ನವದೆಹಲಿ:ಭಾರತ ಮತ್ತು ಇಂಗ್ಲೆಂಡ್ ನಡುವೆ 2022 ರ ಸಮ್ಮರ್ನಲ್ಲಿ ಏಕೈಕ ಟೆಸ್ಟ್ ಪಂದ್ಯ ಆಯೋಜಿಸಲಾಗುವುದು ಎಂದು ಬಿಸಿಸಿಐ ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಖಚಿತಪಡಿಸಿವೆ ಎಂದು ವರದಿಗಳಿಂದ ತಿಳಿದು ಬಂದಿದೆ. ಈ ತಿಂಗಳ ಆರಂಭದಲ್ಲಿ ಕೋವಿಡ್ 19 ಭೀತಿಯಿಂದ ಎರಡೂ ತಂಡಗಳ ನಡುವಿನ 5ನೇ ಟೆಸ್ಟ್ ಪಂದ್ಯ ರದ್ದಾದ ನಂತರ ಈ ಬೆಳವಣಿಗೆ ಕಂಡು ಬಂದಿದೆ.
ಇಎಸ್ಪಿನ್ ವರದಿಯ ಪ್ರಕಾರ, ಈ ಪಂದ್ಯ ಸ್ವತಂತ್ರ ಸ್ಪರ್ಧೆಯಾಗಲಿದೇಯೇ ಅಥವಾ ರದ್ದಾದ ಸರಣಿಯ 5ನೇ ಟೆಸ್ಟ್ ಪಂದ್ಯವಾಗಲಿದೆಯೇ ಎನ್ನುವುದರ ಬಗ್ಗೆ ಪ್ರಸ್ತುತ ಖಚಿತ ಮಾಹಿತಿ ತಿಳಿದು ಬಂದಿಲ್ಲ.
ಟೆಸ್ಟ್ ರದ್ದಾಗಿದೆ ಎಂದು ಘೋಷಿಸಿದಾಗ, ಹಲವಾರು ಸ್ಟೇಕ್ ಹೋಲ್ಡರ್ಸ್ ಮತ್ತು ತಜ್ಞರು ಭಾರತವನ್ನು ಹೊಣೆಗಾರರನ್ನಾಗಿ ಮಾಡಿದ್ದರು ಮತ್ತು ಐಪಿಎಲ್ಗಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಇದಲ್ಲದೇ ಟೆಸ್ಟ್ ನಡೆಯದ್ದರಿಂದ ತನಗೆ ದೊಡ್ಡ ಆರ್ಥಿಕ ನಷ್ಟವಾಗಿದೆ ಎಂದು ಇಸಿಬಿ ವರದಿ ಮಾಡಿದೆ. ಆದ್ದರಿಂದ ಈ ಟೆಸ್ಟ್ ಬಹುಪಾಲು ಇಸಿಬಿಗೆ ಆಗಿರುವ ನಷ್ಟವನ್ನು ಮರುಪಡೆಯಲು ಸಹಾಯವಾಗಬಹುದು ಎನ್ನಲಾಗಿದೆ.
ಇನ್ನು ಈ ಟೆಸ್ಟ್ ಜೊತೆಗೆ ಹೆಚ್ಚುವರಿಯಾಗಿ 2 ಟಿ -20 ಪಂದ್ಯಗಳನ್ನು ಆಡಿಸಲು ಚರ್ಚೆಗಳು ನಡೆದಿದೆ ಎಂದು ವರದಿ ಹೇಳಿದೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ಗೆ ಆಗಿರುವ ನಷ್ಟವನ್ನು ತುಂಬಿಕೊಡಲು 2022ರ ವೈಟ್ ಬಾಲ್ ಸರಣಿಯ ವೇಳೆ ಹೆಚ್ಚುವರಿ 2 ಟಿ-20 ಆಡುವುದಕ್ಕೆ ಬಿಸಿಸಿಐ ಆಫರ್ ನೀಡಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ:ಸೋತು ಕಂಗಾಲಾಗಿರುವವರ ನಡುವೆ ಸವಾಲ್.. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲುವುದೇ ಪಂಜಾಬ್..