ಕರ್ನಾಟಕ

karnataka

ETV Bharat / sports

ICC Cricket World Cup 2023: ಈ ಬಾರಿಯೂ ವಿಶ್ವ ಸಮರದಲ್ಲಿ ಸ್ಪಿನ್ನರ್​ಗಳದ್ದೇ ಅಧಿಪತ್ಯ.. ಅವರ ಆಕ್ರಮಣಕಾರಿ ಆಟ ಹೀಗಿದೆ..

ICC Cricket World Cup 2023: 2023ರ ಏಕದಿನ ವಿಶ್ವಕಪ್‌ನಲ್ಲಿ ಸ್ಪಿನ್ನರ್‌ಗಳ ಪಾತ್ರ ನಿರ್ಣಾಯಕವಾಗಲಿದೆ ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ವಿಶ್ವ ತಂಡಗಳ ಅಗ್ರಮಾನ್ಯ ಸ್ಪಿನ್ನರ್​ಗಳಿಂದ ಈ ಬಾರಿ ಉತ್ತಮ ಪ್ರದರ್ಶನ ಮೂಡಿಬರಲಿದೆ ಎಂಬ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

spinners game changer  spinners game changer in this World Cup  ICC Cricket World Cup 2023  ವಿಶ್ವ ಸಮರದಲ್ಲಿ ಸ್ಪಿನ್ನರ್​ಗಳದ್ದೇ ಅಧಿಪತ್ಯ  2023ರ ಏಕದಿನ ವಿಶ್ವಕಪ್‌  ವಿಶ್ವಕಪ್‌ನಲ್ಲಿ ಸ್ಪಿನ್ನರ್‌ಗಳ ಪಾತ್ರ ನಿರ್ಣಾಯಕ  ಉಪಖಂಡದಲ್ಲಿ ಕ್ರಿಕೆಟ್ ವಿಶ್ವಕಪ್  ಭಾರತ ಆರಂಭಿಸಿದ 2023ರ ವಿಶ್ವಕಪ್  ಮೆಗಾ ಟೂರ್ನಮೆಂಟ್ ಆರಂಭಕ್ಕೂ ಮುನ್ನ
ಈ ಬಾರಿಯೂ ವಿಶ್ವ ಸಮರದಲ್ಲಿ ಸ್ಪಿನ್ನರ್​ಗಳದ್ದೇ ಅಧಿಪತ್ಯ

By ETV Bharat Karnataka Team

Published : Oct 11, 2023, 9:04 AM IST

ಹೈದರಾಬಾದ್​: ಉಪಖಂಡದಲ್ಲಿ ಕ್ರಿಕೆಟ್ ವಿಶ್ವಕಪ್ ನಡೆದಾಗಲೆಲ್ಲಾ ಸ್ಪಿನ್ನರ್​ಗಳ ಮೇಲೆಯೇ ಎಲ್ಲರ ಚಿತ್ತ ಹರಿದಿರುತ್ತದೆ ಎಂದು ಹೇಳಬೇಕಾಗಿಲ್ಲ. 2023ರ ವಿಶ್ವಕಪ್ (ICC Cricket World Cup 2023) ಇದಕ್ಕಿಂತ ಭಿನ್ನವಾಗಿರುವುದಿಲ್ಲ. ಈ ಮೆಗಾ ಟೂರ್ನಮೆಂಟ್ ಆರಂಭಕ್ಕೂ ಮುನ್ನ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ, ಅಭ್ಯಾಸ ಪಂದ್ಯಗಳನ್ನು ನೋಡಿದ ನಂತರವೂ ಸ್ಪಿನ್ನರ್‌ಗಳು ಮ್ಯಾಚ್ ವಿನ್ನರ್‌ಗಳಾಗಲಿದ್ದಾರೆ ಎಂಬುದು ನಿಮಗೆ ಅರ್ಥವಾಗುತ್ತದೆ. ವಿಶ್ವಕಪ್‌ನ ಆರಂಭಿಕ ಯುದ್ಧವು ಈ ಅಭಿಪ್ರಾಯವನ್ನು ಮತ್ತಷ್ಟು ಹೆಚ್ಚಿಸಿದೆ. ಯಾವ ಮೈದಾನದಲ್ಲಿ ಆಡಿದರೂ ಉತ್ತಮ ಸ್ಪಿನ್ ಶಕ್ತಿ ಇರುವ ತಂಡಗಳು ಗೆಲ್ಲುವ ಲಕ್ಷಣಗಳಿವೆ. ಸ್ಪಿನ್ನರ್‌ಗಳು ಪಂದ್ಯದ ಫಲಿತಾಂಶವನ್ನು ಮತ್ತು ವಿಶ್ವಕಪ್ ವಿಜೇತರನ್ನು ನಿರ್ದೇಶಿಸಿದರೆ ಆಶ್ಚರ್ಯವೇನಿಲ್ಲ.

ವಿಶ್ವಕಪ್‌ಗಳು 1987, 1996 ಮತ್ತು 2011 ರಲ್ಲಿ ಉಪಖಂಡದ ಸ್ಥಳದಲ್ಲಿ ನಡೆದವು. ಆ ಎಲ್ಲಾ ಟೂರ್ನಿಗಳಲ್ಲಿ ಸ್ಪಿನ್ನರ್‌ಗಳು ಶಕ್ತಿ ಪ್ರದರ್ಶನ ಮಾಡಿದ್ದಾರೆ. 2011ರ ವಿಶ್ವಕಪ್‌ನಲ್ಲಿ ಶೇ 47ರಷ್ಟು ಸ್ಪಿನ್ನರ್‌ಗಳಿಂದ ಬೌಲ್ಡ್ ಆಗಿದ್ದವು. ಸ್ಪಿನ್ನರ್‌ಗಳು ಶೇಕಡಾ 44 ರಷ್ಟು ವಿಕೆಟ್‌ಗಳನ್ನು ಪಡೆದರು. ಈ ಹಿಂದೆ ಭಾರತ ವಿಶ್ವಕಪ್ ಆತಿಥ್ಯ ವಹಿಸಿದಾಗ ಇತರ ಉಪಖಂಡದ ದೇಶಗಳ ಭಾಗವಹಿಸುವಿಕೆ ಇತ್ತು. ಆದರೆ ಈ ಬಾರಿ ನಮ್ಮ ದೇಶ ಏಕಾಂಗಿಯಾಗಿ ವಿಶ್ವಕಪ್ ಆಯೋಜಿಸುತ್ತಿದೆ.

ಭಾರತದ ಬಹುಪಾಲು ಕ್ರೀಡಾಂಗಣಗಳು ಸ್ಪಿನ್‌ಗೆ ಸೂಕ್ತವಾಗಿವೆ ಎಂದು ತಿಳಿದಿದೆ. ನಮ್ಮ ಶಕ್ತಿಯೂ ಸ್ಪಿನ್ ಎಂದು ಹೇಳಬೇಕಾಗಿಲ್ಲ. ಟೆಸ್ಟ್ ಸರಣಿಯಲ್ಲಿ ಭಾರತ ಸ್ಪಿನ್ ಪಿಚ್​ಗಳ ಮೂಲಕ ಎದುರಾಳಿಗಳಿಗೆ ಹೊಡೆತ ನೀಡುತ್ತಿದೆ. ವಿಶ್ವಕಪ್‌ನಲ್ಲಿ ಆತಿಥೇಯ ರಾಷ್ಟ್ರವು ಪಿಚ್‌ಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುವುದಿಲ್ಲ. ಆದರೆ ಪಿಚ್‌ಗಳ ಸಹಜ ಸ್ವಭಾವಕ್ಕೆ ಅನುಗುಣವಾಗಿ, ಸ್ವಂತ ತಂಡದ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಕೆಟ್‌ಗಳನ್ನು ತಯಾರಿಸಲಾಗುತ್ತದೆ. ಹಾಗಾಗಿ ಈ ಬಾರಿಯ ವಿಶ್ವಕಪ್‌ನಲ್ಲಿ ಸ್ಪಿನ್ನರ್‌ಗಳೇ ವಿಜೇತರಾಗಲಿದ್ದಾರೆ ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯದಿಂದಲೇ ಸ್ಪಿನ್ನರ್‌ಗಳ ಪ್ರಾಬಲ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್‌ಗೆ ಸ್ಪಿನ್ನರ್‌ಗಳೇ ದೊಡ್ಡ ಹೊಡೆತ ನೀಡಿದರು. ಮಲಾನ್ ಅವರನ್ನು ಔಟಾದ ನಂತರ ಮೊದಲ ವಿಕೆಟ್ ಪಡೆದ ಹೆನ್ರಿ ನಂತರ ಅಪಾಯಕಾರಿ ಬೈರ್‌ಸ್ಟೋವ್ ಅವರನ್ನು ಸ್ಪಿನ್ನರ್ ಸ್ಯಾಂಟ್ನರ್ ಔಟ್ ಮಾಡಿದರು. ಬಳಿಕ ಮತ್ತೊಂದು ವಿಕೆಟ್ ಕೂಡ ಪಡೆದರು. ಮತ್ತೊಬ್ಬ ಸ್ಪಿನ್ನರ್ ರಚಿನ್ ರವೀಂದ್ರ ಒಂದು ವಿಕೆಟ್ ಪಡೆದರು. ಅರೆಕಾಲಿಕ ಸ್ಪಿನ್ನರ್ ಗ್ಲೆನ್ ಫಿಲಿಪ್ಸ್ ತಮ್ಮ ಮೊದಲ ಎರಡು ಓವರ್​ಗಳಲ್ಲಿ ಎರಡು ವಿಕೆಟ್ ಪಡೆದರು. ಪಂದ್ಯದಲ್ಲಿ ಒಟ್ಟು 10 ವಿಕೆಟ್‌ಗಳಲ್ಲಿ ಅರ್ಧದಷ್ಟು ವಿಕೆಟ್‌ಗಳು ಸ್ಪಿನ್ನರ್‌ಗಳ ಖಾತೆಗೆ ಸೇರಿದ್ದವು. ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗಳು ಹೇಗೆ ವಿಕೆಟ್​ಗಳನ್ನು ಉರುಳಿಸಿದ್ದರು ಎಂಬುದು ಗೊತ್ತೇ ಇದೆ.

ಆಸೀಸ್ ಇನ್ನಿಂಗ್ಸ್‌ನಲ್ಲಿ ಬಿದ್ದ ಹತ್ತು ವಿಕೆಟ್‌ಗಳಲ್ಲಿ ಸ್ಪಿನ್ನರ್‌ಗಳು ಆರು ವಿಕೆಟ್ ಪಡೆದರು. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್ ಸ್ಯಾಂಟ್ನರ್ ಐದು ವಿಕೆಟ್ ಗಳಿಸಿದ್ದರು. ಅಫ್ಘಾನಿಸ್ತಾನ-ಬಾಂಗ್ಲಾದೇಶ ಪಂದ್ಯದಲ್ಲೂ ಸ್ಪಿನ್ನರ್‌ಗಳದ್ದೇ ಪ್ರಾಬಲ್ಯ. ಅಹಮದಾಬಾದ್ ಕ್ರೀಡಾಂಗಣವೇ ಸ್ಪಿನ್ನರ್‌ಗಳಿಗೆ ಸೂಕ್ತವಾಗಿದೆ. ಅದೂ ಅಲ್ಲದೇ ದೆಹಲಿ, ಕೋಲ್ಕತ್ತಾ, ಲಖನೌ, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ, ಬೆಂಗಳೂರು ಮೊದಲಾದ ಪ್ರಮುಖ ನಗರಗಳಲ್ಲಿರುವ ಎಲ್ಲಾ ಕ್ರೀಡಾಂಗಣಗಳು ಸ್ಪಿನ್‌ಗೆ ಸೂಕ್ತವಾಗಿವೆ. ಧರ್ಮಶಾಲೆಯಲ್ಲಿ ಮಾತ್ರ ಹವಾಮಾನವು ವೇಗಕ್ಕೆ ಕೊಡುಗೆ ನೀಡುತ್ತದೆ. ಹಾಗೆಂದು ಅಲ್ಲಿಯೂ ಸ್ಪಿನ್ನರ್‌ಗಳ ಪ್ರಭಾವ ಇಲ್ಲ ಎಂದಲ್ಲ.

ಭಾರತದಲ್ಲಿ ಟೂರ್ನಿ ನಡೆಯುತ್ತಿರುವುದು ಉಪಖಂಡದ ತಂಡಗಳಿಗೆ ಪ್ಲಸ್ ಆಗಿದೆ. ಸಾಂಪ್ರದಾಯಿಕವಾಗಿ ಭಾರತ ಸೇರಿದಂತೆ ಇತರ ಉಪಖಂಡದ ತಂಡಗಳು ಹೆಚ್ಚು ಸ್ಪಿನ್ ಬಲವನ್ನು ಹೊಂದಿವೆ. ಭಾರತವು ಕುಲದೀಪ್, ಜಡೇಜಾ ಮತ್ತು ಅಶ್ವಿನ್ ರೂಪದಲ್ಲಿ ಮೂರು ಗುಣಮಟ್ಟದ ಸ್ಪಿನ್ನರ್​ಗಳನ್ನು ಹೊಂದಿದೆ. ಶಾದಾಬ್, ನವಾಜ್, ಉಸಾಮಾ ಮಿರ್, ಅಘಾ ಸಲ್ಮಾನ್, ಇಫ್ತಿಕರ್.. ರಂತಹ ದೊಡ್ಡ ಸ್ಪಿನ್ ಪಡೆಯನ್ನು ಪಾಕಿಸ್ತಾನ ಹೊಂದಿದೆ. ಥಿಕ್ಷನ್, ವೆಲ್ಲಲಾಘೆ, ಧನಂಜಯ ಡಿ ಸಿಲ್ವಾ ಮತ್ತು ಅಸಲಂಕಾ ಶ್ರೀಲಂಕಾಕ್ಕೆ ಲಭ್ಯವಿದ್ದಾರೆ. ಬಾಂಗ್ಲಾದೇಶಕ್ಕೆ ಶಕೀಬ್ ದೊಡ್ಡ ಶಕ್ತಿ ಆಗಿದ್ದಾರೆ.

ಮೆಹದಿ ಹಸನ್ ಮಿರಾಜ್ ಮತ್ತು ಮೆಹದಿ ಹಸನ್ ಅವರಂತಹ ಉತ್ತಮ ಸ್ಪಿನ್ನರ್‌ಗಳೂ ಇದ್ದಾರೆ. ಆದರೆ, ವಿದೇಶಿ ತಂಡಗಳಿಗೂ ಕಡಿಮೆ ಸ್ಪಿನ್ ಶಕ್ತಿ ಇಲ್ಲ. ಅಫ್ಘಾನಿಸ್ತಾನ ತಂಡದಲ್ಲಿ ರಶೀದ್ ಖಾನ್, ಮುಜಿಬುರ್ ರೆಹಮಾನ್, ನಬಿ, ನೂರ್ ಅಹ್ಮದ್ ಅಪಾಯಕಾರಿ ಎಂದು ತಿಳಿದುಬಂದಿದೆ. ನ್ಯೂಜಿಲೆಂಡ್ ತಂಡದಲ್ಲಿ ಸ್ಯಾಂಟ್ನರ್, ರಚಿನ್ ರವೀಂದ್ರ ಮತ್ತು ಇಶ್ ಸೋಧಿ ಅಷ್ಟು ಸುಲಭವಲ್ಲ. ಇಂಗ್ಲೆಂಡ್ ಪರ ರಶೀದ್, ಮೊಯಿನಾ ಅಲಿ, ಲಿವಿಂಗ್ ಸ್ಟನ್, ದಕ್ಷಿಣ ಆಫ್ರಿಕಾ ಪರ ಶಮ್ಸಿ, ಕೇಶವ್ ಮಹಾರಾಜ್, ಮಾರ್ಕ್ರಾಮ್, ಝಂಪಾ, ಅಗರ್, ಲಬುಶಾನೆ ಆಸ್ಟ್ರೇಲಿಯಾ ಪರ ಸ್ಪಿನ್ ಸೇವೆ ನೀಡಲಿದ್ದಾರೆ.

ಓದಿ:ICC Cricket World Cup 2023: ದೊಡ್ಡ ಹೋರಾಟಗೂ ಮುನ್ನ ಚಿಕ್ಕ ಪರೀಕ್ಷೆ.. ಇಂದು ಭಾರತ - ಅಫ್ಘಾನಿಸ್ತಾನ ಮಧ್ಯೆ ಕದನ

ABOUT THE AUTHOR

...view details