ಐಪಿಎಲ್ 2023 ಮಿನಿ ಹರಾಜಿನಿಂದ ಹೊರಗುಳಿದ ನಂತರ, ಸ್ಟಾರ್ ಆಸ್ಟ್ರೇಲಿಯನ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್‌ನಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ. ಸ್ಮಿತ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಐಪಿಎಲ್ನ ಪಾಲುದಾರಿಕೆ ಬಗ್ಗೆ ಘೋಷಣೆ ಮಾಡಿದ್ದಾರೆ. ಅವರು ಯಾವ ತಂಡವನ್ನು ಪ್ರತಿನಿಧಿಸುತ್ತಾರೆ ಎಂಬುದು ಇನ್ನೂ ಕುತೂಹಲಕಾರಿಯಾಗಿಯೇ ಇದೆ.
ಟ್ವಿಟರ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಸ್ಟೀವ್ ಸ್ಮಿತ್, "ನಮಸ್ತೆ ಇಂಡಿಯಾ! ನಾನು ನಿಮಗಾಗಿ ಕೆಲವು ರೋಚಕ ಸುದ್ದಿಗಳನ್ನು ಹೇಳಲಿದ್ದೇನೆ. ನಾನು ಐಪಿಎಲ್ 2023 ಭಾಗವಾಗುತ್ತಿದ್ದೇನೆ. ಹೌದು, ಅದು ಸರಿ, ನಾನು ಭಾರತದಲ್ಲಿ ಅಸಾಧಾರಣ ಮತ್ತು ಭಾವೋದ್ರಿಕ್ತ ತಂಡವನ್ನು ಸೇರುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅದ್ರೆ ಯಾವ ತಂಡಕ್ಕೆ ಎಂಬ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ.
ಐಪಿಎಲ್‌ನಲ್ಲಿರುವ ಹತ್ತು ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಮಾತ್ರ ತಮ್ಮ ತಂಡದಲ್ಲಿ ಒಂದು ವಿದೇಶಿ ಸ್ಥಾನವನ್ನು ಉಳಿಸಿಕೊಂಡಿವೆ. ಎರಡೂ ತಂಡಗಳು ಬಲಿಷ್ಠ ಲೈನ್-ಅಪ್‌ಗಳನ್ನು ಹೊಂದಿವೆ ಮತ್ತು ಸ್ಮಿತ್ ಅವರ ಸೇರ್ಪಡೆಯು ಅವರ ಬ್ಯಾಟಿಂಗ್‌ಗೆ ಮತ್ತಷ್ಟು ಬಲವನ್ನು ನೀಡಲಿದೆ. ಸ್ಮಿತ್ ಅವರ ಸೇರ್ಪಡೆಯು ಎರಡು ತಂಡದಲ್ಲಿ ಆಡುವ 11ರಲ್ಲಿ ಒಬ್ಬ ವಿದೇಶಿ ಆಟಗಾರನನ್ನು ಕೈ ಬಿಡಬೇಕಾಗುತ್ತದೆ.
ಆಟಗಾರನಾಗಿ ಐಪಿಎಲ್‌ನಲ್ಲಿ ಭಾಗವಹಿಸುವುದರ ಹೊರತಾಗಿ, ಸ್ಮಿತ್ ಪಂದ್ಯಾವಳಿಯ ಕಾಮೆಂಟರಿ ಪ್ಯಾನೆಲ್‌ಗೆ ಸಹ ಸೇರಬಹುದು. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ನ ಅನುಭವ ಮತ್ತು ಆಟದಲ್ಲಿನ ಪರಿಣತಿಯು ಅವರನ್ನು ಕಾಮೆಂಟರಿ ಬಾಕ್ಸ್‌ಗೆ ಸೂಕ್ತ ಅಭ್ಯರ್ಥಿಯನ್ನಾಗಿ ಮಾಡುತ್ತದೆ. ಕಾಮೆಂಟರಿ ಬಾಕ್ಸ್‌ನಲ್ಲಿ ಸ್ಮಿತ್ ಉಪಸ್ಥಿತಿಯ ಬಗ್ಗೆ ಅಭಿಮಾನಿಗಲು ಟ್ವಿಟ್ಗೆ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಸ್ಮಿತ್ ಅವರು ಮುಂದಿನ ಅಪ್ಡೇಟ್ ಎಂದು ಕೊಡಲಿದ್ದಾರೆ ಕಾದು ನೋಡಬೇಕಿದೆ.