ಕರ್ನಾಟಕ

karnataka

ETV Bharat / sports

WTC ಫೈನಲ್​ನಲ್ಲಿ ಭಾರತ ತಂಡ ಮೇಲುಗೈ ಸಾಧಿಸುವ ಸಾಮರ್ಥ್ಯ ಹೊಂದಿದೆ: ಕನ್ನಡಿಗ ವೆಂಕಟೇಶ್ ಪ್ರಸಾದ್​ - ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್

ಭಾರತ ತಂಡ ತಮ್ಮ ಕಾಲದಲ್ಲಿದ್ದ ಮೂರನೇ ಅಥವಾ ನಾಲ್ಕನೇ ವೇಗಿಯ ಕೊರತೆ ಈಗಿರುವ ಟೀಮ್ ಇಂಡಿಯಾದಲ್ಲಿ ಇಲ್ಲ. ಅಲ್ಲದೇ ಹೊಸ ಚೆಂಡಿನಲ್ಲಿ ಬೌಲರ್‌ಗಳು ನಿರ್ಮಿಸಿದ ಒತ್ತಡವನ್ನು ಕಾಯ್ದುಕೊಳ್ಳಬಲ್ಲ ಮೂರನೇ ಅಥವಾ ನಾಲ್ಕನೇ ಸೀಮರ್ ಇದ್ದಾರೆ. ಇದೇ ಸಮಯದಲ್ಲಿ ತಂಡ ಯಾವುದೇ ಪಿಚ್​ನಲ್ಲಾದರೂ 350 ರನ್​ಗಳಿಸುವ ಸಾಮರ್ಥ್ಯ ಹೊಂದಿದೆ ಎಂದು ಪ್ರಸಾದ್​ ಅಭಿಪ್ರಾಯಪಟ್ಟಿದ್ದಾರೆ.

ವೆಂಕಟೇಶ್ ಪ್ರಸಾದ್
ವೆಂಕಟೇಶ್ ಪ್ರಸಾದ್

By

Published : Jun 14, 2021, 5:02 PM IST

ನವದೆಹಲಿ: ಸೌತಾಂಪ್ಟನ್​ನಲ್ಲಿ ಜೂನ್ 18ರಂದು ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಸಿಪ್ ಫೈನಲ್​ನಲ್ಲಿ ಇಂಗ್ಲೆಂಡ್ ಮಣಿಸುವ ಆತ್ಮವಿಶ್ವಾಸದಲ್ಲಿರುವ ನ್ಯೂಜಿಲ್ಯಾಂಡ್​ ವಿರುದ್ಧ ಮೇಲುಗೈ ಸಾಧಿಸುವಂತಹ ಸಾಮರ್ಥ್ಯ ಹೊಂದಿದೆ ಎಂದು ಭಾರತ ತಂಡದ ಮಾಜಿ ವೇಗಿ ಹಾಗೂ ಕನ್ನಡಿಗ ವೆಂಕಟೇಶ್ ಪ್ರಸಾದ್​ ಹೇಳಿದ್ದಾರೆ.

ಭಾರತ ತಂಡ ತಮ್ಮ ಕಾಲದಲ್ಲಿದ್ದ ಮೂರನೇ ಅಥವಾ ನಾಲ್ಕನೇ ವೇಗಿಯ ಕೊರತೆ ಈಗಿರುವ ಟೀಮ್ ಇಂಡಿಯಾದಲ್ಲಿ ಇಲ್ಲ. ಅಲ್ಲದೇ ಹೊಸ ಚೆಂಡಿನಲ್ಲಿ ಬೌಲರ್‌ಗಳು ನಿರ್ಮಿಸಿದ ಒತ್ತಡವನ್ನು ಕಾಯ್ದುಕೊಳ್ಳಬಲ್ಲ ಮೂರನೇ ಅಥವಾ ನಾಲ್ಕನೇ ಸೀಮರ್ ಇದ್ದಾರೆ. ಇದೇ ಸಮಯದಲ್ಲಿ ತಂಡ ಯಾವುದೇ ಪಿಚ್​ನಲ್ಲಾದರೂ 350 ರನ್​ಗಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಸಾದ್​ ಅಭಿಪ್ರಾಯಪಟ್ಟಿದ್ದಾರೆ.

" ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳು ಎದುರಾಗುತ್ತಿವೆ. ಭಾರತ ತಂಡದಲ್ಲಿ ಸಾಕಷ್ಟು ಆಯ್ಕೆಗಳಿವೆ, ಜೊತೆಗೆ ಅವರ ಬೆಂಚ್​ ಸಾಮರ್ಥ್ಯ ಕೂಡ ತುಂಬಾ ಪ್ರಬಲವಾಗಿದೆ" ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವೆಂಕಿ ಹೇಳಿದ್ದಾರೆ.

" ಬ್ಯಾಟಿಂಗ್ ಅಥವಾ ವೇಗದ ಬೌಲಿಂಗ್​ ವಿಭಾಗದಲ್ಲಿ ಭಾರತ ತಂಡ ಮೇಲುಗೈ ಸಾಧಿಸಲಿದೆ ಎನ್ನುವುದಕ್ಕೆ ಸರಳ ಕಾರಣವೆಂದರೆ, 90ರ ದಶಕ ಮತ್ತು 2000ದ ಸಮಯದಲ್ಲಿ ಭಾರತ ತಂಡ ಇಬ್ಬರು ವಿಶ್ವ ದರ್ಜೆಯ ವೇಗಿಗಳನ್ನು ಹೊಂದಿರುತ್ತಿತ್ತು, ಆದರೆ, ಮೂರು ಮತ್ತು ನಾಲ್ಕನೇ ವೇಗಿಯ ಆಯ್ಕೆ ಇರಲಿಲ್ಲ. ಈಗ ತಂಡ ತನ್ನ ಆ ವಿಭಾಗದಲ್ಲಿ ಬಲಶಾಲಿಯಾಗಿದೆ. ಒಂದಿಬ್ಬರು ಅತ್ಯುತ್ತಮ ಆಲ್​ರೌಂಡರ್​ಗಳನ್ನು ಹೊಂದಿದೆ. ನಾವು ಯಾವಾಗಲೂ ವಿಶ್ವದ ಅತ್ಯುತ್ತಮ ಸ್ಪಿನ್ನರ್​ಗಳನ್ನು ಹೊಂದಿದ್ದೆವು, ಆದರೆ ಈಗ ವಿಶ್ವ ಶ್ರೇಷ್ಠ ವೇಗದ ಬೌಲರ್​ಗಳನ್ನು ಹೊಂದಿದ್ದೇವೆ" ಎಂದು ಪ್ರಸಾದ್​ ಹೇಳಿದ್ದಾರೆ.

ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್​ ಜೊತೆಗೆ 3 ವೇಗಿಗಳು ಫೈನಲ್ ಪಂದ್ಯದಲ್ಲಿ ಆಡಬೇಕೆಂದು ಪ್ರಸಾದ್​ ಹೇಳಿದ್ದಾರೆ.​

ಫೈನಲ್ ಪಂದ್ಯದಲ್ಲಿ ಜಡೇಜಾ ಮತ್ತು ಅಶ್ವಿನ್ ಜೊತೆಗೆ 3 ವೇಗಿಗಳ ಸಂಯೋಜನೆ ಇರಬೇಕು, ಬುಮ್ರಾ, ಶಮಿ ಮತ್ತು ಇಶಾಂತ್ ಶರ್ಮಾ ಆದರೆ ಒಳಿತು. ಏಕೆಂದರೆ ಅವರು ಯಾವುದೇ ಪರಿಸ್ಥಿತಿಯಲ್ಲಾದರೂ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ.

ಇದನ್ನು ಓದಿ:ICC test Ranking: ಭಾರತ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟ ಕಿವೀಸ್​

ABOUT THE AUTHOR

...view details