ಕರ್ನಾಟಕ

karnataka

ETV Bharat / sports

ಪಾಟೀದಾರ್, ಕೊಹ್ಲಿ ಅರ್ಧಶತಕ: ಟೈಟನ್ಸ್​ಗೆ 171ರನ್​ಗಳ ಸ್ಪರ್ದಾತ್ಮಕ ಗುರಿ ನೀಡಿದ ಆರ್​ಸಿಬಿ - ಜಿಟಿ vs ಆರ್​ಸಿಬಿ ಲೈವ್ ಮ್ಯಾಚ್

ಆರ್​ಸಿಬಿ ರಜತ್​ ಪಾಟೀದಾರ್​ 32 ಎಸೆತಗಳಲ್ಲಿ 52 ರನ್ ಮತ್ತು ಕೊಹ್ಲಿ 53 ಎಸೆತಗಳಲ್ಲಿ 58 ರನ್ ಗಳ ನೆರವಿನಿಂದ ಗುಜರಾತ್​ ಟೈಟನ್ಸ್​ಗೆ 171 ರನ್​ಗಳ ಗುರಿ ನೀಡಿದೆ.

ಟೈಟನ್ಸ್​ಗೆ 171ರನ್​ಗಳ  ಸ್ಪರ್ದಾತ್ಮಕ ಗುರಿ ನೀಡಿದ ಆರ್​ಸಿಬಿ
ಟೈಟನ್ಸ್​ಗೆ 171ರನ್​ಗಳ ಸ್ಪರ್ದಾತ್ಮಕ ಗುರಿ ನೀಡಿದ ಆರ್​ಸಿಬಿ

By

Published : Apr 30, 2022, 3:15 PM IST

Updated : Apr 30, 2022, 6:05 PM IST

ಮುಂಬೈ: ಮಾಜಿ ನಾಯಕ ವಿರಾಟ್​ ಕೊಹ್ಲಿ ಮತ್ತು ರಜತ್​ ಪಾಟೀದಾರ್ ಅವರ ಜವಾಬ್ದಾರಿಯುತ ಅರ್ಧಶತಕ ಮತ್ತು ಮ್ಯಾಕ್ಸ್​ವೆಲ್​​ರ 33 ರನ್​ಗಳ ಸ್ಫೋಟಕ ಇನ್ನಿಂಗ್ಸ್ ನೆರವಿನಿಂದ ರಾಯಲ್​ ಚಾಲೆಂಜರ್ಸ್ ಬೆಂಗಳೂರು 20 ಓವರ್​ಗಳಲ್ಲಿ ವಿಕೆಟ್ ಕಳೆದುಕೊಂಡು 170 ರನ್​ಗಳಿಸಿದೆ.

ಇಲ್ಲಿನ ಬ್ರಬೋರ್ನ್​ ಸ್ಟೇಡಿಯಂನಲ್ಲಿ ಟಾಸ್ ಗೆದ್ದು​ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್​ಸಿಬಿಗೆ ಪ್ರದೀಪ್ ಸಂಗ್ವಾನ್ ತಮ್ಮ ಮೊದಲ ಓವರ್​ ನಲ್ಲೇ ನಾಯಕ ಫಾಫ್​ ಡು ಪ್ಲೆಸಿಸ್​ ವಿಕೆಟ್ ಪಡೆದು ಆಘಾತ ನೀಡಿದರು. ಆದರೆ ನಂತರ ಕೊಹ್ಲಿ ಮತ್ತು ರಜತ್ ಪಾಟೀದಾರ್​ 2ನೇ ವಿಕೆಟ್​ಗೆ 100 ರನ್​ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು.

32 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 52 ರನ್​ಗಳಿಸಿದ್ದ ರಜತ್​ರನ್ನು ಸಂಗ್ವಾನ್ ಪೆವಿಲಿಯನ್​ಗಟ್ಟಿದರೆ, ಇದರ ಬೆನ್ನಲ್ಲೇ 53 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 58 ರನ್​ಗಳಿಸಿದ್ದ ಕೊಹ್ಲಿ ಶಮಿ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್​ ಆದರು.

ಆರ್​ಸಿಬಿಯ ಆಪತ್ಭಾಂದವ ದಿನೇಶ್ ಕಾರ್ತಿಕ್(2)​ ಇಂದಿನ ಪಂದ್ಯದಲ್ಲಿ ವಿಫಲರಾದರು. ಆದರೆ ಮ್ಯಾಕ್ಸ್​ವೆಲ್​ 18 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 33 ಮತ್ತು ಲೋಮ್ರೋರ್​ 8 ಎಸೆತಗಳಲ್ಲಿ 16 ರನ್​ ಸಿಡಿಸಿ ತಂಡದ ಮೊತ್ತವನ್ನು 170ಕ್ಕೆ ಹೆಚ್ಚಿಸಿದರು.

ಗುಜರಾತ್ ಪರ ಪ್ರದೀಪ್ ಸಂಗ್ವಾನ್ 29ಕ್ಕೆ 2 ವಿಕೆಟ್ ಪಡೆದರೆ, ಶಮಿ 39ಕ್ಕೆ1, ಜೋಶೆಫ್​ 42ಕ್ಕೆ1, ರಶೀದ್ ಖಾನ್ 29ಕ್ಕೆ 1 ಮತ್ತು ಫರ್ಗುಸನ್ 36ಕ್ಕೆ1 ವಿಕೆಟ್ ಪಡೆದರು.

ಟೀಮ್ ಅಪ್​ಡೇಟ್​:ಆರ್​​ಸಿಬಿ ಪರ ಸುಯಶ್ ಪ್ರಭುದೇಸಾಯಿ ಬದಲಿಗೆ ಮಹಿಪಾಲ್​ ಲೋಮ್ರೋರ್ ಕಣಕ್ಕಿಳಿದಿದ್ದರೆ, ಗುಜರಾತ್ ಪರ ಅಭಿನವ್ ಮನೋಹರ್ ಬದಲಿಗೆ ಸಾಯಿ ಸುದರ್ಶನ್ ಮತ್ತು ಗಾಯಗೊಂಡಿರುವ ಯಸ್​ ದಲಾಲ್​ ಬದಲಿಗೆ ಪ್ರದೀಪ್ ಸಂಗ್ವಾನ್ ಕಣಕ್ಕಿಳಿದಿದ್ದಾರೆ.

ಟೂರ್ನಿಯಲ್ಲಿ ಎರಡೂ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಟೈಟನ್ಸ್​ 8 ಪಂದ್ಯಗಳಲ್ಲಿ 1 ಪಂದ್ಯ ಗೆದ್ದು 14 ಅಂಕ ಪಡೆದು ಅಗ್ರಸ್ಥಾನದಲ್ಲಿದ್ದರೆ, ಆರ್​ಸಿಬಿ 9 ಪಂದ್ಯಗಳಲ್ಲಿ 4 ಸೋಲು ಮತ್ತು 5 ಗೆಲುವು ದಾಖಲಿಸಿ 5ನೇ ಸ್ಥಾನದಲ್ಲಿದೆ.

ಗುಜರಾತ್ ಟೈಟನ್ಸ್ : ವೃದ್ಧಿಮಾನ್ ಸಹಾ (ವಿಕೀ), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ಸಾಯಿ ಸುದರ್ಸನ್​, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಪ್ರದೀಪ್ ಸಂಗ್ವಾನ್, ಮೊಹಮ್ಮದ್ ಶಮಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೋಮ್ರೋರ್, ರಜತ್ ಪಾಟಿದಾರ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೀ), ವನಿಂಡು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ಮೊಹಮ್ಮದ್ ಸಿರಾಜ್

Last Updated : Apr 30, 2022, 6:05 PM IST

ABOUT THE AUTHOR

...view details