ಇಂದೋರ್ : ದಕ್ಷಿಣ ಆಫ್ರಿಕಾದ ಎದುರಿನ ಔಪಚಾರಿಕ ಪಂದ್ಯದಲ್ಲಿ ಭಾರತ ಟಾಸ್ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಈ ಪಂದ್ಯ ಗೆದ್ದು ಕ್ಲೀನ್ ಸ್ವೀಪ್ ಸಾಧಿಸುವ ಛಲದಲ್ಲಿ ಭಾರತ ತಂಡ ಇದೆ. ಭಾರತ ತಂಡದಲ್ಲಿ ಮೂರು ಬದಲಾವಣೆ ಮಾಡಿಕೊಂಡಿದ್ದಾರೆ.
ಆರಂಭಿಕ ಆಟಗಾರ ರಾಹುಲ್, ವಿರಾಟ್ ಕೊಹ್ಲಿ ಮತ್ತು ಅರ್ಷದೀಪ್ ಹೊರಗುಳಿದಿದ್ದಾರೆ. ಶ್ರೇಯಸ್ ಅಯ್ಯರ್, ಉಮೇಶ್ ಯಾದವ್ ಮತ್ತು ಸಿರಾಜ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವ ಕಪ್ ದೃಷ್ಟಿಯಿಂದ ಬೌಲಿಂಗ್ ವಿಭಾಗಕ್ಕೆ ಹೆಚ್ಚು ಒತ್ತು ನೀಡಲಾಗಿದೆ.
ದಕ್ಷಿಣ ಆಫ್ರಿಕಾ ವೈಟ್ ವಾಷ್ ನಿಂದ ತಪ್ಪಿಸಿ ಕೊಳ್ಳಲು ಪ್ರಯತ್ನಿಸುತ್ತಿದೆ. ಬೌಲಿಂಗ್ನಲ್ಲಿ ವೇಗದ ವಿಭಾಗದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದ್ದು ನಾರ್ಟ್ಜೆ ಬದಲಾಗಿ ಡ್ವೇನ್ ಪ್ರಿಟೋರಿಯಸ್ ಆಡುತ್ತಿದ್ದಾರೆ.