ಜೈಪುರ:ಭಾರತದ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ನಾವು ಸೋತರೂ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ. ಪಂದ್ಯವನ್ನು ಗೆಲ್ಲಲು ಕೊನೆಯ ಓವರ್ವರೆಗೂ ತಂಡ ಹೋರಾಟ ನಡೆಸಿತು ಎಂದು ನ್ಯೂಜಿಲ್ಯಾಂಡ್ ನಾಯಕ ಟಿಮ್ ಸೌಥಿ (New Zealand captain Tim Southee)ಹೇಳಿದ್ದಾರೆ.
ನಿನ್ನೆ ಜೈಪುರದಲ್ಲಿ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ 3 ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಪರಾಜಯ ಹೊಂದಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸೌಥಿ, ಪಂದ್ಯದ ಫಲಿತಾಂಶ ನಮ್ಮ ಪರವಾಗಿರದಿದ್ದರೂ ತಂಡ ಕೊನೆಯ ಓವರ್ವರೆಗೂ ಹೋರಾಟ ನಡೆಸಿತು(The team struggled until the last over)ಎಂದಿದ್ದಾರೆ.
ಹಲವು ದಿನಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರದ ಮಾರ್ಕ್ ಚಾಪ್ಮನ್ 63 ರನ್ ಗಳಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಹಕಾರಿಯಾದರು. ತಂಡ ಗಳಿಸಿದ 164 ರನ್ ಸ್ಪರ್ಧಾತ್ಮಕ ಮೊತ್ತವಾಗಿತ್ತು. ನಾವು ಪಂದ್ಯದ ಮೊದಲ ಎಸೆತದಿಂದಲೇ ಉತ್ತಮವಾಗಿ ಆಡಲು ಬಯಸಿದ್ದೆವು. ಅದರಂತೆ ಆಡಿದ್ದೇವೆ ಎಂದು ತಂಡದ ಪ್ರದರ್ಶನವನ್ನ ಸಮರ್ಥಿಸಿಕೊಡರು.
ಇದನ್ನೂ ಓದಿ:ಭಾರತ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದು ಅಷ್ಟು ಸುಲಭವಲ್ಲ: ರಮೀಜ್ ರಾಜಾ
ತಂಡ ಹಲವು ದಿನಗಳಿಂದ ಉತ್ತಮ ಸ್ಥಿತಿಯಲ್ಲಿದೆ. ಮಾರ್ಟಿನ್ ಗುಪ್ಟಿಲ್ ಬಿಡು ಬೀಸಾದ ಬ್ಯಾಟಿಂಗ್ ತಂಡಕ್ಕೆ ಇನ್ನಷ್ಟು ಬಲ ತಂದುಕೊಟ್ಟಿದೆ. ತಂಡದ ಸದಸ್ಯರು ವಿದೇಶಿ ನೆಲದಲ್ಲಿಯೂ ಕೆಚ್ಚೆದೆಯ ಪ್ರದರ್ಶನ ನೀಡುತ್ತಿದ್ದಾರೆ. ಫಲಿತಾಂಶ ಏನೇ ಇದ್ದರೂ ಆಟಗಾರರ ಪ್ರದರ್ಶನ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ತಂಡ ಸಾಕಷ್ಟು ಬಲಿಷ್ಠವಾಗಿದೆ ಎಂದು ಟಿಮ್ ಸೌಥಿ ಹೊಗಳಿದ್ದಾರೆ.