ಕರ್ನಾಟಕ

karnataka

ETV Bharat / sports

ಹಾಕಿಯಲ್ಲಿ ಕಾಂಗರೂ ವಿರುದ್ಧ ಗೆಲುವು: ಕುಟುಂಬದೊಂದಿಗೆ ಮೋನಿಕಾ ಮಾತು, ಸಂಭ್ರಮಿಸಿದ ಗುರ್ಜಿತ್​ ಕುಟುಂಬ!

ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಗೆಲುವು ದಾಖಲು ಮಾಡಿರುವ ಭಾರತದ ಮಹಿಳಾ ತಂಡ ಸಂತೋಷದಲ್ಲಿದ್ದು, ಮುಂದಿನ ಪಂದ್ಯಕ್ಕಾಗಿ ತಯಾರಿ ನಡೆಸಿದೆ.

Women's Hockey Semifinals
Women's Hockey Semifinals

By

Published : Aug 2, 2021, 9:28 PM IST

ಅಮೃತಸರ್​(ಪಂಜಾಬ್​): ಜಪಾನ್​​ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​​ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡಿದ್ದು, ಈಗಾಗಲೇ ಸೆಮಿಫೈನಲ್​ಗೆ ಲಗ್ಗೆ ಹಾಕಿದೆ. ತಂಡದಲ್ಲಿ ಮೋನಿಕಾ ಮಲಿಕ್​ ಕೂಡ ತಮ್ಮದೇ ಕೊಡುಗೆ ನೀಡಿದ್ದು, ಇಂದು ಪೋಷಕರೊಂದಿಗೆ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.

ಕುಟುಂಬದೊಂದಿಗೆ ಮೋನಿಕಾ ಮಾತು, ಸಂಭ್ರಮಿಸಿದ ಗುರ್ಜಿತ್​ ಕುಟುಂಬ!

ವಿಡಿಯೋ ಕಾಲ್​ ಮೂಲಕ ಮಾತನಾಡಿರುವ ಮೋನಿಕಾ ಮಲಿಕ್​, ಈ ಗೆಲುವಿನೊಂದಿಗೆ ಎಲ್ಲರೂ ಸಂತೋಷದಲ್ಲಿದ್ದು, ನಾವು ಇದೀಗ ಮುಂದಿನ ಪಂದ್ಯಕ್ಕಾಗಿ ತಯಾರಾಗಬೇಕಾಗಿದೆ. ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ನಾವು ಗೆಲುವು ಸಾಧಿಸುತ್ತೇವೆ ಎಂಬುದನ್ನ ನಾವು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಎಲ್ಲರೂ ಉತ್ತಮವಾದ ಪ್ರದರ್ಶನ ನೀಡಿದ್ದರಿಂದ ಈ ಫಲಿತಾಂಶ ಹೊರಬಂದಿದೆ. ಸೆಮಿಫೈನಲ್​​ನಲ್ಲಿ ನಾವು ಅರ್ಜೆಂಟೈನಾ ವಿರುದ್ಧ ಸೆಣಸಬೇಕಾಗಬಹುದು. ಉತ್ತಮ ಪ್ರದರ್ಶನ ನೀಡಿದ್ದರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ ಎಂದರು.

ಸಿಹಿ ಹಂಚಿ ಸಂಭ್ರಮಿಸಿದ ಗುರ್ಜಿತ್​ ಕೌರ್​ ಕುಟುಂಬ

ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡದ ಗುರ್ಜಿತ್​ ಕೌರ್​ ಗೋಲು ಹೊಡೆದು, ತಂಡಕ್ಕೆ ಮೆಲುಗೈ ತಂದುಕೊಟ್ಟಿದ್ದರು. ಇದೇ ಕಾರಣದಿಂದ ತಂಡ ಸೆಮೀಸ್​ಗೆ ಲಗ್ಗೆ ಹಾಕಿದೆ. ಒಲಿಂಪಿಕ್ಸ್​​ನಲ್ಲಿ ಕೌರ್​ ಪ್ರದರ್ಶನದಿಂದ ಅವರ ಕುಟುಂಬ ಸಂತೋಷದಲ್ಲಿದೆ. ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಭಾರತೀಯ ಹಾಕಿ ತಂಡದಲ್ಲಿ ಗುರ್ಜಿತ್​ ಕೌರ್​ ಪಂಜಾಬ್​ನ ಏಕೈಕ ಆಟಗಾರ್ತಿಯಾಗಿದ್ದು, ಇದೇ ಕಾರಣದಿಂದ ಕುಟುಂಬ ಹಾಗೂ ಗ್ರಾಮಸ್ಥರು ಸಂತೋಷದಲ್ಲಿದ್ದಾರೆ.

ಇದನ್ನೂ ಓದಿರಿ: ಈಟಿವಿ ಭಾರತ Exclusive: ಮಹಿಳಾ ಹಾಕಿ ತಂಡದ ಮಾಜಿ ಕ್ಯಾಪ್ಟನ್​ ಪ್ರೀತಮ್​​ ಸಿವಾಚ್​ ಜೊತೆ ಸಂದರ್ಶನ

ABOUT THE AUTHOR

...view details