ಜೋಹಾನ್ಸ್‌ಬರ್ಗ್: ಜೂನ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡಿಸ್ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ, ನಿವೃತ್ತಿ ಘೋಷಿಸಿರುವ ಎಬಿ ಡಿ ವಿಲಿಯರ್ಸ್ ಹಾಗೂ ಹಿರಿಯ ಬೌಲರ್ಗಳಾದ ಕ್ರಿಸ್ ಮೋರಿಸ್ ಮತ್ತು ಇಮ್ರಾನ್ ತಾಹೀರ್ಗೆ ಅವಕಾಶ ನೀಡುವ ಅವಕಾಶ ನೀಡುವ ಸಾಧ್ಯತೆಯನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಡೈರೆಕ್ಟರ್ ಗ್ರೇಮ್ ಸ್ಮಿತ್ ತಿಳಿಸಿದ್ದಾರೆ.
ಜೂನ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ 5 ಟಿ-20 ಪಂದ್ಯಗಳು ಮತ್ತು 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಆದರೆ, ಈ ಸರಣಿಗೆ ಸ್ಥಳಗಳನ್ನು ಇನ್ನು ಅಂತಿಮಗೊಳಿಸಿಲ್ಲ ಎಂದು ತಿಳಿದುಬಂದಿದೆ.
ಇನ್ನು ಭಾರತದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ ತಯಾರಿಗಾಗಿ ಬಲಿಷ್ಠ ತಂಡವನ್ನು ಕಟ್ಟುವ ಯೋಜನೆಯಲ್ಲಿದ್ದು, ಸಿಎಸ್ಎ ಒಪ್ಪಂದದಿಂದ ಹೊರಗುಳಿದಿರುವ ಕ್ರಿಸ್ ಮೋರಿಸ್ ಮತ್ತು ಇಮ್ರಾನ್ ತಾಹೀರ್ ತಂಡದಲ್ಲಿ ಆಡಲಿದ್ದಾರೆ, ಜೊತೆಗೆ ನಿವೃತ್ತಿ ಘೋಷಿಸಿರುವ ಎಬಿ ಡಿ ವಿಲಿಯರ್ಸ್ ಕೂಡ ವಿಂಡೀಸ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಸ್ಮಿತ್ ಗುರುವಾರ ತಿಳಿಸಿದ್ದಾರೆ.
ಎಬಿ ಡಿ ವಿಲಿಯರ್ಸ್ 2018ರಲ್ಲಿ ದಕ್ಷಿಣ ಆಫ್ರಿಕಾ ಪರ ಕೊನೆಯದಾಗಿ ಕಾಣಿಸಿಕೊಂಡಿದ್ದರು. 2019ರ ವಿಶ್ವಕಪ್ಗೂ ಮುನ್ನ ಕಮ್ಬ್ಯಾಕ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದರಾದರೂ ಸಿಎಸ್ಎ ಅವಕಾಶ ನೀಡಿರಲಿಲ್ಲ. ಆದರೆ 37 ವರ್ಷದ ಬ್ಯಾಟ್ಸ್ಮನ್ ಅದ್ಭುತ ಫಾರ್ಮ್ನಲ್ಲಿದ್ದು, ವಿಶ್ವಕಪ್ನಲ್ಲಿ ತಂಡಕ್ಕೆ ಆಧಾರವಾಗಲಿದ್ದಾರೆ.
ಎಬಿಡಿ 228 ಏಕದಿನ ಪಂದ್ಯಗಳಿಂದ 9577 ರನ್, 78 ಟಿ20 ಪಂದ್ಯಗಳಿಂದ 1672 ರನ್ ಬಾರಿಸಿದ್ದಾರೆ.