ಕರ್ನಾಟಕ

karnataka

ETV Bharat / sports

ರೋಹಿತ್​ ಬಳಿಕ ರಹಾನೆ:  ನಿಧಾನಗತಿ ಬೌಲಿಂಗ್​ಗಾಗಿ ದಂಡ ತೆತ್ತ ರಾಜಸ್ಥಾನ ಕ್ಯಾಪ್ಟನ್​!

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ರೋಹಿತ್​ ಶರ್ಮಾ ಬಳಿಕ ಇದೀಗ ರಹಾನೆಗೂ ದಂಡ ವಿಧಿಸಲಾಗಿದೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜಸ್ಥಾನ ರಾಯಲ್ಸ್​ ಕ್ಯಾಪ್ಟನ್​ ರಹಾನೆ

By

Published : Apr 1, 2019, 3:59 PM IST

ಚೆನ್ನೈ:ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್​ ಕ್ಯಾಪ್ಟನ್​ ದಂಡ ತೆತ್ತಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ ಇದು ಎರಡನೇ ಪ್ರಕರಣವಾಗಿದೆ.

ನಿನ್ನೆ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಕ್ಯಾಪ್ಟನ್​ ಅಜಿಂಕ್ಯಾ ರಹಾನೆ ನಿಧಾನಗತಿ ಬೌಲಿಂಗ್​ ಮಾಡಿಸಿದ್ದರು. ಹೀಗಾಗಿ ಅವರು ಐಪಿಎಲ್​ ನೀತಿ ಸಂಹಿತೆ ಉಲ್ಲಂಘನೆ ಮಾಡಿದಕ್ಕಾಗಿ 12 ಲಕ್ಷ ದಂಡ ವಿಧಿಸಲಾಗಿದೆ. ಈಗಾಗಲೇ ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕಾಗಿ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ದಂಡ ವಿಧಿಸಲಾಗಿತ್ತು.

ನಿಧಾನಗತಿ ಬೌಲಿಂಗ್​​: ಮುಂಬೈ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ದಂಡ

ನಿನ್ನೆಯ ಪಂದ್ಯದಲ್ಲಿ ಚೆನ್ನೈ ನೀಡಿದ್ದ 175ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ರಾಜಸ್ಥಾನ ತಂಡ 167ರನ್​ಗಳಿಕೆ ಮಾಡಿ 8ರನ್​ಗಳ ಅಂತರದ ಸೋಲು ಕಂಡಿದೆ.


ABOUT THE AUTHOR

...view details