳುವ ಉದ್ದೇಶದಿಂದ ಇಂದಿನ ಪಂದ್ಯದಲ್ಲಿ ಉಭಯ ತಂಡಗಳು ಕಣಕ್ಕಿಳಿಯಲಿವೆ. ಉಭಯ ತಂಡಗಳು ಆಡಿರುವ 11 ಪಂದ್ಯಗಳ ಪೈಕಿ 7ರಲ್ಲಿ ಗೆಲುವು ಸಾಧಿಸಿವೆ.

ಸಂಭವನೀಯ ತಂಡ ಇಂತಿವೆ

ಮುಂಬೈ ಇಂಡಿಯನ್ಸ್​:ಕ್ವಿಂಟನ್​ ಡಿಕಾಕ್​(ವಿ.ಕೀ), ಇಶನ್​ ಕಿಶನ್​, ಸೂರ್ಯಕುಮಾರ್ ಯಾದವ್​, ಸೌರಭ ತಿವಾರಿ, ಹಾರ್ದಿಕ್​ ಪಾಂಡ್ಯ, ಕಿರಣ್​ ಪೊಲಾರ್ಡ್​(ಕ್ಯಾಪ್ಟನ್​), ಕೃನಾಲ್​ ಪಾಂಡ್ಯ, ಜೇಮ್ಸ್​ ಪ್ಯಾಟಿನ್ಸನ್​, ರಾಹುಲ್​ ಚಹಾರ್​, ಬೌಲ್ಟ್​, ಜಸ್​ಪ್ರೀತ್​ ಬುಮ್ರಾ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ದೇವದತ್​ ಪಡಿಕ್ಕಲ್​, ಆ್ಯರೊನ್​ ಫಿಂಚ್​​, ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ಎಬಿ ಡಿವಿಲಿಯರ್ಸ್​(ವಿ.ಕೀ), ಗುರುಕಿರತ್​ ಸಿಂಗ್​, ಕ್ರಿಸ್​ ಮೊರಿಸ್​, ವಾಷಿಂಗ್ಟನ್​ ಸುಂದರ್​, ಇರುಸ್ ಉದಾನ್​, ನವದೀಪ್​ ಸೈನಿ, ಮೊಹಮ್ಮದ್​ ಸಿರಾಜ್​, ಯಜುವೇಂದ್ರ ಚಹಾಲ್​

Last Updated : Oct 28, 2020, 5:37 PM IST

ABOUT THE AUTHOR

...view details