ಮುಂಬೈ:ಇಲ್ಲಿಯವರೆಗಿನ ಐಪಿಎಲ್ ಪಂದ್ಯಗಳಲ್ಲಿ ಈ ಸಲ ಕಪ್ ನಮ್ದೇ ಅಂತಾ ಬೀಗುತ್ತಿದ್ದ ಆರ್ಸಿಬಿ ಅಭಿಮಾನಿಗಳಿಗೆ ನಿನ್ನೆ ಮೊದಲಾರ್ಧ ಮ್ಯಾಚ್ ಮತ್ತೆ ರೆಕ್ಕೆಪುಕ್ಕ ಬರುವಂತೆ ಮಾಡಿತ್ತು. ಆದರೆ ಪಂಜಾಬ್ ಆರ್ಭಟಕ್ಕೆ ಆರ್ಸಿಬಿ ತತ್ತರಿಸಿ ಹೋಗಿದೆ.
ಆರ್ಸಿಬಿ ಇನ್ನಿಂಗ್ಸ್:ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಡುಪ್ಲೆಸಿಸ್ ನಾಯಕತ್ವದ ತಂಡವನ್ನು ಪಂಜಾಬ್ ಕಿಂಗ್ಸ್ನ ಕಟ್ಟಿ ಹಾಕುವ ಯೋಜನೆ ಯಶಸ್ವಿಯಾಗಲಿಲ್ಲ. ನಾಯಕ ಮತ್ತು ಮಾಜಿ ನಾಯಕರ 118ರನ್ಗಳ ಜೊತೆಯಾಟ ಬೃಹತ್ ಮೊತ್ತ ಕಲೆ ಸಾಧ್ಯವಾಯಿತು. ಫಾಫ್ ಡುಪ್ಲೆಸಿಸ್ 12ರನ್ಗಳಿಂದ ಈ ಆವೃತ್ತಿಯ ಮೊದಲ ಶತಕದಿಂದ ವಂಚಿತರಾದರು.
ದಿನೇಶ್ ಕಾರ್ತಿಕ್ ಕೊಹ್ಲಿ ಜತೆಗೂಡಿ ಬಿರುಸಿನ ಆಟ ಪ್ರದರ್ಶಿಸಿದರು. ಕೇವಲ 14 ಬಾಲ್ಗಳಲ್ಲಿ 32ರನ್ ಗಳಿಸಿದರು ಮತ್ತು ವಿರಾಟ್ ಕೊಹ್ಲಿ 41ರನ್ ಗಳಿಸಿ ಅಜೇಯರಾಗಿ ಉಳಿದರು. ಐಪಿಎಲ್ 15 ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ನಾಯಕ ಡುಪ್ಲೆಸಿಸ್(88) ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿಯ ಉತ್ತಮ ಜೊತೆಯಾಟದಿಂದ ಪಂಜಾಬ್ ಕಿಂಗ್ಸ್ ವಿರುದ್ಧ 2 ವಿಕೆಟ್ ನಷ್ಟಕ್ಕೆ ಆರ್ಸಿಬಿ 205 ಬೃಹತ್ ಮೊತ್ತ ಕಲೆ ಹಾಕಿತ್ತು. ಪಂಜಾಬ್ ಕಿಂಗ್ಸ್ ಪರ ರಾಹುಲ್ ಚಹರ್, ಅರ್ಷದೀಪ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.
ಓದಿ:ರಷ್ಯಾ - ಉಕ್ರೇನ್ ಯುದ್ಧ: ಟರ್ಕಿಯಲ್ಲಿ ಮುಂದಿನ ಸುತ್ತಿನ ಶಾಂತಿ ಮಾತುಕತೆ
ಪಂಜಾಬ್ ಇನ್ನಿಂಗ್ಸ್:ಆರ್ಸಿಬಿ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ಉತ್ತಮ ಆರಂಭವನ್ನೇ ಪಡೆಯಿತು. ಮಯಾಂಕ್ ಅಗರ್ವಾಲ್ ಮತ್ತು ಶಿಖರ್ ಧವನ್ ಜೊತೆಗೂಡಿ 71 ರನ್ಗಳನ್ನು ಕಲೆ ಹಾಕಿದರು. 32 ರನ್ಗಳಿಸಿ ಮಯಾಂಕ್ ಪೆವಿಲಿಯನ್ ತೆರಳಿದ ಬಳಿಕ ಕಣಕ್ಕಿಳಿದ ರಾಜಪಕ್ಸಾ ಧವನ್ ಜೊತೆ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಬಳಿಕ 43 ರನ್ ಕಲೆ ಹಾಕಿದ್ದ ಶಿಖರ್ ಧವನ್ ಹರ್ಷಲ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು.
ಧವನ್ ಔಟಾದ ಬಳಿಕ ಲಿಯಾಮ್ ಲಿವಿಂಗ್ಸ್ಟೋನ್ ಮೈದಾನಕ್ಕಿಳಿದರು. ಕೆಲ ಓವರ್ ಬಳಿಕ ರಾಜಪಕ್ಸಾ 43 ರನ್ಗಳಿಸಿ ಔಟಾದರು. ರಾಜಪಕ್ಸಾ ಬಳಿಕ ಕಣಕ್ಕಿಳಿದಿದ್ದ ರಾಜಾ ಬಾವಾ ಸಹ ಖಾತೆ ತೆಗೆಯದೇ ಪೆವಿಲಿಯನ್ ಹಾದಿ ಹಿಡಿದರು. 19 ರನ್ಗಳು ಕಲೆ ಹಾಕಿದ್ದ ಲಿವಿಂಗ್ಸ್ಟೋನ್ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲದೇ ಪೆವಲಿಯನ್ ಹಾದಿ ಹಿಡಿದರು.
156ಕ್ಕೆ 5 ವಿಕೆಟ್ಗಳು ಕಳೆದುಕೊಂಡು ಗೆಲವಿನ ಭರವಸೆ ಕಾಣುತ್ತಿದ್ದ ಪಂಜಾಬ್ಗೆ ಸಂಕಷ್ಟ ಎದುರಾಯಿತು. ಆದ್ರೆ ಬಳಿಕ ಬಂದ ಬ್ಯಾಟ್ಸ್ಮನ್ಗಳು ಜವಾಬ್ದಾರಿಯುತ ಮತ್ತು ಉತ್ತಮ ಪ್ರದರ್ಶನ ತೋರುವಲ್ಲಿ ಯಶಸ್ಸಾದರು. ಶಾರುಖ್ ಖಾನ್ ಅಜೇಯರಾಗಿ 24 ರನ್ ಗಳಿಸಿದರೆ, ಕೊನೆಯಲ್ಲಿ ಓಡಿಯನ್ ಸ್ಮಿತ್ ಬಿರುಸಿನ ಆಟ ಪ್ರದರ್ಶಿಸಿದರು. ಕೇವಲ 8 ಎಸೆತಗಳಲ್ಲಿ 3 ಸಿಕ್ಸ್ ಒಂದು ಬೌಂಡರಿ ಬಾರಿಸುವ ಮೂಲಕ 25 ರನ್ಗಳಿಸಿ ಆರ್ಸಿಬಿ ತಂಡದ ಬೌಲರ್ಗಳ ಬೆವರಿಳಿಸಿದರು.
ಓದಿ:ಯೋಗಿ ಆದಿತ್ಯನಾಥ್ಗೂ ಮಂಗಳೂರಿಗೂ ಭಾರಿ ನಂಟು: ಕದ್ರಿ ಯೋಗೀಶ್ವರ ಮಠದಲ್ಲಿ ಕಳೆಕಟ್ಟಿದ ಸಂಭ್ರಮ
ಇನ್ನು ಇನ್ನೊಂದು ಓವರ್ ಬಾಕಿ ಇರುವಾಗಲೇ ತಂಡ ಜಯದ ಹಾದಿ ತಲುಪಿತು. ಪಂಜಾಬ್ ತಂಡ 19 ಓವರ್ಗೆ 5 ವಿಕೆಟ್ಗಳು ನಷ್ಟಕ್ಕೆ 208 ಕಲೆ ಹಾಕುವ ಮೂಲಕ ಆರ್ಸಿಬಿ ವಿರುದ್ಧ ರೋಚಕ ಗೆಲುವು ಸಾಧಿಸಿತು. ಆರ್ಸಿಬಿ ಬೌಲರ್ಗಳು ಪಂಜಾಬ್ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕುವಲ್ಲಿ ಎಡವಿದರು. ಆರ್ಸಿಬಿ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರೆ, ಹಸರಂಗ, ಆಕಾಶ್ ದೀಪ್ ಮತ್ತು ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.