ದುಬೈ :2024ರಿಂದ 2031ರವರೆಗಿನ ಐಸಿಸಿ ಟೂರ್ನಿ(ICC events)ಗಳ ಆತಿಥ್ಯ ವಹಿಸುವ ದೇಶಗಳ ಬಗ್ಗೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಾಹಿತಿ ಹೊರ ಹಾಕಿದೆ. ಪ್ರಮುಖವಾಗಿ 2025ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ.
2024-31ರ ಅವಧಿಯಲ್ಲಿ ಒಟ್ಟು 8 ಐಸಿಸಿ ಟೂರ್ನಿ(International Cricket Council) ಆಯೋಜನೆಗೊಳ್ಳಲಿವೆ. ಎರಡು ಏಕದಿನ ವಿಶ್ವಕಪ್(ODI World Cup), ನಾಲ್ಕು ಟಿ20 ವಿಶ್ವಕಪ್ ಹಾಗೂ ಎರಡು ಚಾಂಪಿಯನ್ಸ್ ಟ್ರೋಫಿ(Champions Trophy) ಸೇರಿಕೊಂಡಿವೆ. ಈ ಟೂರ್ನಿ ಆಯೋಜನೆ ಮಾಡಲು 11 ಪೂರ್ಣ ಸದಸ್ಯ ರಾಷ್ಟ್ರಗಳ ಜತೆಗೆ ಮೂರು ಸಹಾಯಕ ಸದಸ್ಯ ರಾಷ್ಟ್ರ ಆಯ್ಕೆಯಾಗಿವೆ.
ಇದನ್ನೂ ಓದಿರಿ:ಆಸ್ಟ್ರೇಲಿಯಾದಲ್ಲಿ 2022ರ ಟಿ20 ವಿಶ್ವಕಪ್: ನವೆಂಬರ್ 13ರಂದು ಎಂಸಿಜಿಯಲ್ಲಿ ಫೈನಲ್ ಮ್ಯಾಚ್
ಯಾವ ಟೂರ್ನಿ ಎಲ್ಲಿ ಆಯೋಜನೆ?
- 2024ರ ಟಿ-20 ವಿಶ್ವಕಪ್ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಆಯೋಜನೆ
- 2025ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನ
- 2026ರ ಟಿ-20 ವಿಶ್ವಕಪ್ ಶ್ರೀಲಂಕಾ-ಭಾರತ ಜಂಟಿ ಆಯೋಜನೆ
- 2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಆತಿಥ್ಯ
- 2028ರ ಟಿ-20 ವಿಶ್ವಕಪ್ ನ್ಯೂಜಿಲ್ಯಾಂಡ್-ಆಸ್ಟ್ರೇಲಿಯಾದಲ್ಲಿ ಆಯೋಜನೆ
- 2029ರ ಚಾಂಪಿಯನ್ಸ್ ಟ್ರೋಫಿ ಭಾರತ
- 2030ರ ಟಿ-20 ವಿಶ್ವಕಪ್ ಇಂಗ್ಲೆಂಡ್-ಐರ್ಲೆಂಡ್ ಹಾಗೂ ಸ್ಕಾಟ್ಲೆಂಡ್ ಆತಿಥ್ಯ
- 2031ರ ಏಕದಿನ ವಿಶ್ವಕಪ್ ಭಾರತ-ಬಾಂಗ್ಲಾದೇಶದಲ್ಲಿ ಆತಿಥ್ಯ
2025ರ ಚಾಂಪಿಯನ್ಸ್ ಟ್ರೋಫಿ(ಪಾಕ್) ಹಾಗೂ 2029ರ ಚಾಂಪಿಯನ್ಸ್ ಟ್ರೋಫಿ(ಭಾರತ) ಮಾತ್ರ ಏಕೈಕ ದೇಶದಲ್ಲಿ ಆಯೋಜನೆಗೊಂಡಿದೆ. ಉಳಿದೆಲ್ಲ ಟೂರ್ನಿ ಜಂಟಿಯಾಗಿ ಆಯೋಜನೆಗೊಳ್ಳುತ್ತಿರುವುದು ವಿಶೇಷವಾಗಿದೆ.
ಉಳಿದಂತೆ ಭಾರತದಲ್ಲಿ 2026ರ ಟಿ20 ವಿಶ್ವಕಪ್, 2029ರ ಚಾಂಪಿಯನ್ ಟ್ರೋಫಿ ಹಾಗೂ 2031ರ ಏಕದಿನ ವಿಶ್ವಕಪ್ ಆಯೋಜನೆಯ ಅವಕಾಶ ಪಡೆದುಕೊಂಡಿದೆ.