ಕರ್ನಾಟಕ

karnataka

ETV Bharat / sports

ICC Test rankings: ಟೆಸ್ಟ್​​ ರ‍್ಯಾಂಕಿಂಗ್​ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ

ಕಾನ್ಪುರದಲ್ಲಿ ಮೊದಲ ಟೆಸ್ಟ್​ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ, ಮುಂಬೈ ಟೆಸ್ಟ್​ನಲ್ಲಿ ವಿರಾಟ್​ ಪಡೆ ದಾಖಲೆಯ 372 ರನ್​ಗಳ ಜಯ ಸಾಧಿಸಿತ್ತು. ನ್ಯೂಜಿಲ್ಯಾಂಡ್​ ಪಾಕಿಸ್ತಾನದ ವಿರುದ್ಧ ಜನವರಿಯಲ್ಲಿ ಸರಣಿ ಗೆದ್ದ ನಂತರ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ನಂಬರ್​ ಸ್ಥಾನಕ್ಕೇರಿತ್ತು. 2016ರಿಂದ ಅಗ್ರಸ್ಥಾನ ಕಾಯ್ದುಕೊಂಡಿದ್ದ ಮೇ ತಿಂಗಳಲ್ಲಿ 3ನೇ ಸ್ಥಾನಕ್ಕೆ ಕುಸಿದಿತ್ತು.

ICC Test rankings
ಐಸಿಸಿ ಟೆಸ್ಟ್​​ ರ‍್ಯಾಂಕಿಂಗ್

By

Published : Dec 6, 2021, 2:56 PM IST

ದುಬೈ:ನ್ಯೂಜಿಲ್ಯಾಂಡ್ ವಿರುದ್ಧ 2 ಪಂದ್ಯಗಳ ಸರಣಿಯನ್ನು ಗೆಲ್ಲುತ್ತಿದ್ದಂತೆ ಭಾರತ ತಂಡ ಐಸಿಸಿ ಟೆಸ್ಟ್​ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.

ಕಾನ್ಪುರದಲ್ಲಿ ಮೊದಲ ಟೆಸ್ಟ್​ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ, ಮುಂಬೈ ಟೆಸ್ಟ್​ನಲ್ಲಿ ವಿರಾಟ್​ ಪಡೆ ದಾಖಲೆಯ 372 ರನ್​ಗಳ ಜಯ ಸಾಧಿಸಿತ್ತು. ನ್ಯೂಜಿಲ್ಯಾಂಡ್​ ಪಾಕಿಸ್ತಾನದ ವಿರುದ್ಧ ಜನವರಿಯಲ್ಲಿ ಸರಣಿ ಗೆದ್ದ ನಂತರ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ನಂಬರ್​ ಸ್ಥಾನಕ್ಕೇರಿತ್ತು. 2016ರಿಂದ ಅಗ್ರಸ್ಥಾನ ಕಾಯ್ದುಕೊಂಡಿದ್ದ ಮೇ ತಿಂಗಳಲ್ಲಿ 3ನೇ ಸ್ಥಾನಕ್ಕೆ ಕುಸಿದಿತ್ತು.

ವಿರಾಟ್​ ಕೊಹ್ಲಿ ನೇತೃತ್ವದ ತಂಡ 124 ರೇಟಿಂಗ್ ಅಂಕಗಳನ್ನು ಹೊಂದಿದೆ. ನ್ಯೂಜಿಲ್ಯಾಂಡ್​(121), ಆಸ್ಟ್ರೇಲಿಯಾ(108), ಇಂಗ್ಲೆಂಡ್​(107), ಪಾಕಿಸ್ತಾನ (92), ದಕ್ಷಿಣ ಆಫ್ರಿಕಾ(88), ಶ್ರೀ ಲಂಕಾ(83), ವೆಸ್ಟ್​ ಇಂಡೀಸ್​(75), ಬಾಂಗ್ಲಾದೇಶ(49) ಮತ್ತು ಜಿಂಬಾಬ್ವೆ(31) ನಂತರದ ಸ್ಥಾನದಲ್ಲಿವೆ.

ಇನ್ನು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ 3ನೇ ಸ್ಥಾನದಲ್ಲಿದೆ, ಶ್ರೀಲಂಕಾ 100 ಗೆಲುವಿನ ಸರಾಸರಿಯಿಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 66.66 ಸರಾಸರಿಯಲ್ಲಿ 2ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಕಿವೀಸ್‌ ವಿರುದ್ಧ ಟೆಸ್ಟ್‌ ಸರಣಿ ಗೆದ್ದು ಮತ್ತೊಂದು ದಾಖಲೆ ಬರೆದ ಟೀಂ ಇಂಡಿಯಾ ನಾಯಕ ಕೊಹ್ಲಿ..:

ABOUT THE AUTHOR

...view details