ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ಪುರುಷ ತಂಡಗಳ ಟೆಸ್ಟ್ ಸರಣಿಗೆ ಬಾರ್ಡರ್ - ಗವಾಸ್ಕರ್ ಟ್ರೋಫಿ ಇರುವಂತೆ, ಮಹಿಳಾ ಟೆಸ್ಟ್ ಸರಣಿಗೆ ಮಾಜಿ ಮಹಿಳಾ ಕ್ರಿಕೆಟಿಗರ ಹೆಸರಿನೊಂದಿಗೆ ಟ್ರೋಫಿ ಅಗತ್ಯವಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮತ್ತು ಐಸಿಸಿ ವುಮೆನ್ಸ್ ಕಮಿಟಿಯ ಸದಸ್ಯೆ ಮೆಲ್ ಜೋನ್ಸ್ ಹೇಳಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಂತಹದನ್ನು ಮಹಿಳಾ ಕ್ರಿಕೆಟ್ ಸಹ ಹೊಂದುವುದು ಅದ್ಭುತವಾಗಿದೆ. ಮಹಿಳಾ ಕ್ರಿಕೆಟ್ಗೂ ಕೂಡ ನಮ್ಮದೇ ಆದ ಹೊಸ ಮಾರ್ಗವನ್ನು ಹುಡುಕಬೇಕಿದೆ ಎಂದು ಜೋನ್ಸ್ ಕ್ರಿಕೆಟ್ ಡಾಟ್ ಕಾಮ್ಗೆ ತಿಳಿಸಿದ್ದಾರೆ.
" ನಾವು ಕ್ರಿಕೆಟ್ ಆಟವನ್ನು ಇಷ್ಟಪಡುತ್ತೇವೆ, ಏಕೆಂದರೆ ಅದರೊಂದಿಗೆ ಇತಿಹಾಸವನ್ನು ಜೋಡಿಸಲಾಗಿದೆ. ಪುರುಷರ ಮತ್ತು ಮಹಿಳೆಯರ ಎರಡೂ ತಂಡಗಳೂ ತಮ್ಮದೇ ಆದ ಆ್ಯಷಸ್ ಟ್ರೋಫಿಗಳ ಹಿಂದೆ ಈ ಭವ್ಯವಾದ ಕಥಾಹಂದರವನ್ನು ಹೊಂದಿವೆ. ಇದೀಗ ನಾವು ಆ್ಯಷಸ್ನಂತೆಯೇ ಭಾರತದೊಂದಿಗೆ ಮತ್ತೊಂದು ಟ್ರೋಫಿಯನ್ನು ಪಡೆಯಬೇಕಿದೆ" ಎಂದು ಜೋನ್ಸ್ ಹೇಳಿದ್ದಾರೆ.