ಚೆನ್ನೈ, ತಮಿಳುನಾಡು: ಕೆಎಲ್ ರಾಹುಲ್ ಅವರ 97 ರನ್‌ಗಳ ಅಜೇಯ ಇನ್ನಿಂಗ್ಸ್ ಮತ್ತು ವಿರಾಟ್ ಕೊಹ್ಲಿ ಅವರ 85 ರನ್‌ಗಳ ಅಮೋಘ ಇನ್ನಿಂಗ್ಸ್ ಮೂಲಕ ಭಾರತವು 2023 ರ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಆಸ್ಟ್ರೇಲಿಯಾ ನೀಡಿದ್ದ 200 ರನ್‌ಗಳ ಗುರಿಯನ್ನು ಭಾರತ 41.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿ ಗುರಿ ತಲುಪಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 49.3 ಓವರ್‌ಗಳಲ್ಲಿ 199 ರನ್‌ಗಳಿಗೆ ಆಲೌಟ್ ಆಯಿತು. ಉಭಯ ತಂಡಗಳ ನಡುವಿನ ವಿಶ್ವಕಪ್‌ನ ಮೊದಲ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಿತು.
ಭಾನುವಾರ ನಡೆದ ಪಂದ್ಯದಲ್ಲಿ ಎರಡು ಸಿಕ್ಸ್ಗಳ ಬಗ್ಗೆ ಈಗ ಚರ್ಚೆಗೆ ಕಾರಣವಾಗಿದೆ. ಒಂದು, ಹಾರ್ದಿಕ್ ಪಾಂಡ್ಯ ಸಿಡಿಸಿದ ಸಿಕ್ಸ್. ಎರಡನೆಯದು ಕೆಎಲ್ ರಾಹುಲ್ ಅವರು ಅಚಾತುರ್ಯದಿಂದ ಕೊನೆಯಲ್ಲಿ ಬಾರಿಸಿದ ಸಿಕ್ಸ್. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಇಬ್ಬರಿಗೂ ಶತಕಗಳನ್ನು ಗಳಿಸುವ ಅವಕಾಶವಿತ್ತು, ಆದರೆ, ಈ ಇಬ್ಬರೂ ಆಟಗಾರರು ಶತಕ ಬಾರಿಸುವಲ್ಲಿ ಯಶಸ್ವಿಯಾಗಲಿಲ್ಲ.
ರಾಹುಲ್ ಅವರು ಕೊಹ್ಲಿಗೆ ತಮ್ಮ ಶತಕವನ್ನು ಪಡೆಯಲು ಅವಕಾಶ ಮಾಡಿಕೊಟ್ಟರು. ಆ ಸಮಯದಲ್ಲಿ ರಾಹುಲ್ 75 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ವಿರಾಟ್ ಕೊಹ್ಲಿ 85 ರನ್ ಗಳಿಸಿ ಔಟಾದರು. ನಂತರ ಹಾರ್ದಿಕ್ ಪಾಂಡ್ಯಾ ಕಣಕ್ಕಿಳಿದರು. ಕೊಹ್ಲಿಯ ಔಟಾದ ಕಾರಣ ಭಾರತೀಯ ಅಭಿಮಾನಿಗಳು ತಮ್ಮ ಗಮನವನ್ನು ರಾಹುಲ್ ಕಡೆಗೆ ತಿರುಗಿಸಿದರು.
ರಾಹುಲ್ ಕೊನೆಯವರೆಗೂ ಕ್ರೀಸ್ನಲ್ಲಿದ್ದರು. ಅವರಿಗೆ ಶತಕ ಗಳಿಸುವ ಉತ್ತಮ ಅವಕಾಶವಿತ್ತು. ಅದಕ್ಕಾಗಿ ಅವರು ಪ್ಲಾನ್ ಕೂಡ ಮಾಡಿದ್ದರು. ಅಷ್ಟರಲ್ಲೇ ಹಾರ್ದಿಕ್ ಪಾಂಡ್ಯ ತಮ್ಮ ಆರನೇ ಎಸೆತವನ್ನು ಎದುರಿಸುತ್ತಿರುವಾಗ ಅವರು ಜೋಶ್ ಹ್ಯಾಜಲ್‌ವುಡ್ ಎಸೆತಕ್ಕೆ ಸಿಕ್ಸರ್ ಬಾರಿಸಿದರು. ಆಗ ಭಾರತದ ಸ್ಕೋರ್ 176 ಆಗಿತ್ತು. ಇದು ರಾಹುಲ್ ಶತಕಕ್ಕೆ ಕೊಂಚ ಅಡ್ಡಿ ಉಂಟು ಮಾಡಿತು.