ಕರ್ನಾಟಕ

karnataka

ETV Bharat / sports

ಟಾಸ್​ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ: ರಾಜಸ್ಥಾನ ಮಣಿಸಿ ಅಗ್ರಸ್ಥಾನಕ್ಕೇರುತ್ತಾ ಐಯ್ಯರ್ ಪಡೆ? - ರಾಜಸ್ಥಾನ ಮಣಿಸಿ ಅಗ್ರಸ್ಥಾನಕ್ಕೇರುತ್ತಾ ಅಯ್ಯರ್ ಪಡೆ

ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್​​ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ​ ಸೆಣಸಾಟ ನಡೆಸಲಿದ್ದು, ಮೊದಲನೇ ಸ್ಥಾನಕ್ಕೆ ಲಗ್ಗೆ ಹಾಕುವ ಉದ್ದೇಶದಿಂದ ಡೆಲ್ಲಿ ಮೈದಾನಕ್ಕಿಳಿದಿದೆ.

DC win toss
ಟಾಸ್​ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ

By

Published : Oct 14, 2020, 7:33 PM IST

ದುಬೈ:ಇಂಡಿಯನ್ ಪ್ರೀಮಿಯರ್ ಲೀಗ್ 30ನೇ ಪಂದ್ಯದಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್​​ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ​ ಸೆಣಸಾಟ ನಡೆಸಲಿದ್ದು, ಮೊದಲನೇ ಸ್ಥಾನಕ್ಕೆ ಲಗ್ಗೆ ಹಾಕುವ ಉದ್ದೇಶದಿಂದ ಡೆಲ್ಲಿ ಮೈದಾನಕ್ಕಿಳಿದಿದೆ. ಆಡಿರುವ 7 ಪಂದ್ಯಗಳ ಪೈಕಿ ಡೆಲ್ಲಿ ತಂಡ 5ರಲ್ಲಿ ಗೆಲುವು ಸಾಧಿಸಿ 10 ಅಂಕಗಳೊಂದಿಗೆ ಸದ್ಯ ಎರಡನೇ ಸ್ಥಾನದಲ್ಲಿದೆ. ಇನ್ನು ರಾಜಸ್ಥಾನ ತಂಡ ಏಳು ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಗೆಲುವು ಸಾಧಿಸಿ 7ನೇ ಸ್ಥಾನದಲ್ಲಿದೆ.

ಮುಂಬೈ ಇಂಡಿಯನ್ಸ್​ ವಿರುದ್ಧ ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಸೋಲು ಕಂಡಿದ್ದು, ಇಂದಿನ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡುವ ಇರಾದೆಯಲ್ಲಿದೆ. ಆದರೆ ಪ್ಲೇ-ಆಫ್​ ಆಸೆ ಜೀವಂತವಾಗಿಟ್ಟುಕೊಳ್ಳಬೇಕಾದರೆ ರಾಜಸ್ಥಾನ ತಂಡಕ್ಕೆ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಇದೆ. ರಾಜಸ್ಥಾನ ರಾಯಲ್ಸ್​ ತಂಡಕ್ಕೆ ಬೆನ್​ ಸ್ಟೋಕ್ಸ್​​ ಕಮ್​ಬ್ಯಾಕ್​ ಮಾಡಿದ್ದು, ಇಂದಿನ ಪಂದ್ಯದಲ್ಲಿ ಆರ್ಭಟಿಸಬೇಕಾಗಿದೆ.

ತಂಡಗಳು

ರಾಜಸ್ಥಾನ ರಾಯಲ್ಸ್​​:ಬೆನ್​​ ಸ್ಟೋಕ್ಸ್​, ಸಂಜು ಸ್ಯಾಮ್ಸನ್​, ಜೊಸ್​ ಬಟ್ಲರ್​​(ವಿ.ಕೀ), ಸ್ಟೀವ್​ ಸ್ಮಿತ್​(ಕ್ಯಾಪ್ಟನ್​), ರಾಬಿನ್ ಉತ್ತಪ್ಪ, ರಿಯಾನ್ ಪರಾಗ್​, ರಾಹುಲ್​ ತೆವಾಟಿಯಾ, ಜೋಪ್ರಾ ಆರ್ಚರ್​, ಶ್ರೇಯಸ್ ಗೋಪಾಲ್, ಜಯದೇವ್​ ಉನಾದ್ಕಟ್, ಕಾರ್ತಿಕ್​ ತ್ಯಾಗಿ.

ಡೆಲ್ಲಿ ಕ್ಯಾಪಿಟಲ್ಸ್​​: ಶ್ರೇಯಸ್​ ಐಯ್ಯರ್​​(ಕ್ಯಾಪ್ಟನ್​), ಪೃಥ್ವಿ ಶಾ, ಶಿಖರ್​ ಧವನ್​, ರಹಾನೆ, ಸ್ಟೋಯ್ನಿಸ್, ​ಅಲೆಕ್ಸ್​ ಕ್ಯಾರಿ(ವಿ.ಕೀ), ಅಕ್ಸರ್​ ಪಟೇಲ್​, ಆರ್​.ಅಶ್ವಿನ್​, ತುಶಾರ್ ದೇಶಪಾಂಡೆ, ರಬಾಡಾ, ಅನ್ರಿಚ್ ನಾರ್ಟ್ಜೆ.

ABOUT THE AUTHOR

...view details