ಕರ್ನಾಟಕ

karnataka

ETV Bharat / sports

ಸಚಿನ್‌ ಡಬಲ್‌ ಸೆಂಚುರಿಗೆ 13 ವರ್ಷ: ಭಾರತದ 'ದ್ವಿಶತಕ' ವೀರರು ಇವರು..

2010ರಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸಚಿನ್​ ತೆಂಡೂಲ್ಕರ್ ತಮ್ಮ ಮೊದಲ ದ್ವಿಶತಕ ಸಾಧನೆ ಮಾಡಿದ್ದರು.

Indian batsmen to slam ODI double tons
ಲಿಟ್ಲ್ ಮಾಸ್ಟರ್ ದ್ವಿಶತಕಕ್ಕೆ 13 ವರ್ಷ

By

Published : Feb 26, 2023, 9:48 AM IST

ಫೆಬ್ರವರಿ 24, 2010. ಇದು ಕ್ರಿಕೆಟ್ ದೇವರೆಂದೇ ಕರೆಸಿಕೊಳ್ಳುವ ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಏಕದಿನ ಮಾದರಿಯಲ್ಲಿ​ ಮೊದಲ ದ್ವಿಶತಕಗಳಿಸಿದ ದಿನ. ಕ್ರಿಕೆಟ್‌​ ಪ್ರೇಮಿಗಳಿಗೆ ಆ ಕ್ಷಣ ಎಂದೂ ಮರೆಯಲಾಗದ್ದು. ಅಲ್ಲಿಂದ ಇಲ್ಲಿಯವರೆಗೆ ಇದೇ ಮಾದರಿಯಲ್ಲಿ ಹತ್ತು ಕ್ರಿಕೆಟಿಗರು (ವಿಶ್ವಾದ್ಯಂತ) ದ್ವಿಶತಕ ಗಳಿಸಿದರೂ ಸಚಿನ್‌ ಮೊದಲ ದ್ವಿಶತಕದಾಟಕ್ಕೆ ವಿಶೇಷ ಪ್ರಾಧಾನ್ಯತೆ ಇದೆ.

ಗ್ವಾಲಿಯರ್‌ನ ರೂಪ್ ಸಿಂಗ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ದ್ವಿಶತಕ ಸಿಡಿಸಿದ ದೇಶದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು. ODIನಲ್ಲಿ ಸಯೀದ್ ಅನ್ವರ್ ಭಾರತದ ವಿರುದ್ಧ ಗಳಿಸಿದ್ದ 194 ರನ್​ ಈ ವಿಭಾಗದ ಗರಿಷ್ಠ ವೈಯಕ್ತಿಕ ಸ್ಕೋರ್‌​ ಆಗಿತ್ತು. ಆದರೆ ಸಚಿನ್​ ಆ ದಾಖಲೆ ಮುರಿದು ಹೊಸ ಇತಿಹಾಸ ಬರೆದಿದ್ದರು.

ವಿರೇಂದ್ರ ಸೆಹ್ವಾಗ್

ಇಲ್ಲಿಯವರೆಗೆ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ನಂತರ ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಕ್ರಿಸ್ ಗೇಲ್, ಮಾರ್ಟಿನ್ ಗಪ್ಟಿಲ್, ಫಖರ್ ಜಮಾನ್, ಇಶಾನ್ ಕಿಶನ್ ಮತ್ತು ಶುಭಮನ್​ ಗಿಲ್ ಸೇರಿ ಒಟ್ಟು 10 ಬ್ಯಾಟರ್​ಗಳಿಂದ 12 ದ್ವಿಶತಕ ದಾಖಲಾಗಿದೆ. 264 ರನ್​ ಗಳಿಸಿದ ರೋಹಿತ್ ಶರ್ಮಾ ಏಕದಿನದಲ್ಲಿ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದ್ದಾರೆ. ಹಿಟ್​ಮ್ಯಾನ್​ ಏಕದಿನ ಮಾದರಿಯಲ್ಲಿ 3 ದ್ವಿಶತಕ ಗಳಿಸಿ ಏಕೈಕ ಬ್ಯಾಟರ್ ಕೂಡಾ ಹೌದು.

ರೋಹಿತ್​ ಶರ್ಮಾ

ದ್ವಿಶತಕ ಗಳಿಸಿದ ಭಾರತೀಯರು- ಸಚಿನ್ 200 ರನ್:ಸಚಿನ್ 2010ರಲ್ಲಿ ಗ್ವಾಲಿಯರ್‌ನಲ್ಲಿ ನಡೆದ ದ. ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೇವಲ 147 ಎಸೆತಗಳಲ್ಲಿ ಅಜೇಯ 200 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ 403 ರನ್‌ಗಳ ಅಂತರದಿಂದ ಗೆದ್ದಿತ್ತು.

2011ರಲ್ಲಿ ವೀರೇಂದ್ರ ಸೆಹ್ವಾಗ್- 219 ರನ್:ವೀರೇಂದ್ರ ಸೆಹ್ವಾಗ್ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 140 ಎಸೆತಗಳಲ್ಲಿ 200 ರನ್ ಗಳಿಸಿದಾಗ ದ್ವಿಶತಕ ಗಳಿಸಿದ ಭಾರತದ ಎರಡನೇ ಬ್ಯಾಟರ್​ ಎನಿಸಿಕೊಂಡಿದ್ದರು. ಇವರ ಇನ್ನಿಂಗ್ಸ್‌ನಲ್ಲಿ 25 ಬೌಂಡರಿ ಮತ್ತು 7 ಸಿಕ್ಸರ್‌ಗಳಿದ್ದವು.

ರೋಹಿತ್ ಶರ್ಮಾ- 3 ದ್ವಿಶತಕ:2013 ರಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಮೊದಲ ದ್ವಿಶತಕ ಗಳಿಸಿದರು. ಈ ಇನ್ನಿಂಗ್ಸ್​ನಲ್ಲಿ 16 ಸಿಕ್ಸರ್ ಮತ್ತು 12 ಬೌಂಡರಿಗಳಿದ್ದವು. ನಂತರ ಇವರು, 2014ರಲ್ಲಿ ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ಸ್‌ನಲ್ಲಿ ತಮ್ಮ 2ನೇ ದ್ವಿಶತಕ ಪೂರೈಸಿದರು. ಇದು ಏಕದಿನ ಕ್ರಿಕೆಟ್‌ನ ಅತೀ ಹೆಚ್ಚು ರನ್​ ದಾಖಲೆ. 9 ಸಿಕ್ಸರ್‌ ಮತ್ತು 33 ಬೌಂಡರಿಗಳನ್ನು ಪೇರಿಸಿ 264 ರನ್​ಗಳಿಸಿದರು. ಇದು ಅವರ ವೈಯುಕ್ತಿಕ ಎರಡನೇ ದ್ವಿಶತಕವಾಗಿದೆ. 2017ರಲ್ಲಿ ಮತ್ತೆ ಪಿಸಿಎ-ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಹಿಟ್‌ಮ್ಯಾನ್‌ ದ್ವಿಶತಕ ಗಳಿಸಿದರು. 151 ಎಸೆತ ಎದುರಿಸಿ 208 ರನ್ ಗಳಿಸಿ ಔಟಾಗಿದ್ದರು.

ಗಿಲ್​ ಮತ್ತು ಇಶನ್​ ಕಿಶನ್​

ಇಶಾನ್ ಕಿಶನ್- 210 ರನ್:2022ರಲ್ಲಿಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್ ದ್ವಿಶತಕ ಸಿಡಿಸಿದ ಭಾರತದ ನಾಲ್ಕನೇ ಬ್ಯಾಟರ್‌ ಎನಿಸಿಕೊಂಡರು. ಕೇವಲ 120 ಎಸೆತಗಳಲ್ಲಿ ಎರಡು ನೂರು ರನ್​ ಗಳಿಸಿ ಏಕದಿನ ಇತಿಹಾಸದಲ್ಲಿ ವೇಗವಾಗಿ ದ್ವಿಶತಕ ಗಳಿಸಿದ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 24 ಬೌಂಡರಿಗಳು ಮತ್ತು 10 ಸಿಕ್ಸರ್‌ಗಳ ಮೂಲಕ ಈ ಸಾಧನೆ ಮಾಡಿದ್ದರು.

ಶುಭಮನ್ ಗಿಲ್- 208 ರನ್‌:ಇದೇ ವರ್ಷದ ಜನವರಿಯಲ್ಲಿ ನ್ಯೂಜಿಲೆಂಡ್​ ಎದುರಿನ ಸರಣಿಯಲ್ಲಿ ಶುಭಮನ್​ ಗಿಲ್,​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್​ ಎಂಬ ದಾಖಲೆ ಬರೆದರು. 145 ಎಸೆತದಲ್ಲಿ 200 ರನ್​ ಗಳಿಸಿದ ಗಿಲ್​ 19 ಬೌಂಡರಿ ಮತ್ತು 9 ಸಿಕ್ಸರ್​ ಹೊಡೆದಿದ್ದರು.

ಏಕದಿನ ಕ್ರಿಕೆಟ್‌ನ​ ಇತರ ದಾಖಲೆಗಳು:ಅಂತಾರಾಷ್ಟ್ರೀಯ ಕ್ರಿಕೆಟ್ ಮೊದಲು ಆರಂಭವಾದದ್ದೇ ಟೆಸ್ಟ್​ ಮಾದರಿಯಲ್ಲಿ. ನಂತರ ಸೀಮಿತ ಓವರ್​ಗಳ ಪಂದ್ಯಗಳನ್ನು ಏರ್ಪಡಿಸಲಾಯಿತು. ಜನವರಿ 5, 1971ರಲ್ಲಿ ಮೊದಲ ಏಕದಿನ ಪಂದ್ಯ ನಡೆಯಿತು. ಒನ್​ಡೇ ಮಾದರಿಯಲ್ಲಿ ಜಾನ್ ಎಡ್ರಿಚ್ (ಇಂಗ್ಲೆಂಡ್) ಆಸ್ಟ್ರೇಲಿಯಾ ವಿರುದ್ಧ ಮೊದಲ ಅರ್ಧಶತಕ ಗಳಿಸಿದರು. ಇವರು (5 ಜನವರಿ 1971) ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 82 ರನ್ ಗಳಿಸಿದ್ದರು. ಡೆನ್ನಿಸ್ ಅಮಿಸ್ (ಇಂಗ್ಲೆಂಡ್) ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಶತಕ ಬಾರಿಸಿದ ಮೊದಲ ಕ್ರಿಕೆಟಿಗ. 24 ಆಗಸ್ಟ್ 1972 ರಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಶತಕ (103) ಗಳಿಸಿದ್ದರು.

ಇದನ್ನೂ ಓದಿ:ಐಸಿಸಿ ಟ್ರೋಫಿ ಗೆಲ್ಲದ ನನ್ನನ್ನು ವಿಫಲ ನಾಯಕ ಎಂದು ಪರಿಗಣಿಸಿದರು; ವಿರಾಟ್​ ಕೊಹ್ಲಿ

ABOUT THE AUTHOR

...view details