ಮುಂಬೈ(ಮಹಾರಾಷ್ಟ್ರ): ಸರಣಿಯಲ್ಲಿ ಅಜೇಯ 2-0 ಮುನ್ನಡೆ ಸಾಧಿಸಿದ ಆಸ್ಟ್ರೇಲಿಯಾ ಮಹಿಳಾ ತಂಡದ ಫೋಬೆ ಲಿಚ್‌ಫೀಲ್ಡ್ ಅವರ ಅದ್ಭುತ ಶತಕದ ನೆರವಿನಿಂದ 7 ವಿಕೆಟ್‌ಗೆ 338 ರನ್ ಕಲೆ ಹಾಕಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕಿ ಹೀಲಿ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾದ ಫೋಬೆ ಲಿಚ್‌ಫೀಲ್ಡ್ ಮತ್ತು ಅಲಿಸ್ಸಾ ಹೀಲಿ ತಂಡಕ್ಕೆ ಅದ್ಭುತ ಆರಂಭ ನೀಡಿದರು. ದೀಪ್ತಿ ಶರ್ಮಾ, ಹೀಲಿಯನ್ನು ಔಟ್ ಮಾಡುವ ಮೊದಲು ಇವರಿಬ್ಬರು 189 ರನ್‌ಗಳ ಆರಂಭಿಕ ಜೊತೆಯಾಟ ಆಡಿದರು. ಆದ್ರೆ, ಲಿಚ್‌ಫೀಲ್ಡ್ ಮಾತ್ರ ರನ್ ಗಳಿಕೆಯನ್ನು ಹೆಚ್ಚಿಸುತ್ತಲೇ ಸಾಗಿದರು. ಲಿಚ್‌ಫೀಲ್ಡ್ ಒಟ್ಟು 119 ರನ್‌ಗಳನ್ನು ಕಲೆ ಹಾಕಿದರು.
ಆಸ್ಟ್ರೇಲಿಯಾದ ಆರಂಭಿಕ ಆಟಗಾರರ ವಿಕೆಟ್ ಪತನದ ನಂತರ, ವಿಕೆಟ್‌ಗಳು ಉರುಳುತ್ತಲೇ ಇದ್ದವು. ಇದರ ನಂತರ ಅಲಾನಾ ಕಿಂಗ್ 14 ಎಸೆತಗಳಲ್ಲಿ ಅಜೇಯ 26 ರನ್ ಗಳಿಸುವ ಮೂಲಕ ದೃಢವಾದ ಮುಕ್ತಾಯವನ್ನು ಒದಗಿಸಿದರು. ಆಸ್ಟ್ರೇಲಿಯಾ ತಂಡವು 7 ವಿಕೆಟ್‌ಗೆ 338 ರನ್ ಗಳಿಸಿತು. ಶ್ರೇಯಾಂಕಾ ಪಾಟೀಲ್ ಮೂರು ವಿಕೆಟ್ ಪಡೆದರೆ, ಅಮನ್‌ಜೋತ್ ಕೌರ್ ಎರಡು ವಿಕೆಟ್ ಗಳಿಸಿದರು. ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಕರ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
16 ವರ್ಷಗಳ ನಂತರ ಗೆಲುವಿಗಾಗಿ ಕಾಯುತ್ತಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸರಣಿಯ ಕೊನೆಯ ಏಕದಿನ ಪಂದ್ಯ ಆಡುತ್ತಿದೆ. ಟಾಸ್ ಗೆದ್ದ ಆಸೀಸ್ ನಾಯಕಿ ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ.