ಲಾಹೋರ್: ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಮತ್ತು ಮೂರು ಟಿ-20 ಪಂದ್ಯಗಳ ಸರಣಿ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದ್ದು, ಪಂದ್ಯ ವೀಕ್ಷಣಗೆ ಪ್ರೇಕ್ಷಕರಿಗೆ ಅವಕಾಶ ನೀಡಿಲ್ಲ.
ಪಾಕಿಸ್ತಾನದ ತಂಡವು ಏಪ್ರಿಲ್ 17 ರಂದು ಜಿಂಬಾಬ್ವೆಗೆ ತೆರಳಲಿದ್ದು, ಏಪ್ರಿಲ್ 21 ರಂದು ಮೊದಲ ಟಿ-20 ಪಂದ್ಯ ನಡೆಯಲಿದೆ. ಉಭಯ ತಂಡಗಳ ನಡುವಿನ ಟಿ-20 ಸರಣಿಯ ನಂತರ, ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯವು ಏಪ್ರಿಲ್ 29 ರಿಂದ ಮೇ 3 ರವರೆಗೆ ಮತ್ತು 2ನೇ ಪಂದ್ಯ ಮೇ 7 ರಿಂದ ಮೇ 11 ರವರೆಗೆ ನಡೆಯಲಿವೆ.