ಕರ್ನಾಟಕ

karnataka

ETV Bharat / sports

ನಾನು ಮೊದಲಿಗಿಂತ ಪ್ರತಿದಿನ ಬಲಿಷ್ಠನಾಗುತ್ತಿದ್ದೇನೆ: ಕ್ರಿಕೆಟಿಗ ಟಿ.ನಟರಾಜನ್ - ಟಿ ನಟರಾಜನ್

ಎಸ್​ಆರ್​ಹೆಚ್​ ಯಾರ್ಕರ್ ಸ್ಪೆಷಲಿಸ್ಟ್​ ಟಿ.ನಟರಾಜನ್ ಗಾಯದ ಕಾರಣ 2021ರ ಐಪಿಎಲ್​ನಿಂದ ಹೊರ ಬಿದ್ದಿದ್ದರು. ಅವರಿಗೆ ಈ ಗಾಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗಲೇ ಆಗಿತ್ತಾದರೂ ಹೆಚ್ಚು ತೊಂದರೆ ನೀಡಿರಲಿಲ್ಲ. ಬಳಿಕ ನೋವು ಹೆಚ್ಚಾಗಿದ್ದರಿಂದ ಟೂರ್ನಿಯಿಂದ ಹೊರ ಹೋಗಿದ್ದರು.

ಟಿ ನಟರಾಜನ್
ಟಿ ನಟರಾಜನ್

By

Published : May 16, 2021, 2:22 PM IST

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್​ನ 14ನೇ ಆವೃತ್ತಿಯಿಂದ ಹೊರಗುಳಿದಿದ್ದ ಭಾರತ ತಂಡ ಹಾಗೂ ಸನ್​ರೈಸರ್ಸ್ ಹೈದರಾಬಾದ್​ ತಂಡದ ವೇಗಿ ಟಿ.ನಟರಾಜನ್​ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರು. ಈಗ ಅವರು ಚೇತರಿಕೆ ಕಾಣುತ್ತಿದ್ದಾರೆ.

ಈ ಬಗ್ಗೆ ನಟರಾಜನ್​ ಇನ್‌ಸ್ಟಾಗ್ರಾಂನಲ್ಲಿ ತಾವು ವರ್ಕೌಟ್​ ಮಾಡುವ ವಿಡಿಯೋ ಹಂಚಿಕೊಂಡು, "ನಾನು ಮೊದಲಿಗಿಂತ ಪ್ರತಿದಿನ ಸ್ಟ್ರಾಂಗ್​ ಆಗುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ನಟರಾಜನ್​ ಇನ್​ ಸ್ಟಾಗ್ರಾಂ ಪೋಸ್ಟ್​

ಕಳೆದ ವರ್ಷ ತನ್ನ ಯಾರ್ಕರ್​ಗಳ ಮೂಲಕ ವಿಶ್ವ ಕ್ರಿಕೆಟ್​ನ ಗಮನ ಸೆಳೆದಿದ್ದ 30 ವರ್ಷದ ವೇಗಿ ಯುಎಇನಲ್ಲಿ ನಡೆದಿದ್ದ ಟೂರ್ನಿಯಲ್ಲಿ 16 ವಿಕೆಟ್ ಪಡೆದಿದ್ದರು. ಈ ಅದ್ಭುತ ಪ್ರದರ್ಶನದ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಸ್ವರೂಪದ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಈ ಬಾರಿಯ ಐಪಿಎಲ್​ನಲ್ಲಿ ಕೇವಲ ಎರಡು ಪಂದ್ಯಗಳನ್ನಾಡಿದ್ದು, 2 ವಿಕೆಟ್​​ ಪಡೆದಿದ್ದರು.

ABOUT THE AUTHOR

...view details