ಲಾಹೋರ್(ಪಾಕಿಸ್ತಾನ):ವೇಗಿ ಮ್ಯಾಟ್ ಹೆನ್ರಿ ಹ್ಯಾಟ್ರಿಕ್ ಸಾಧನೆಯ ನಡುವೆಯೂ ಪಾಕಿಸ್ತಾನ ವಿರುದ್ಧದ ಮೊದಲ ಟಿ-20ಯಲ್ಲಿ ನ್ಯೂಜಿಲ್ಯಾಂಡ್ ಹೀನಾಯ ಸೋಲು ಅನುಭವಿಸಿದೆ. ಹೆನ್ರಿ ಹ್ಯಾಟ್ರಿಕ್ ವಿಕೆಟ್ ಗಳಿಸಿದ ನ್ಯೂಜಿಲ್ಯಾಂಡ್ನ ಮೂರನೇ ಬೌಲರ್ ಎನಿಸಿಕೊಂಡರು.
ಲಾಹೋರ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ನ್ಯೂಜಿಲ್ಯಾಂಡ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಇದರ ಮಧ್ಯೆಯೂ ಮ್ಯಾಟ್ ಹೆನ್ರಿ ವಿಶೇಷ ಸಾಧನೆ ಗಮನ ಸೆಳೆಯಿತು. 13 ನೇ ಓವರ್ನ ಕೊನೆಯ 2 ಎಸೆತಗಳಲ್ಲಿ ಇಬ್ಬರು ಆಟಗಾರರನ್ನು ಹೆನ್ರಿ ಔಟ್ ಮಾಡಿದರು. 5 ರನ್ ಗಳಿಸಿದ್ದ ಶಾದಾಬ್ ಖಾನ್ ಕಿವೀಸ್ನ ಟಾಮ್ ಲಾಥಮ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಇಫ್ತಿಕಾರ್ ಅಹ್ಮದ್ ಕೂಡ ಪೆವಿಲಿಯನ್ ಸೇರಿದರು. ಇದರಿಂದ ಹೆನ್ರಿ ಹ್ಯಾಟ್ರಿಕ್ ಅವಕಾಶ ಪಡೆದುಕೊಂಡರು.
ಇದಾದ ಬಳಿಕ 18 ನೇ ಓವರ್ ಎಸೆಯಲು ಬಂದ ಕಿವೀಸ್ ವೇಗಿ ಮೊದಲ ಎಸೆತದಲ್ಲೇ ಶಾಹೀನ್ ಆಫ್ರಿದಿ ವಿಕೆಟ್ ಪಡೆದು ಹ್ಯಾಟ್ರಿಕ್ ವಿಕೆಟ್ ಕಿತ್ತರು. ಹೆನ್ರಿ 4 ಓವರ್ಗಳಲ್ಲಿ 32 ರನ್ ನೀಡಿ 3 ವಿಕೆಟ್ ಪಡೆದರು. ಇದು ಅವರ ಟಿ20 ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ಮತ್ತು ನ್ಯೂಜಿಲ್ಯಾಂಡ್ ಪರವಾಗಿ ಹ್ಯಾಟ್ರಿಕ್ ಪಡೆದ ನಾಲ್ಕನೇ ಬೌಲರ್ ಎನಿಸಿಕೊಂಡರು.
ಇದಕ್ಕೂ ಮೊದಲು 2009 ರಲ್ಲಿ ಶ್ರೀಲಂಕಾ ವಿರುದ್ಧ ಜಾಕೋಬ್ ಓರಂ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಇದು ಚುಟುಕು ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಕಿವೀಸ್ ಆಟಗಾರ ಎಂಬ ದಾಖಲೆ ಬರೆದರು. ಇದಾದ ಬಳಿಕ 2010 ರಲ್ಲಿ ಟಿಮ್ ಸೌಥಿ ಪಾಕಿಸ್ತಾನದ ವಿರುದ್ಧ ತ್ರಿವಳಿ ವಿಕೆಟ್ ಪಡೆದು ಎರಡನೇ ಬೌಲರ್ ಆದರು.