ಕರ್ನಾಟಕ

karnataka

ETV Bharat / sports

ವಿಶ್ವದಾದ್ಯಂತ ಲೀಗ್​ ಆಡಿದ್ದೇನೆ, ಆದ್ರೆ ಐಪಿಎಲ್​ ಲೆವೆಲ್​ಗೆ ಯಾವುದು ಇಲ್ಲ: ತಿಸಾರ ಪೆರೆರಾ

ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಪರ ನಾನು ಆಡಿದ 2010ರ ಐಪಿಎಲ್ ತುಂಬಾ ವಿಶೇಷವಾದದ್ದು, ನಾವು ಆ ವರ್ಷ ಚಾಂಪಿಯನ್ ಆಗಿದ್ದೆವು. ನನ್ನ ಮೊದಲ ಆವೃತ್ತಿಯಾದರೂ ಅದು ನನಗೆ ಅತ್ಯುತ್ತಮ ವರ್ಷವಾಗಿತ್ತು. ನನಗೆ ಅವಾಗ ಕೇವಲ 20-21 ವರ್ಷವಾಗಿತ್ತು, ಚಾಂಪಿಯನ್​ ತಂಡದಲ್ಲಿ ಅಡಿದ್ದು ತುಂಬಾ ಮಜವಾಗಿತ್ತು ಎಂದು ದಶಕದ ನೆನಪನ್ನು ಮೆಲುಕು ಹಾಕಿದರು.

Thisara Perera IPL
ತಿಸಾರಾ ಪೆರೆರಾ ಐಪಿಎಲ್

By

Published : Feb 1, 2022, 8:17 PM IST

ಢಾಕಾ:ತನ್ನ 32 ವರ್ಷ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಕೇವಲ ಫ್ರಾಂಚೈಸಿ ಲೀಗ್​ನಲ್ಲಿ ಆಡುತ್ತಿರುವ ಶ್ರೀಲಂಕಾ ತಂಡ ಮಾಜಿ ಆಲ್​ರೌಂಡರ್​ ತಿಸಾರಾ ಪೆರೆರಾ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬ್ರೆಟ್​ ಲೀ, ಲಸಿತ್​ ಮಾಲಿಂಗ ಮತ್ತು ವನಿಡು ಹಸರಂಗ ಜೊತೆಯಲ್ಲಿ ಏಕದಿನ ಮತ್ತು ಟಿ20 ಎರಡರಲ್ಲೂ ಹ್ಯಾಟ್ರಿಕ್​ ಸಾಧನೆ ಮಾಡಿರುವ ದಾಖಲೆ ಹೊಂದಿರುವ ಪೆರೆರಾ ಬ್ಯಾಟಿಂಗ್​ನಲ್ಲಿ ವೇಗದ ಶತಕ ಸಿಡಿಸಿದ ಶ್ರೀಲಂಕಾದ 3ನೇ ಬ್ಯಾಟರ್​ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಟಿ20 ಕ್ರಿಕೆಟ್​​ನಲ್ಲಿ 312 ಪಂದ್ಯಗಳನ್ನಾಡಿರುವ ಅನುಭವಿ 2022ರ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಆಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಖಾಸಗಿ ಚಾನಲ್​ಗೆ ನೀಡಿದ ಸಂದರ್ಶನದಲ್ಲಿ 2010ರಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ ಅನುಭವವನ್ನು ಮೆಲುಕು ಹಾಕಿದ ಶ್ರೀಲಂಕನ್​, ಆ ವರ್ಷ ನಾನು ಸಾಕಷ್ಟು ಆನಂದಿಸಿದ್ದೆ ಎಂದು ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಪರ ನಾನು ಆಡಿದ 2010ರ ಐಪಿಎಲ್ ತುಂಬಾ ವಿಶೇಷವಾದದ್ದು, ನಾವು ಆ ವರ್ಷ ಚಾಂಪಿಯನ್ ಆಗಿದ್ದೆವು. ನನ್ನ ಮೊದಲ ಆವೃತ್ತಿಯಾದರೂ ಅದು ನನಗೆ ಅತ್ಯುತ್ತಮ ವರ್ಷವಾಗಿತ್ತು. ನನಗೆ ಅವಾಗ ಕೇವಲ 20-21 ವರ್ಷವಾಗಿತ್ತು, ಚಾಂಪಿಯನ್​ ತಂಡದ ಜೊತೆ ನಾನು ಪ್ರೀತಿಸುವ ಆಟ ತುಂಬಾ ಮಜವಾಗಿತ್ತು ಎಂದು ದಶಕದ ನೆನಪನ್ನು ಮೆಲುಕು ಹಾಕಿದರು.

ಐಪಿಎಲ್ ಲೆವೆಲ್​ಗೆ ಯಾವುದೇ ಲೀಗ್​ ಇಲ್ಲ:ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ 37 ಪಂದ್ಯಗಳನ್ನಾಡಿರುವ ಶ್ರೀಲಂಕಾದ ಆಟಗಾರ, ನಾನು ವಿಶ್ವದಾದ್ಯಂತ ಸಾಕಷ್ಟು ಫ್ರಾಂಚೈಸಿ ಕ್ರಿಕೆಟ್​ ಆಡಿದ್ದೇನೆ. ಐಪಿಎಲ್​ ಲೆವೆಲ್​ಗೆ ಯಾವುದೇ ಒಂದು ಲೀಗ್​ ಹೊಂದಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಪೆರೆರಾ ತಿಳಿಸಿದ್ದಾರೆ.

50 ಲಕ್ಷ ಮೂಲಬೆಲೆ:ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ನಾಯಕತ್ವ ವಹಿಸಿ ಸತತ 2ನೇ ಬಾರಿ ಜಫ್ನಾ ಕಿಂಗ್ಸ್​ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿರುವ ಪರೆರಾ 2022ರ ಮೆಗಾ ಹರಾಜಿನಲ್ಲಿ ಆಲ್​ರೌಂಡರ್ ವಿಭಾಗದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು, 50 ಲಕ್ಷ ರೂಪಾಯಿ ಮೂಲಬೆಲೆ ಘೋಷಿಸಿಕೊಂಡಿದ್ದಾರೆ. ಪ್ರಸ್ತುತ ಅತ್ಯುತ್ತಮ ಫಾರ್ಮ್​ನಲ್ಲಿರುವ ತಮ್ಮ ಹರಾಜಿನಲ್ಲಿ ಖಂಡಿತ ಯಾವುದಾದರು ಒಂದು ಫ್ರಾಂಚೈಸಿ ಖರೀದಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:IPL Auction 2022: ಫೈನಲ್​​​ ಲಿಸ್ಟ್​​ನಲ್ಲಿ ಪಶ್ಚಿಮ ಬಂಗಾಳ ಸಚಿವರ ಹೆಸರು!

ABOUT THE AUTHOR

...view details