ನವದೆಹಲಿ : ಕೊರೊನಾ ವೈರಸ್ ಎರಡನೇ ಅಲೆಯಲ್ಲಿ ಭಾರತ ತತ್ತರಿಸುತ್ತಿದೆ. ಪ್ರತಿದಿನ ಲಕ್ಷಾಂತರ ಮಂದಿಗೆ ಮಾರಕ ವೈರಸ್ ತಗಲುತ್ತಿದೆ.
ಸಾವಿರಾರು ಮಂದಿಯ ಉಸಿರನ್ನು ನಿಲ್ಲಿಸುತ್ತಿದೆ. ಭಾರತದೊಂದಿಗೆ ಕೆಲವು ರಾಷ್ಟ್ರಗಳು ವೈಮಾನಿಕ ಸಂಪರ್ಕ ಕಡಿತಗೊಳಿಸುತ್ತಿವೆ. ಅದೇ ರೀತಿ ಆಸ್ಟ್ರೇಲಿಯಾ ಕೂಡ ಮೇ 15ರವರೆಗೆ ಎಲ್ಲಾ ಪ್ರಯಾಣಿಕ ವಿಮಾನಯಾನವನ್ನು ನಿಷೇಧಿಸಿದೆ.
ನಂತರ ಭಾರತದಿಂದ ಈ 15 ದಿನಗಳಲ್ಲಿ ದೇಶಕ್ಕೆ ಆಸ್ಟ್ರೇಲಿಯಾ ನಾಗರಿಕರು ಬಂದರೆ ಅವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 66 ಸಾವಿರ ಡಾಲರ್ಗೂ ಹೆಚ್ಚಿನ ದಂಡ ವಿಧಿಸುವುದಾಗಿ ಘೋಷಣೆ ಮಾಡಿದೆ.
ಆಸ್ಟ್ರೇಲಿಯಾ ಸರ್ಕಾರದ ಈ ಕಾನೂನಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ ಮೈಕಲ್ ಸ್ಲಾಟರ್, " ನಮ್ಮ ಸರ್ಕಾರ ಆಸ್ಟ್ರೇಲಿಯನ್ನರ ಸುರಕ್ಷತೆ ಬಯಸುವುದಾದರೆ ನಮ್ಮನ್ನು ಮನೆಗೆ ಮರಳಲು ಅವಕಾಶ ಮಾಡಿಕೊಡಲಿ. ಇದೊಂದು ನಾಚಿಕೆಗೇಡಿನ ಸಂಗತಿ!!. ನಮ್ಮನ್ನು ಈ ರೀತಿ ಪರಿಗಣಿಸಲು ನಿಮಗೆ ಎಷ್ಟು ಧೈರ್ಯ.
ನನಗೆ ಐಪಿಎಲ್ನಲ್ಲಿ ಕೆಲಸ ಮಾಡಲು ಸರ್ಕಾರದ ಅನುಮತಿ ಇತ್ತು. ಆದರೆ, ಈಗ ಅದೇ ಸರ್ಕಾರಿಂದ ನಿರ್ಲಕ್ಷ್ಯವಿದೆ" ಎಂದು ಟ್ವಿಟರ್ನಲ್ಲಿ ಸ್ಲಾಟರ್ ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ಕಾರಣದಿಂದ ಆರ್ಸಿಬಿಯಲ್ಲಿದ್ದ ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಆ್ಯಂಡ್ರ್ಯೂ ಟೈ ಆಸ್ಟ್ರೇಲಿಯಾ ಸರ್ಕಾರ ಕಾನೂನನ್ನು ಹೇರುವ ಮುನ್ನವೇ ಐಪಿಎಲ್ ತೊರೆದು ಸ್ವದೇಶ ಸೇರಿಕೊಂಡಿದ್ದರು.
ಇದನ್ನು ಓದಿ:ಭಾರತದಿಂದ ವಾಪಸಾಗಲು ನಮ್ಮ ಆಟಗಾರರಿಗೆ ಚಾರ್ಟಡ್ ಫ್ಲೈಟ್ ಒದಗಿಸುವ ಯೋಜನೆಯಿಲ್ಲ: ಕ್ರಿಕೆಟ್ ಆಸ್ಟ್ರೇಲಿಯಾ